ಪತ್ತೆಯಾದ ಮೂರನೇ ಅಸ್ಥಿಪಂಜರಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಬಳ್ಳಾರಿ, ಫೆಬ್ರವರಿ 13: ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿದೆ ಉತ್ಖನನದ (ಉತ್ಖನನ) ವೇಳೆ ಶಿಲಾಯುಗದ ಕಾಲದ 3ನೇ ಅಸ್ಥಿಪಂಜರ ಇದೆ. ಮಡಿಕೆ ಹೊರ ತೆಗೆಯುವ ವೇಳೆ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ ಸಂಶೋಧಕರು ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಉತ್ಖನನ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ.ಸುಮನ್ ಫನ್ನೆಕರ್ ಭೇಟಿ ನೀಡಿ, ಅಸ್ಥಿಪಂಜರ ಮತ್ತು ಮಡಿಕೆ ಕುರಿತು ಮಾಹಿತಿ ಪಡೆದಿದ್ದಾರೆ.
ಈ ಹಿಂದೆ ಇದ್ದಿತ್ತು 2 ಅಸ್ಥಿಪಂಜರಗಳು
ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖಾನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ಕಾರ್ಯ ನಡೆಸುವ ವೇಳೆ ಕೆಲವು ದಿನಗಳ ಹಿಂದಷ್ಟೇ 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಇದ್ದವು. ಆರಂಭದಲ್ಲಿ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಮಾತ್ರ ಸಿಕ್ಕಿದ್ದವು. ಆದರೆ ಬಳಿಕ ಹೆಚ್ಚಿನ ಆಳ ಅಗೆದಾಗ ಒಂದರ ಪಕ್ಕದಲ್ಲೊಂದು ಅಸ್ಥಿಪಂಜರಗಳು ಕಂಡುಬಂದವು. ಆ ಬಳಿಕ ದೊರೆತ ಮೂರನೇ ಅಸ್ಥಿಪಂಜರ ಇದಾಗಿದೆ.
ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಕಾರ್ಯ ಅಪಾಯದ ಹಂತಕ್ಕೆ; ಅಧಿಕಾರಿ, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ
ಅಸ್ಥಿಪಂಜರಗಳು ಯಾವುದೇ ರೀತಿಯಲ್ಲೂ ಹಾಳಾಗದೆ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಸಿಕ್ಕಿರುವ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಎಂದು ಅಂದಾಜಿಸ, ನಿಖರವಾದ ಕಾಲಮಾನದ ನಿರ್ಧಾರ ಕಾರ್ಬನ್ ಡೇಟಿಂಗ್ ಪರೀಕ್ಷೆ ನಂತರ ಅಂತಿಮವಾಗಿ ತಿಳಿಯಬೇಕಿದೆ. ಮೈಸೂರು ಪ್ರಾಶ್ಚಾವಸ್ತು ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಂ. ಎಸ್. ನಾಗರಾಜ ರಾವ್ 1964ರಲ್ಲಿ ಇದೇ ತೆಕ್ಕಲಕೋಟೆಯಲ್ಲಿ ಉತ್ಖನನ ನಡೆಸಿದ್ದರು. ಈ ಬಗ್ಗೆ ತೆಕ್ಕಲಕೋಟೆಯ ಗುಡ್ಡಗಾಡು ನಿವಾಸಿಗಳು ಪುಸ್ತಕದಲ್ಲಿ ಅವರು ಆ ಬಗ್ಗೆ ಸಂಪೂರ್ಣ ವಿವರ ನೀಡಿದ್ದರು ಎಂಬುದು ಕೂಡ ಇಲ್ಲಿ ಗಮನಾರ್ಹವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.