
ಚಾಮರಾಜನಗರ, ಏಪ್ರಿಲ್ 08: ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಮಹದೇವಸ್ವಾಮಿ ಎಂಬವರ ಜಮೀನಿನಲ್ಲಿ ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ 4 ವರ್ಷದ ಚಿರತೆ ಬಿದ್ದಿರುವ ಘಟನೆ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಪಡಗೂರಿನಲ್ಲಿ ಕಳೆದ 10 ದಿನದಿಂದ ಹುಲಿ ಮತ್ತು ಚಿರತೆಗಳ ಓಡಾಟ ಸಂಭವಿಸಿದೆ. ಈ ಹಿನ್ನೆಲೆ ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟಿದ್ದರು. ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆಯ ಸಿಬ್ಬಂದಿ. ಈಗ ಚಿರತೆ ಬೋನಿಗೆ ಬಿದ್ದರೂ ಹುಲಿ ದಾಳಿ ಆತಂಕ ಮಾತ್ರ ಗ್ರಾಮಸ್ಥರಲ್ಲಿ ಉಳಿದುಕೊಂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.