ಕೆಲವೇ ದಿನಗಳವರೆಗಿರುವ ಅದ್ಭುತವಾದ ಏಳು ಯೋಗಗಳು..

ಕೆಲವೇ ದಿನಗಳವರೆಗಿರುವ ಅದ್ಭುತವಾದ ಏಳು ಯೋಗಗಳು..


ಕೆಲವೇ ದಿನಗಳವರೆಗಿರುವ ಅದ್ಭುತವಾದ ಏಳು ಯೋಗಗಳು..

ವೇದಾಂಗಗಳಲ್ಲಿ ಒಂದಾದ ಖಗೋಳ ಶಾಸ್ತ್ರದ ಪ್ರಕಾರ ಗ್ರಹಗಳು ನಿರ್ದಿಷ್ಟ ಸ್ಥಾನಗಳಲ್ಲಿ ಒಂದಾದಾಗ ಯೋಗಗಳು ಸೃಷ್ಟಿಯಾಗುತ್ತವೆ. ಕುಂಭ ಹಾಗೂ ಮಕರದಲ್ಲಿ ಉಂಟಾದ ಗ್ರಹಗಳ ಸಂಯೋಗದಿಂದ ಶಶ, ಗಜಕೇಸರಿ, ಶಶಿಮಂಗಳ, ಬುಧಾದಿತ್ಯ, ಧನ, ಬಲ, ಪಾಶ ಯೋಗಗಳು ಸಂಭವಿಸಲಿವೆ. ಪ್ರತಿಯೊಂದು ಯೋಗಕ್ಕೂ ಆಯ ರಾಶಿಯ ಅಧಿಪತಿ ಮತ್ತು ಗ್ರಹಗಳ ಮೈತ್ರಿಯ ಆಧಾರದ ಮೇಲೆ ಫಲಗಳು ಬದಲಾಗುತ್ತವೆ.

ಶಶ ಮಹಾಪುರುಷ ಯೋಗ

ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಶನಿಯು ಮಿತ್ರ ಅಥವಾ ಸ್ವಕ್ಷೇತ್ರಾಧಿಪತಿಯಾಗದೆ, ಜೀವನದಲ್ಲಿ ಸ್ಥಿರತೆ, ಅಪಾರವಾದ ಆಸ್ತಿ-ಪಾಸ್ತಿ, ಸಮಾಜದಲ್ಲಿ ಉನ್ನತ ಗೌರವ ಮತ್ತು ದೀರ್ಘಾಯುಷ್ಯವನ್ನು ನೀಡುತ್ತಾನೆ. ಇವರು ಮಾಡುವ ಕೆಲಸದಲ್ಲಿ ನಿಧಾನವಾದರೂ ಶಾಶ್ವತವಾದ ಯಶಸ್ಸು ಸಿಗುತ್ತದೆ.

ಮೇಷ, ಸಿಂಹ, ವೃಶ್ಚಿಕ ರಾಶಿಯವರಿಗೆ ಶನಿಯು ಅಧಿಪತಿಗೆ ಶತ್ರುವಾಗುವುದಿಲ್ಲ, ಜೀವನದಲ್ಲಿ ಅತಿಯಾದ ಶ್ರಮ, ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡವನ್ನು ತರಬಹುದು. ಆದರೆ ಶಿಸ್ತನ್ನು ಕಲಿಸುತ್ತಾನೆ.

ಕರ್ಕಾಟಕ, ಧನು, ಮೀನ ರಾಶಿಯವರಿಗೆ ಮಧ್ಯಮ ಫಲ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತಿದೆ, ಆದರೆ ಕೌಟುಂಬಿಕ ಜವಾಬ್ದಾರಿಗಳು ಹೊರೆಯೆನಿಸಬಹುದು.

ಗಜಕೇಸರಿ ಯೋಗ

ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಇದು ಅತ್ಯಂತ ಶುಭದಾಯಕ. ಸಮಾಜದಲ್ಲಿ ನಾಯಕತ್ವ, ರಾಜಕೀಯ ಯಶಸ್ಸು, ಸಕಲ ಸುಖ-ಭೋಗಗಳು ಮತ್ತು ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಇವರ ಮಾತು ಮಂತ್ರದಂತೆ ಕೆಲಸ ಮಾಡುತ್ತಾರೆ.

