ರಾಮನಗರ, (ಡಿಸೆಂಬರ್ 19): ಆತನಿಗೆ 40 ವರ್ಷ. ಆ ಯುವತಿಗೆ 19 ವರ್ಷ. ಇಬ್ಬರ ನಡುವೆ ಪ್ರೀತಿ (ಪ್ರೀತಿ) ಮೂಡಿತ್ತು. ಹದಿನೈದು ದಿನಗಳ ಕೆಳಗೆ ಇಬ್ಬರು ಓಡಿಹೋಗಿದ್ರು. ಈ ವಿಚಾರ ಯುವತಿಯ ತಂದೆ ಕೆರಳುವಂತೆ ಮಾಡಿದ್ದು, ತನ್ನ ಮಗಳನ್ನು ಪ್ರೀತಿಸಿದವನನ್ನ ಕಿಡ್ಯಾಪ್ ಮಾಡಿ, ಬಳಿಕ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹೌದು.. ಬಣ್ಣ ಬಣ್ಣದ ಮಾತುಗಳನ್ನ ಆಡಿ ಮಗಳ ಬಲೆಗೆ ಬೀಳಿಸಿಕೊಂಡಿದ್ದ ಪ್ರೀಯಕರನೊಬ್ಬನನ್ನ ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ (ಬೆಂಗಳೂರು ದಕ್ಷಿಣ) ಜಿಲ್ಲೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ನಡೆದಿದೆ. ಮೂಲತಃ ಮಾಗಡಿ (ಮಾಗಡಿ) ತಾಲೂಕಿನ ದೋಣಕುಪ್ಪೆ ಗ್ರಾಮದ ಹಾಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿರುವ ಚಲುವ (40) ಹತ್ಯೆಯಾದ ವ್ಯಕ್ತಿ.
ಓಡಿ ಹೋಗಿದ್ದ ಜೋಡಿ
ಅಂದಹಾಗೆ ಕೊತ್ತಗೆರೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿರುವ ಚಲುವ, ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ತನ್ನ ಸಂಬಂಧಿಯೇ ಆದ ಕೆಂಪಣ್ಣ ಎಂಬುವವರ 19 ವರ್ಷದ ಮಕ್ಕಳನ್ನು ಪ್ರೀತಿಸುತ್ತಿದ್ದ. ಕಳೆದ ಹದಿನೈದು ದಿನಗಳ ಕೆಳಗೆ ಯುವತಿಯನ್ನ ಕರೆದುಕೊಂಡು ಮಂಡ್ಯದ ಕೆಎಂ ದೊಡ್ಡಿಯ ನಂತರ ಮನೆಯಲ್ಲಿ ಇಟ್ಟಿದ್ದ. ಆನಂತರ ರಾಜೀಪಂಚಾಯತಿ ನಡೆದು ಯುವತಿಯನ್ನ ವಾಪಾಸ್ ಕೆಂಪಣ್ಣ ಮನೆಗೆ ಕರೆತಂದಿದ್ದ.
ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸಾಮೂಹಿಕ ಅತ್ಯಾಚಾರ
ಮಗಳ ಪ್ರಿಯಕರನ ಕತ್ತು ಕೊಯ್ದು ಹತ್ಯೆ
ಈದಾಗಿ ಮೂರು ದಿನಗಳ ಕೆಳಗೆ ಆಕೆಯ ಮನೆಯಲ್ಲಿ ಕೂಡಿ ಹಾಕಿದೆ ಎಂದು ಚಲುವ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಇದರಿಂದ ಕುಪಿತಗೊಂಡ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ, ಮಂಜು ಎಂಬುವರೊಂದಿಗೆ ಸೇರಿ ನಿನ್ನೆ(ಡಿಸೆಂಬರ್ 18) ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಚಲುವನನ್ನು ಕಿಡ್ಯಾಪ್ ಮಾಡಿದ್ದು, ನಂತರ ಸಾಕಷ್ಟು ಕಡೆ ಸುತ್ತಾಡಿಸಿ ಕೊನೆಗೆ ಕಾರಿನಲ್ಲಿಯೇ ಚಲುವನ ಕತ್ತು ಕೊಯ್ದು ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಎಸೆದು ಪರಾರಿಯಾಗಿದ್ದಾರೆ.
ಅಂದಹಾಗೆ ಬೆಳಗ್ಗೆ ಹಳ್ಳದವರ ಬಳಿ ಮೃತದೇಹವನ್ನು ಕಂಡು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಮಾಗಡಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದಾಗ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಆತನ ಕಾರಿನಲ್ಲಿ ಕಿಡ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಆದರೆ, ಇನ್ನು ಚಲುವನನ್ನ ಕುಣಿಗಲ್ ಕಿಡ್ಯಾಪ್ ಮಾಡಿರುವುದರಿಂದ ಈ ಪ್ರಕರಣದಲ್ಲಿ ಕುಣಿಗಲ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬಳಿಕ ಕುಣಿಗಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಚಲುವನನ್ನ ಹತ್ಯೆ ಮಾಡಿದ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