ಪಶ್ಚಿಮ ಬಂಗಾಳದ ಪೊಲೀಸ್‌ ಇಲಾಖೆ & ಸಿಆರ್‌ಪಿಎಫ್‌ಗೆ ಅಂಕೋಲಾದ 9 ಶ್ವಾನ ಮರಿಗಳು

ಪಶ್ಚಿಮ ಬಂಗಾಳದ ಪೊಲೀಸ್‌ ಇಲಾಖೆ & ಸಿಆರ್‌ಪಿಎಫ್‌ಗೆ ಅಂಕೋಲಾದ 9 ಶ್ವಾನ ಮರಿಗಳು

ಪಶ್ಚಿಮ ಬಂಗಾಳದ ಪೊಲೀಸ್‌ ಇಲಾಖೆ & ಸಿಆರ್‌ಪಿಎಫ್‌ಗೆ ಅಂಕೋಲಾದ 9 ಶ್ವಾನ ಮರಿಗಳು

9 ಬೆಲ್ಜಿಯಂ ಮೆಲಿನಾಯ್ಸ್ ತಳಿಯ ಶ್ವಾನ ಮರಿಗಳು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿವೆ. ಅತ್ಯಂತ ಚುರುಕು ಮತ್ತು ಬುದ್ಧಿವಂತ ತಳಿಗಳಾದ ಇವುಗಳನ್ನು ಭದ್ರತಾ ಪಡೆಗಳಲ್ಲಿ ಬಳಸಲಾಗುತ್ತದೆ.

ಅಂಕೋಲಾ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ಅವರ ಮನೆಯಲ್ಲಿ ಬೆಳೆದ ಬೆಲ್ಜಿಯಂ ಮೆಲಿನಾಯ್ಸ್ ತಳಿಯ 9 ಶ್ವಾನ ಮರಿಗಳು ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿವೆ.

ಶನಿವಾರ ಬೆಳಗ್ಗೆ ಸಿಆರ್‌ಪಿಎಫ್ ಯೋಧರು ವಿಶೇಷ ವಾಹನಗಳಲ್ಲಿ ಬಾವಿಕೇರಿಗೆ ಆಗಮಿಸಿ, ಶ್ವಾನ ಮರಿಗಳನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಒಟ್ಟು 9 ಮರಿಗಳ ಪೈಕಿ 4 ಮರಿಗಳು ಸಿಆರ್‌ಪಿಎಫ್‌ಗೆ ಹಾಗೂ 5 ಮರಿಗಳು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಆಯ್ಕೆಯಾಗಿವೆ.

ಅತ್ಯಂತ ಚುರುಕು ಮತ್ತು ಬುದ್ಧಿವಂತ ತಳಿ ಎಂದೇ ಕರೆಯಲ್ಪಡುವ ಬೆಲ್ಜಿಯಂ ಮೆಲಿನಾಯ್ಸ್ ನಾಯಿಗಳು ಭದ್ರತಾ ಪಡೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಘವೇಂದ್ರ ಭಟ್ ಶ್ವಾನ ಪಾಲನೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದು, ಉತ್ತಮ ಆಹಾರ ಕ್ರಮ ಮತ್ತು ಆರೋಗ್ಯವಂತ ತಳಿಗಳ ಪೋಷಣೆಗೆ ಹೆಸರಾಗಿದ್ದಾರೆ.

ರಾಘವೇಂದ್ರ ಭಟ್ ಅವರು ಈ ಹಿಂದೆಯೂ ಭಾರತೀಯ ಸೇನೆ, ರಾಜ್ಯ ಪೊಲೀಸ್ ಹಾಗೂ ಹೊರ ರಾಜ್ಯದ ಪೊಲೀಸ್ ಇಲಾಖೆಗಳಿಗೆ ಸುಮಾರು 50ಕ್ಕೂ ಹೆಚ್ಚು ಶ್ವಾನ ಮರಿಗಳನ್ನು ನೀಡಿದ್ದಾರೆ. ರಾಘವೇಂದ್ರ ಅವರಿಗೆ ಪತ್ನಿ ರಾಜೇಶ್ವರಿ ಕೂಡ ಸಂಪೂರ್ಣ ಸಾಥ್ ನೀಡುತ್ತಿದ್ದಾರೆ.

Source link

Leave a Reply

Your email address will not be published. Required fields are marked *