ವೃಷಭ, ತುಲಾ, ಮಕರ, ಕುಂಭದವರಿಗೆ ಮಧ್ಯಮ ಫಲ. ಹಣಕಾಸಿನ ಹರಿವು ಚೆನ್ನಾಗಿರುತ್ತದೆ, ಆದರೆ ಅದೃಷ್ಟಕ್ಕಿಂತ ಹೆಚ್ಚಾಗಿ ಸ್ವಂತ ಶ್ರಮದಿಂದಲೇ ಯಶಸ್ಸು ಕಾಣುವುದು.

ಮಿಥುನ, ಕನ್ಯಾವರಾಶಿಯವರಿಗೆ ಜ್ಞಾನ ಮತ್ತು ವಿದ್ಯಾಭ್ಯಾಸದಲ್ಲಿ ಉನ್ನತ ಪ್ರಗತಿ ಇರುತ್ತದೆ. ಆದರೆ ಅತಿಯಾದ ಆಲೋಚನೆಯಿಂದ ಮಾನಸಿಕ ಶಾಂತಿ ಸ್ವಲ್ಪ ಕಡಿಮೆ ಇರಬಹುದು.

ಶಶಿ-ಮಂಗಳ ಯೋಗ

ಮೇಷ, ವೃಶ್ಚಿಕ, ಕರ್ಕಾಟಕ, ಧನು ರಾಶಿಯವರಿಗೆ ಹಣದ ಹರಿವು ನಿರಂತರ ಇರುತ್ತದೆ. ರಿಯಲ್ ಎಸ್ಟೇಟ್ ಅಥವಾ ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಭಾರಿ ಲಾಭವಾಗುತ್ತದೆ. ಇವರು ಅತೀ ಸಣ್ಣ ವಯಸ್ಸಿನಲ್ಲೇ ಶ್ರೀಮಂತರಾಗುವ ಯೋಗವಿದೆ.

ವೃಷಭ, ಮಿಥುನ, ಕನ್ಯಾ, ತುಲಾ ರಾಶಿಯವರಿಗೆ ಮಿಶ್ರ ಫಲ. ಹಣ ಬಂದರೂ ಅಷ್ಟೇ ವೇಗವಾಗಿ ಖರ್ಚಾಗುತ್ತದೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ.

ಸಿಂಹ, ಮಕರ, ಕುಂಭದವರಿಗೆ ಮಧ್ಯಮ ಫಲ. ಸಾಹಸಮಯ ಕೆಲಸಗಳಿಂದ ಧನಲಾಭವಾಗುತ್ತದೆ. ಸೋದರರಿಂದ ಬೆಂಬಲ ಸಿಗಲಿದೆ.

ಬುಧ-ಆದಿತ್ಯ ಯೋಗ

ಮಿಥುನ, ಕನ್ಯಾ, ಸಿಂಹ, ಮೇಷ ರಾಶಿಯವರು ಅದ್ಭುತ ಬುದ್ಧಿವಂತರು. ಗಣಿತ, ವಿಜ್ಞಾನ, ಬರವಣಿಗೆ ಅಥವಾ ಸಂವಹನ ಕ್ಷೇತ್ರದಲ್ಲಿ ಜಗತ್ಪ್ರಸಿದ್ಧರಾಗುತ್ತಾರೆ. ಸರ್ಕಾರಿ ಉದ್ಯೋಗ ಅಥವಾ ಉನ್ನತ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯುತ್ತಾರೆ.

ವೃಷಭ, ತುಲಾ, ಮಕರ, ಕುಂಭ ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಚತುರತೆ ತೋರುತ್ತಾರೆ. ಉತ್ತಮ ಭಾಷಣಕಾರರಾಗಿ ಗುರುತಿಸಿಕೊಳ್ಳುತ್ತಾರೆ.

ಕರ್ಕಾಟಕ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಅರಿವು ಹೆಚ್ಚಿದ್ದರೂ ಅದನ್ನು ಪ್ರಾಯೋಗಿಕವಾಗಿ ಬಳಸುವಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು.

ಧನ ಯೋಗ

ವೃಷಭ, ತುಲಾ, ಮಕರ, ಕುಂಭ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಹೆಚ್ಚು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಲೇ ಇರುತ್ತದೆ. ಐಷಾರಾಮಿ ಜೀವನ ನಡೆಸುತ್ತಾರೆ.

