15

Image Credit : social media
ಟೆಕ್ಕಿಗೆ 48 ಲಕ್ಷ ರೂಪಾಯಿ ಮೋಸ
ಬೆಂಗಳೂರಿನ ಟೆಕ್ಕಿಯೊಬ್ಬರು 48 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲೈಂ*ಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿಯೊಬ್ಬರಿಗೆ ವ್ಯಕ್ತಿಯೊಬ್ಬರು ಬರೋಬ್ಬರಿ 48 ಲಕ್ಷ ರೂಪಾಯಿ ವಂಚಿಸಿದ್ದಾರೆ.
25
Image Credit : social media
ಲೈಂ*ಗಿಕ ಸಮಸ್ಯೆ
ಶ್ರೇಯಸ್ (ಹೆಸರು ಬದಲಾಯಿಸಲಾಗಿದೆ) ಎಂಬವರು ಲೈಂಗಿ*ಕ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಕೆಂಗೇರಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯಿಂದ ಬರುವಾಗ ರಸ್ತೆಬದಿಯಲ್ಲಿರುವ ಲೈಂ*ಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ಟೆಂಟ್‌ಗೆ ಭೇಟಿ ನೀಡಿದ್ದಾರೆ. ಈ ಟೆಂಟ್‌ನಲ್ಲಿದ್ದ ವಿನಯ್ ಗುರೂಜಿ ಎಂಬಾತ ಆಯುರ್ವೇದಿಕ ಔಷಧಿ ನೀಡುವುದಾಗಿ ಹೇಳಿದ್ದಾನೆ.
35
Image Credit : Google
1 ಗ್ರಾಂ ಔಷಧಿಗೆ 1,60,000 ರೂಪಾಯಿ
‘ದೇವರಾಜ್ ಬೂಟಿ’ ಎಂಬ ಹೆಸರಿನ ಔಷಧಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ದೇವರಾಜ್ ಬೂಟಿ 1 ಗ್ರಾಂ ಔಷಧಿಗೆ 1,60,000 ಬೆಲೆ ನಿಗದಿ ಮಾಡಿದ್ದಾರೆ. ಈ ಔಷಧಿಯನ್ನು ಯಶವಂತಪುರ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ನಿಂದ ಮಾತ್ರ ಖರೀದಿಸಬೇಕು ಎಂದು ಒತ್ತಾಯಿಸಿದ್ದಾನೆ. ಔಷಧಿ ಖರೀದಿ ವೇಳೆ ಆನ್‌ಲೈನ್ ಪೇಮೆಂಟ್ ಮಾಡಬಾರದು ಮತ್ತು ಜೊತೆಗೆ ಯಾರನ್ನು ಕರೆದುಕೊಂಡು ಬರಬಾರದು ಎಂದು ಷರತ್ತು ಹಾಕಿದ್ದನು.
45
Image Credit : our own
20 ಲಕ್ಷ ಸಾಲ ಮಾಡಿ ಔಷಧಿ ಖರೀದಿ
55
Image Credit : our own
ಕಿಡ್ನಿಗೆ ಸಮಸ್ಯೆ
ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ತೆಗೆದುಕೊಳ್ಳುತ್ತಿರುವಾಗ ಆರೋಗ್ಯ ಕ್ಷೀಣಿಸುತ್ತಿರೋದು ಶ್ರೇಯಸ್ ಗಮನಕ್ಕೆ ಬಂದಿದೆ. ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಸಮಸ್ಯೆಗೆ ಆಗಿರುವುದು ಪತ್ತೆಯಾಗಿದೆ. ಕಿಡ್ನಿ ಸಮಸ್ಯೆಗೆ ತೆಗೆದುಕೊಳ್ಳುತ್ತಿರುವ ಔಷಧಿ ಕಾರಣ ಎಂದು ತಿಳಿದು ಬಂದಿದೆ. ಇದೀಗ ವಿಜಯ್ ಗೂರೂಜಿ, ವಿಜಯಲಕ್ಷ್ಮಿ ಆಯುರ್ವೇದಿಕ್ ವಿರುದ್ಧ ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 20 ವರ್ಷಗಳ ಸ್ನೇಹವನ್ನೇ ಬಂಡವಾಳ ಮಾಡಿ ವಂಚನೆ! ಗೆಳತಿಯಿಂದಲೇ ಕೋಟಿಗಟ್ಟಲೆ ಹಣ ಕಳೆದುಕೊಂಡ ಮಹಿಳೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