Headlines

ಗ್ಯಾಸ್​ ಹೀಗೆ ಬಳಸಿದ್ರೆ ಪಕ್ಕಾ ಇನ್ನೂ 15-20 ದಿನ ಹೆಚ್ಚಿಗೆ ಬರತ್ತೆ: ಏಳು ಸಿಂಪಲ್​ ಟಿಪ್ಸ್​ ಇಲ್ಲಿದೆ

ಗ್ಯಾಸ್​ ಹೀಗೆ ಬಳಸಿದ್ರೆ ಪಕ್ಕಾ ಇನ್ನೂ 15-20 ದಿನ ಹೆಚ್ಚಿಗೆ ಬರತ್ತೆ: ಏಳು ಸಿಂಪಲ್​ ಟಿಪ್ಸ್​ ಇಲ್ಲಿದೆ

ಗ್ಯಾಸ್​ ಹೀಗೆ ಬಳಸಿದ್ರೆ ಪಕ್ಕಾ ಇನ್ನೂ 15-20 ದಿನ ಹೆಚ್ಚಿಗೆ ಬರತ್ತೆ: ಏಳು ಸಿಂಪಲ್​ ಟಿಪ್ಸ್​ ಇಲ್ಲಿದೆ

ದೇಶದಲ್ಲಿ ಗ್ಯಾಸ್ ಅಭಾವದ ಆತಂಕ ಹೆಚ್ಚಾಗಿದ್ದು, ಲಭ್ಯವಿರುವ ಸಿಲಿಂಡರ್ ಅನ್ನು ಹೆಚ್ಚು ದಿನ ಬಳಸಬೇಕಾದ ಅನಿವಾರ್ಯತೆ ಇದೆ.   ಬರ್ನರ್ ಕ್ಲೀನಿಂಗ್, ಪಾತ್ರೆಗೆ ಮುಚ್ಚಳ ಮುಚ್ಚುವುದು, ಮತ್ತು ಅಕ್ಕಿ-ಬೇಳೆ ನೆನೆಸಿಡುವಂತಹ ಸರಳ ಉಪಾಯ ಹೇಗೆ ಗ್ಯಾಸ್​ ಹೆಚ್ಚು ದಿನ ಬರುತ್ತದೆ ಎನ್ನುವ ಡಿಟೇಲ್ಸ್​.

ಈಗ ಎಲ್ಲೆಲ್ಲೂ ಗ್ಯಾಸ್​ಗೆ ಹಾಹಾಕಾರ. ಸದ್ಯ ಸಾಕಷ್ಟು ದಾಸ್ತಾನು ಭಾರತದಲ್ಲಿ ಇದ್ದರೂ, ಕೆಲವರು ಕಾಳಸಂತೆಯಲ್ಲಿ ಅದನ್ನು ಮಾರಾಟ ಮಾಡಲು ಸ್ಟಾಕ್​ ಇಟ್ಟುಕೊಂಡಿದ್ದರೆ, ಇನ್ನು ಕೆಲವರು ಹೆಚ್ಚಿನ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಅದೇ ಇನ್ನೊಂದೆಡೆ ಯುದ್ಧ ಇನ್ನೂ ಬಹಳಷ್ಟು ದಿನ ಮುಂದುವರೆದರೆ ಅಭಾವ ಅಂತೂ ಖಂಡಿತ ತಟ್ಟೇ ತಟ್ಟುತ್ತದೆ. ಇದಾಗಲೇ ತಿಂಗಳ ಒಳಗೆ ಬುಕ್​ ಮಾಡಿದ್ರೆ ಗ್ಯಾಸ್​​ ಬುಕಿಂಗ್​ ಆಗುತ್ತಿಲ್ಲ. ಸರ್ಕಾರ ಕೂಡ ಮಿತವಾಗಿ ಗ್ಯಾಸ್​​ ಬಳಸುವಂತೆ ಆದೇಶ ಹೊರಡಿಸಿದೆ. ಹಲವರು ಇದಾಗಲೇ ಇಂಡಕ್ಷನ್​ ಸ್ಟವ್​ ಮೊರೆ ಹೋಗಿದ್ದಾರೆ. ಅದೇನೇ ಇದ್ದರೂ ಈ ಏಳು ಟಿಪ್ಸ್ ಫಾಲೋ ಮಾಡಿದ್ರೆ ಖಂಡಿತವಾಗಿಯೂ ನಿಮ್ಮ ಗ್ಯಾಸ್​ ಇನ್ನೂ 15-10 ದಿನ ಬಾಳಿಕೆ ಬರುತ್ತದೆ. ಈ ಬಗ್ಗೆ ಕಾವ್ಯಾ ಶಾಸ್ತ್ರಿಯವರು ಮಾಹಿತಿ ನೀಡಿದ್ದಾರೆ. ಅವರು ತಮ್ಮ kaavya.shastry ಇನ್​ಸ್ಟಾಗ್ರಾಮ್​ನಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಮೊದಲನೆಯದ್ದಾಗಿ ಬರ್ನರ್​, ಸಿಲಿಂಡರ್​ ಪೈಪ್​, ರೆಗ್ಯುಲೇಟರ್ ಎಲ್ಲವೂ ಸರಿಯಾಗಿದೆಯೇ ಎಂದು ಚೆಕ್​ ಮಾಡಿಕೊಳ್ಳಿ. ಇದು ಸರಿಯಿರದೇ ಹೋದರೆ, ಗ್ಯಾಸ್​ ಲೀಕ್​ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬರ್ನರ್​ನಿಂದ ಬರುವ ಫ್ಲೇಮ್​ ನೀಲಿಯಾಗಿದ್ದರೆ ಅದು ಸರಿಯಾಗಿದೆ ಎಂದರ್ಥ. ಕೆಂಪು ಅಥವಾ ಬೇರೆ ಬಣ್ಣ ಬಂದರೆ ಏನೋ ಸಮಸ್ಯೆ ಇದೆ ಎಂದರ್ಥ.