ಮೇಷ, ಸಿಂಹ, ವೃಶ್ಚಿಕ, ಧನು ರಾಶಿಯವರಿಗೆ ಕಠಿಣ ಪರಿಶ್ರಮದಿಂದ ಶೂನ್ಯದಿಂದ ಸಾಮ್ರಾಜ್ಯ ಕಟ್ಟುತ್ತಾರೆ. ಇವರಿಗೆ ಹಣದ ಕೊರತೆ ಎದುರಾಗುವುದಿಲ್ಲ.

ಮಿಥುನ, ಕನ್ಯಾ, ಕರ್ಕಾಟಕ, ಮೀನ ರಾಶಿಯವರಿಗೆ ಮಧ್ಯಮ ಫಲ. ಬಂದ ಹಣವನ್ನು ಉಳಿಸುವುದು ಇವರಿಗೆ ಸವಾಲಿನ ಕೆಲಸ ಆಗಬಹುದು.

ಬಲ ಯೋಗ

ಮೇಷ, ವೃಶ್ಚಿಕ, ಮಕರ, ಸಿಂಹ: ಈ ರಾಶಿಯವರು ಮಹಾನ್ ಸಾಹಸಿಗಳು. ಸೈನ್ಯ, ಪೊಲೀಸ್ ಅಥವಾ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದುವುದಿಲ್ಲ.

ಕನ್ಯಾ, ಮಿಥುನ, ತುಲಾ ರಾಶಿಯವರು ದೈಹಿಕ ಬಲಕ್ಕಿಂತ ಬುದ್ಧಿಬಲವನ್ನು ಹೆಚ್ಚು ಬಳಸುತ್ತಾರೆ. ವಿರೋಧಿಗಳನ್ನು ತಂತ್ರದಿಂದ ಸೋಲಿಸುತ್ತಾರೆ.

ಉಳಿದ ರಾಶಿಯವರಿಗೆ ಸಾಧಾರಣ ಫಲ. ಜೀವನದಲ್ಲಿ ಬರುವ ಸಣ್ಣಪುಟ್ಟ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.

ಪಾಶ ಯೋಗ:

ಎಲ್ಲ ದ್ವಾದಶ ರಾಶಿಗಳಿಗೆ ಈ ಯೋಗವು ವ್ಯಕ್ತಿಯನ್ನು ಏಕಾಂಗಿಯಾಗಲು ಬಿಡುವುದಿಲ್ಲ. ಸದಾ ಜನರ ನಡುವೆ ಇರುತ್ತಾರೆ. ಇವರಿಗೆ ಮಿತ್ರರ ಮತ್ತು ಹಿತೈಷಿಗಳ ದೊಡ್ಡ ಬಳಗವೇ ಸೃಷ್ಟಿಯಾಗಿರುತ್ತದೆ.

ಶುಭ ಫಲ: ರಾಜಕೀಯ ಅಥವಾ ಸಮಾಜ ಸೇವೆಯಲ್ಲಿರುವವರಿಗೆ ಇದು ಅತ್ಯುತ್ತಮ ಯೋಗ. ಇವರು ಮಾಡುವ ಕೆಲಸಕ್ಕೆ ಸಮಾಜದ ಮನ್ನಣೆ ಬೇಗನೆ ಸಿಗುತ್ತದೆ.

ಅಶುಭ ಫಲ: ಹನ್ನೆರಡು ರಾಶ್ಯಾಧಿಪತಿಗಳಲ್ಲಿ ಒಬ್ಬರು ನೀಚನಾಗಿದ್ದರೂ ಅಥವಾ ನೀಚ ಗಾಮಿಯಾಗಿದ್ದರೂ ಪರಾವಲಂಬನೆ ಜಾಸ್ತಿಯಾಗಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ.

ಈ ಏಳು ಯೋಗಗಳು ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಭಾಗ್ಯಶಾಲಿಯನ್ನಾಗಿ ಮಾಡುತ್ತವೆ. ಕುಂಡಲಿಯಲ್ಲಿ ಶನಿ ಮತ್ತು ಗುರು ಬಲವಾಗಿರುವುದರಿಂದ ಕುಂಭ, ಮಕರ, ಧನು ಮತ್ತು ಮೀನ ರಾಶಿಯವರಿಗೆ ಈ ಅವಧಿಯಲ್ಲಿ ಈ ಹೆಚ್ಚಿನ ಶುಭ ಫಲಗಳು ದೊರೆಯಲಿವೆ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *