2026 ಫೆಬ್ರವರಿ ಎರಡನೇ ವಾರ ಇದಾಗಿದ್ದರೆ ಕುಜನು ತನ್ನ ಉಚ್ಚಕ್ಷೇತ್ರವಾದ ಮಕರದಲ್ಲಿ ಹಾಗೂ ರವಿ, ಬುಧ, ಶುಕ್ರ, ರಾಹುಗಳು ಕುಂಭದಲ್ಲಿ ಇರುವರು. ಉತ್ಸಾಹವು ಎಲ್ಲರಲ್ಲಿಯೂ ಅಧಿಕವಾಗಿ ಎಲ್ಲರಿಗೂ ಇರುತ್ತದೆ ಅದನ್ನು ಸರಿಯಾದ ಕಡೆಗೆ ಬಳಸಿಕೊಳ್ಳುವ ಚಾಕಚಕ್ಯತೆ ಬುದ್ಧಿಗೆ ಬೇಕು. ಆ ವಿಚಾರದಲ್ಲಿ ಹಿನ್ನಡೆ ಸಾಧ್ಯತೆ ಇದೆ. ಪೂರ್ವಾಪರ ಯೋಚನೆ ಯೋಜನೆ ಇರಲಿ.
ಮೇಷ:
ನಿಮ್ಮ ಅದ್ಭುತ ಶಕ್ತಿ ಆಟೋಟಗಳಲ್ಲಿ ಮಿಂಚಲು ಸಹಕಾರಿ. ಅತಿಯಾದ ಅವಸರ ಬಿಟ್ಟು ಓದಿನತ್ತ ಗಮನಹರಿಸಿ, ನಾಯಕತ್ವದ ಗುಣಗಳು ನಿಮ್ಮನ್ನು ಗುರುತಿಸುವಂತೆ ಮಾಡುತ್ತವೆ.
ವೃಷಭ:
ನಿಮ್ಮ ಹಠವನ್ನೇ ಸಾಧನೆಯ ಹಾದಿಯಾಗಿಸಿ. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಆಹಾರದ ಬಗ್ಗೆ ಸ್ವಲ್ಪ ಜಾಗ್ರತೆ ಇರಲಿ.
ಮಿಥುನ:
ಮಾತುಗಾರಿಕೆಯೇ ನಿಮ್ಮ ಬಲ. ಹೊಸ ವಿಷಯಗಳನ್ನು ಕಲಿಯುವ ಹಂಬಲ ಹೆಚ್ಚಲಿದೆ. ಗೊಂದಲ ಬಿಟ್ಟು ಗುರಿಯತ್ತ ಗಮನಹರಿಸಿದರೆ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ನಿಮ್ಮದಾಗಲಿವೆ.
ಕರ್ಕಾಟಕ:
ನೀವು ಬಹಳ ಭಾವುಕರು, ಇದನ್ನು ಕಲ್ಪನಾಶಕ್ತಿಗೆ ಬಳಸಿ. ಬರವಣಿಗೆ ಅಥವಾ ಚಿತ್ರಕಲೆಯಲ್ಲಿ ಪ್ರಗತಿ ಇದೆ. ಮನೆಯವರ ಬೆಂಬಲ ನಿಮ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ.
ಸಿಂಹ:
ವೇದಿಕೆಯ ಮೇಲೆ ಮಿಂಚುವ ಅವಕಾಶ ಸಿಗಲಿದೆ. ನಿಮ್ಮ ಆತ್ಮವಿಶ್ವಾಸ ಎಲ್ಲರ ಗಮನ ಸೆಳೆಯುತ್ತದೆ. ಹಿರಿಯರ ಮಾತಿಗೆ ಗೌರವ ನೀಡಿ, ಶಿಸ್ತಿನಿಂದ ದೊಡ್ಡ ಗುರಿ ತಲುಪುತ್ತೀರಿ.
ಕನ್ಯಾ:
ನಿಮ್ಮ ಚುರುಕುತನ ಗಣಿತ ಮತ್ತು ವಿಜ್ಞಾನದಲ್ಲಿ ಯಶಸ್ವಿಯಾಗಿದೆ. ವಿಷಯಗಳನ್ನು ತೋರಿಸುವ ನಿಮ್ಮ ಗುಣವು ಎಲ್ಲರಿಗಿಂತ ಮುಂದೆ ಇರಿಸುತ್ತದೆ. ಅತಿಯಾದ ಯೋಚನೆ ಮಾಡುವುದನ್ನು ಬಿಡಿ.
ತುಲಾ:
ಎಲ್ಲರೊಂದಿಗೆ ಬೆರೆಯುವ ನಿಮ್ಮ ಸ್ವಭಾವಕ್ಕೆ ಮನ್ನಣೆ ಸಿಗಲಿದೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಸಮತೋಲಿತ ಜೀವನಶೈಲಿ ನಿಮ್ಮ ಆರೋಗ್ಯ ಮತ್ತು ಅಭ್ಯಾಸಕ್ಕೆ ಪೂರಕ.
ವೃಶ್ಚಿಕ:
ನಿಮ್ಮ ಏಕಾಗ್ರತೆ ಅದ್ಭುತವಾಗಿದೆ. ಸಂಶೋಧನಾತ್ಮಕ ಪ್ರವೃತ್ತಿ ಬೆಳೆಸಿಕೊಳ್ಳಿ. ಗುಪ್ತ ಪ್ರತಿಭೆಗಳು ಹೊರಬರಲಿವೆ. ಮನಸ್ಸಿನ ಹತೋಟಿ ಕಳೆದುಕೊಂಡರೆ ಮುನ್ನುಗ್ಗಿ, ಯಶಸ್ಸು ಖಚಿತ.
ಧನು:
ಸಾಹಸ ಮತ್ತು ಕ್ರೀಡೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ಹೊಸ ಜಾಗಗಳನ್ನು ನೋಡುವ ನಿರೀಕ್ಷಿಸಬಹುದು. ನಲ್ಲಿ ಏಕಾಗ್ರತೆ ಕಾಪಾಡಿಕೊಂಡರೆ ಈ ಅವಧಿಯು ಅತ್ಯಂತ ಸ್ಮರಣೀಯ ಕಾರ್ಯಕ್ರಮ.
ಮಕರ:
ನಿಮ್ಮ ಗಂಭೀರ ಸ್ವಭಾವ ಮತ್ತು ಪರಿಶ್ರಮ ಮೆಚ್ಚುವಂತದ್ದು. ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತೀರಿ. ಶ್ರದ್ಧೆಯಿಂದ ಕೆಲಸ ಮಾಡಿದರೆ ಭವಿಷ್ಯದಲ್ಲಿ ದೊಡ್ಡ ಸ್ಥಾನ ಲಭಿಸಲಿದೆ.
ಕುಂಭ:
ನೀವು ಯಾವಾಗಲೂ ವಿಭಿನ್ನವಾಗಿ ಯೋಚಿಸುತ್ತೀರಿ. ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಸಲಹೆ ಸೂಚನೆಗಳಿಗೆ ಶಿಕ್ಷಕರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ಮೀನ:
ನಿಮ್ಮ ಕನಸುಗಳು ದೊಡ್ಡದಾಗಿರುತ್ತವೆ, ಅವುಗಳನ್ನು ನನಸಾಗಿಸಲು ಶ್ರಮಿಸಿ. ದಯಾಪರತೆ ನಿಮ್ಮ ವ್ಯಕ್ತಿತ್ವವನ್ನು ಹೊಂದಿದೆ. ಏಕಾಂತದಲ್ಲಿ ಓದುವುದು ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ.
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)