ಹೈ ಫ್ಲೇಮ್​ ಇಟ್ಟು ಒಂದು ಕುದಿ ಬಂದ ತಕ್ಷಣ ಗ್ಯಾಸ್​​ ಅನ್ನು ಸಣ್ಣ ಮಾಡಿ. ಇದರಿಂದ ಗ್ಯಾಸ್​​ ಉಳಿತಾಯವಾಗುತ್ತದೆ.

ಮುಚ್ಚಳ, ಪ್ಲೇಟ್​ ಯಾವುದನ್ನಾದರೂ ಪಾತ್ರೆಯ ಮೇಲೆ ಮುಚ್ಚಿಡಿ. ಇದರಿಂದ ಬೇಗನೇ ಬೇಳೆ, ಕಾಳು, ತರಕಾರಿ ಬೇಯುತ್ತವೆ.

ಸ್ಥಳ ಅಗಲವಾಗಿರುವ ಪಾತ್ರ ಬಳಸಿ. ಇದರಿಂದ ಗ್ಯಾಸ್​ ಎಲ್ಲಾ ಕಡೆ ಸ್ಪ್ರೆಡ್​ ಆಗಿ ಬೇಗ ಆಹಾರ ಪದಾರ್ಥ ಬೇಯುತ್ತವೆ.

ಅಕ್ಕಿ, ಬೇಳೆ ಇಂಥವುಗಳನ್ನು ಬೇಯಿಸುವ ಮುನ್ನ ಚೆನ್ನಾಗಿ ನೆನೆಸಿಟ್ಟರೆ ಬೇಗ ಬೇಯುತ್ತವೆ.

ಪಾತ್ರೆ ತುಂಬಾ ಬಿಸಿಯಾಗಿರುವ ಕಾರಣ, ಮಾಮೂಲು ಆಫ್​ ಮಾಡುವುದಕ್ಕಿಂತ ತುಸು ಮುಂಚೆ ಆಫ್​ ಮಾಡಿದ್ರೆ ಅದರ ಫ್ಲೇಮ್​ ಹಾಗೆಯೇ ಇರುವುದರಿಂದ ಅದು ಬಿಸಿಯಾಗುತ್ತಲೇ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಡುಗೆಗೆ ಇಟ್ಟುಬಿಟ್ಟು ಮೊಬೈಲ್​ ಹಿಡಿದುಕೊಂಡು ಕುಳಿತರೆ ಕಥೆ ಏನು ಎನ್ನೋದು ಹೆಂಗಸರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಅಡುಗೆ ಬೇಯುವವರೆಗೆ ಅಲ್ಲಿಯೇ ಇದ್ದು, ಬೆಂದ ತಕ್ಷಣ ಗ್ಯಾಸ್​ ಆಫ್​ ಮಾಡಿ. ಇನ್ನೊಂದು ಪದೇ ಪದೇ ಗ್ಯಾಸ್​​ ಹಚ್ಚಿ ಬಿಸಿ ಮಾಡುವುದನ್ನು ತಪ್ಪಿಸಲು ಸಾಧ್ಯವಾಗತ್ತಾ ನೋಡಿ. ಒಟ್ಟಿಗೇ ಮನೆಯವರು ಎಲ್ಲರೂ ಊಟನೋ, ತಿಂಡಿನೋ ಮಾಡಿದರೆ ಪದೇ ಪದೇ ಬಿಸಿ ಮಾಡುವ ತಾಪತ್ರಯ ಇರುವುದಿಲ್ಲ.

Source link

Leave a Reply

Your email address will not be published. Required fields are marked *