ಬಳ್ಳಾರಿ, (ಡಿಸೆಂಬರ್ 22): ಗಂಡನಿಂದ ದೂರವಾದ ಮಹಿಳೆಯೊಬ್ಬರು (ಮಹಿಳೆ) ಸೆಲ್ಫಿ ವಿಡಿಯೋ ಮಾಡುತ್ತಲ್ಲೇ ನೇಣಿಗೆ ಶರಣಾಗಿರುವ ಘಟನೆ ಬಳ್ಳಾರಿಯ (ಬಳ್ಳಾರಿ) ಹುಸೇನ್ ನಡೆದಿದೆ. ತನಗಾದ ಅನ್ಯಾಯವನ್ನು ವಿಡಿಯೋದಲ್ಲಿ ಹೇಳಿಕೊಳ್ಳುತ್ತಲೇ ಮುನ್ನಿ (23) ಎಂಬ ಮಹಿಳೆ ನೇಣಿಗೆ ಕೊರಳೊಡ್ಡಿದ್ದಾಳೆ. ನಾಲ್ಕು ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಮುನ್ನಿ, ವರ್ಷದ ಹಿಂದೆ ಗಂಡನಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದಳು. ಬಳಿಕ ಮಹಮ್ಮದ್ ಶೇಕ್ಷಾವಲ್ಲಿ ಎಂಬ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಅದ್ರೆ, ಇದೀಗ ಏಕಾಏಕಿ ವಿಡಿಯೋ ಮಾಡುತ್ತಲೇ ನೇಣಿಗೆ ಶರಣಾಗಿದ್ದಾಳೆ.
ಗಂಡನಿಂದ ದೂರವಾಯಿತು
23 ವರ್ಷದ ಮುನ್ನಿ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಆದರೆ, ಅದೇನಾಯೋ ಏನೋ ಒಂದು ವರ್ಷದ ಹಿಂದೆ ಪತಿಗೆ ವಿಚ್ಛೇದನ ನೀಡಿ ಎರಡು ಮಕ್ಕಳಿಗಾಗಿ ವಾಸಿಸುತ್ತಿದ್ದಳು. ಈ ಮಧ್ಯೆ ಮಹಮ್ಮದ್ ಶೇಕ್ ಎನ್ನುವ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಅದ್ರೆ, ಇತ್ತೀಚಿಗೆ ಮಹಮ್ಮದ್ ಶೇಕ್ಷಾವಲ್ಲಿ ಹಾಗೂ ಮುನ್ನಿ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿತು. ಆಗಾಗ ಗಲಾಟೆಯೂ ಆಗುತ್ತಿದ್ದವು. ಇದೇ ಕಾರಣಕ್ಕೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ತನಗಾದ ಅನ್ಯಾಯದ ವಿವರಣೆ ನೀಡುತ್ತಲೇ ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ: ಅತ್ತ ಮದ್ವೆಯಾದ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲ: ಯುವತಿಯನ್ನು ಒಂಟಿ ಮಾಡಿದ ಆ ವಿಡಿಯೋ
ಅನೈತಿಕ ಸಂಬಂಧವೇ ಮುಳುವಾಯ್ತಾ?
ಇನ್ನೂ ಗಂಡ ಇಲ್ಲದ ಮುನ್ನಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮೆಹಂದಿ ಹಾಕೋದು ಸೇರಿದಂತೆ ಮೇಕಪ್ ಸಹ ಮಾಡುತ್ತಿದ್ದಾರೆ. ಹೀಗಿರುವಾಗ ಮುನ್ನಿ ಎರಡನೇ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆ ನಡೆದಿತ್ತು. ಆದರೆ, ಶೇಕ್ಷಾವಲಿ ಜೊತೆಗೆ ಇರೋ ಸಂಭಂದ ಮುಳುವಾಗಿ ಸಾಯುವ ಹಂತಕ್ಕೆ ಬಂದಿದೆ. ನಿನ್ನೆ (ಡಿಸೆಂಬರ್ 21) ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿಯುತ್ತಲೇ ಗಾಂಧಿ ನಗರ ಠಾಣೆಗೆ ಅಗಮಿಸಿದ ಶಾಸಕ ಭರತ್ ರೆಡ್ಡಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಅಣ್ಣನಾಗಬೇಕಿದ್ದವನ ಜತೆ ಸಂಬಂಧ
ಇನ್ನು ಶೇಕ್ಷಾವಲ್ಲಿ ಸಂಬಂಧದಲ್ಲಿ ಮೃತಳ ಅಣ್ಣನಾಗುತ್ತಾನೆ ಎನ್ನುವ ಮಾಹಿತಿಯನ್ನ ಮುನ್ನಿ ಕುಟುಂಬಸ್ಥರು. ಹೀಗಾಗಿ ಅನೈತಿಕ ಸಂಬಂಧ ಒಳ್ಳೆದಲ್ಲ ಅಂತ ಹಲವು ಬಾರಿ ಕುಟುಂಬಸ್ಥರು ಇಬ್ಬರಿಗೂ ತಿಳಿ ಹೇಳಿದ್ದರಂತೆ. ಆದರೆ ಇಬ್ಬರ ನಡುವೆ ನಿನ್ನೆ ಏನಾಗಿದೋಯೋ ಏನು ಮುನ್ನಿ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆಂದು ಕುಟುಂಬದವರು ಆರೋಪಿಯಾಗಿದ್ದಾರೆ. ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕವೇ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿಯಲಿದೆ.