’45’ ಸಿನಿಮಾ (45 ಚಲನಚಿತ್ರ) ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅನೇಕರು ಈ ಚಿತ್ರವನ್ನು ಮೆಚ್ಚಿದ್ದಾರೆ. ಟ್ವಿಟರ್ನಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಯಾವ ವಿಷಯ ಹೆಚ್ಚು ಇಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಅರ್ಜುನ್ ಜನ್ಯ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಫೇಮಸ್ ಆದವರು. ಇದೇ ಮೊದಲ ಬಾರಿಗೆ ಅವರು ’45’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಾವು ಹಾಗೂ ಬದುಕಿನ ನಡುವಿನ ಕಥೆಯನ್ನು ಹೇಳಲಾಗಿದೆ. ಈ ಚಿತ್ರ ನೋಡಿದ ಅನೇಕರು ಮೆಚ್ಚಿಗೆ ಸೂಚಿಸುತ್ತಿದ್ದಾರೆ. ಸಿನಿಮಾದ ಗ್ರಾಫಿಕ್ಸ್ ತುಂಬಾ ಇಷ್ಟವಾಯಿತು ಎಂದು ಹೇಳಲಾಗಿದೆ ಇನ್ನೂ ಕೆಲವು ಚಿತ್ರದ ಥೀಮ್ ಇಷ್ಟಪಟ್ಟಿದ್ದಾರೆ.
#45 – ಅದ್ಭುತ 😍 ಉಪೇಂದ್ರ ಪಾತ್ರ – 🔥 11 ಅವತಾರದಲ್ಲಿ ಶಿವಣ್ಣ – ಗೂಸ್ಬಂಪ್ಸ್ ರಾಜ್ ಬಿ ಶೆಟ್ಟಿ – 👌 ಅರ್ಜುನ್ ಜನ್ಯ – ಮಾಂತ್ರಿಕ 👏 #45 ವಿಮರ್ಶೆ @ArjunJanyaMusic @ನಿಮ್ಮಉಪೇಂದ್ರ @RajbShettyOMK @ನಿಮ್ಮ ಶಿವಣ್ಣ pic.twitter.com/Xd2AnBFOuJ
— ಹರ್ಷಿತಾ ನಾಗರಾಜ್ (@harshu1890) ಡಿಸೆಂಬರ್ 23, 2025
ನಿನ್ನೆ #45 ವೀಕ್ಷಿಸಲಾಗಿದೆ
ಒಂದು ಪದ: ಬೆಂಕಿ🔥
ನಾನು X amt ಖರ್ಚು ಮಾಡಿದರೆ ಮತ್ತು 3X ಆದಾಯವನ್ನು ಪಡೆದರೆ ಅದು ನನಗೆ ಸಂಪೂರ್ಣ ಚಲನಚಿತ್ರವಾಗಿದೆ ಎಂದು ನಾನು ನಂಬುತ್ತೇನೆ✅ #45The Movie ಅದನ್ನು ಸಾಧಿಸುತ್ತದೆ.
ಕೇವಲ ಶಿವರಾಜೇಂದ್ರ ವೈಬ್ಸ್😉#45MovieReview#45 ಚಲನಚಿತ್ರ#45ದಿ ಫಿಲ್ಮ್ pic.twitter.com/4Dgb6XtWzU
– ಚಿನ್ಮಯ್ | ಚಿನ್ಮಯ್ (@chinmay_gudi) ಡಿಸೆಂಬರ್ 24, 2025
‘ಶಿವಣ್ಣನ ಶಿವತಾಂಡವ’ ಎಂದು ಕೆಲವರು ಹೇಳಿದ್ದಾರೆ. ’45’ ಚಿತ್ರದ ಕ್ಲೈಮ್ಯಾಕ್ಸ್ ಇಷ್ಟವಾಯಿತು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಅವರಿಗೆ ಸರಿಯಾದ ರೀತಿಯಲ್ಲಿ ಸ್ಕ್ರೀನ್ಸ್ಪೇಸ್ ಸಿಕ್ಕಿದೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಎಲ್ಲೆಲ್ಲೂ ’45’, ‘ಮಾರ್ಕ್’ ಸಿನಿಮಾ ಸಂಭ್ರಮ; ಎರಡು ದೊಡ್ಡ ಚಿತ್ರಕ್ಕೆ ಅದ್ದೂರಿ ಸ್ವಾಗತ
’45’ ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಾಜ್ ಹಾಗೂ ಉಪ್ಪಿ ಜೊತೆ ಪ್ರಮೋದ್ ಶೆಟ್ಟಿ, ಕೌಸ್ತುಭಾ ಮಣಿ ಮೊದಲಾದವರು ನಟಿಸಿದ್ದಾರೆ. ಗರುಡ ಪುರಾಣದ ಕಥೆಯ ಉಲ್ಲೇಖವನ್ನು ಚಿತ್ರದಲ್ಲಿ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.