Amruthadhaare: ಮಿಂಚು ಹೇಳಿದ ಸತ್ಯ ಕೇಳಿ ಗೌತಮ್​ ಅಲ್ಲೋಲ-ಕಲ್ಲೋಲ! ಭೂಮಿಕಾ ಕಣ್ಣೀರ ಕೋಡಿ

Amruthadhaare: ಮಿಂಚು ಹೇಳಿದ ಸತ್ಯ ಕೇಳಿ ಗೌತಮ್​ ಅಲ್ಲೋಲ-ಕಲ್ಲೋಲ! ಭೂಮಿಕಾ ಕಣ್ಣೀರ ಕೋಡಿ

Amruthadhaare: ಮಿಂಚು ಹೇಳಿದ ಸತ್ಯ ಕೇಳಿ ಗೌತಮ್​ ಅಲ್ಲೋಲ-ಕಲ್ಲೋಲ! ಭೂಮಿಕಾ ಕಣ್ಣೀರ ಕೋಡಿ
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಗಂಡ-ಹೆಂಡತಿ ಎಂಬ ಸತ್ಯ ತಮ್ಮ ಮಕ್ಕಳಾದ ಆಕಾಶ್ ಮತ್ತು ಮಿಂಚುಗೆ ತಿಳಿದಿದೆ. ತಾವು ಮಗುವನ್ನು ಹುಡುಕಲು ಹೋಗುತ್ತಿರುವ ವಿಷಯವನ್ನು ಮಕ್ಕಳು ಹೇಳಿದಾಗ ಗೌತಮ್ ಮತ್ತು ಭೂಮಿಕಾ ಇಬ್ಬರೂ ಆಘಾತಕ್ಕೊಳಗಾಗಿ, ಭಾವುಕರಾಗುತ್ತಾರೆ.
ಅಮೃತಧಾರೆ ಸೀರಿಯಲ್​ನಲ್ಲಿ ಪ್ರತಿಯೊಬ್ಬರದ್ದೂ ಅಬ್ಬಬ್ಬಾ, ವ್ಹಾರೆವ್ಹಾ ಎನ್ನುವಂಥ ಅಭಿನಯ. ಗೌತಮ್​ ಆಗಿರೋ ರಾಜೇಶ್​ ನಟರಂಗ ಮತ್ತು ಭೂಮಿಕಾ ಆಗಿರೋ ನಟಿ ಛಾಯಾ ಸಿಂಗ್ ಅವರಿಬ್ಬರೂ ಅಭಿನಯದಲ್ಲಿ ಪಂಟರು. ಆದರೆ ಮಕ್ಕಳಾಗಿರೋ ಆಕಾಶ್​ ಮತ್ತು ಮಿಂಚು ಆ್ಯಕ್ಟಿಂಗ್​ ಲೆವೆಲ್ಲೇ ಬೇರೆ. ಇವರಿಬ್ಬರೂ ಜನರನ್ನು ಮೋಡಿ ಮಾಡುತ್ತಿದ್ದಾರೆ.

ಇದೀಗ, ಮಿಂಚು ಹೇಳಿದ ಸತ್ಯವೊಂದು ಗೌತಮ್​ ನೆಲವನ್ನೇ ಕುಸಿಯುವಂತೆ ಮಾಡಿದೆ. ಅದೇನೆಂದರೆ, ಗೌತಮ್​ ತಾನು ಒಂದು ವಾರದ ಮಟ್ಟಿಗೆ ರಜೆಯ ಮೇಲೆ ಹೋಗುತ್ತಿದ್ದೇನೆ. ನೀನು ಮಲ್ಲಿ ಆಂಟಿ ಜೊತೆ ಸ್ಕೂಲ್​ಗೆ ಹೋಗು ಎಂದಾಗ, ಎಲ್ಲಿ ಎಂದು ಮಿಂಚು ಕೇಳಿದ್ರೆ ಅವನು ಏನು ಎಂದು ಹೇಳಿರುವುದಿಲ್ಲ.

ಆದರೆ ಮಿಂಚು, ನನಗೆ ಗೊತ್ತು ಪಪ್ಪಾ. ನೀವು ಮ್ಯಾಮ್ ಜೊತೆ ಮಗುವನ್ನು ಹುಡುಕಲು ಹೊರಟಿದ್ದೀರಿ ಎಂದು ಹೇಳುವುದೂ ಅಲ್ಲದೇ ನೀವಿಬ್ಬರೂ ಗಂಡ-ಹೆಂಡತಿ ಎನ್ನೋ ಸತ್ಯನೂ ನನಗೆ ಗೊತ್ತು ಎಂದಾಗ ಗೌತಮ್​ ಅಲ್ಲೋಲ ಕಲ್ಲೋಲವಾಗುತ್ತಾನೆ.

ಅದೇ ಇನ್ನೊಂದೆಡೆ, ಆಕಾಶ್​ ಕೂಡ ಭೂಮಿಕಾಗೆ, ನೀವು ಪಪ್ಪಾ ಜೊತೆ ಮಗುವನ್ನು ಹುಡುಕಲು ಹೊರಟಿರುವ ಸತ್ಯ ಗೊತ್ತು. ಬೇಗ ನನ್ನ ಅಕ್ಕನನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತಾನೆ.

ಆಗ ಭೂಮಿಕಾ, ನಿನಗೆ ಅವರನ್ನು ಪಪ್ಪಾ ಎಂದು ಹೇಳಬೇಕು ಎಂದು ಎನಿಸಲ್ವಾ ಎಂದಾಗ, ಆಕಾಶ್​, ಎನಿಸತ್ತೆ ಮಮ್ಮಿ. ಆದರೆ ನೀವು ಯಾವಾಗ ಹೇಳು ಎನ್ನುತ್ತೀರೋ ಆಗ ಹೇಳ್ತೇನೆ, ನೀವು ನನಗಾಗಿ ಎಷ್ಟೊಂದು ಮಾಡಿದ್ದೀರಿ. ನಿಮ್ಮ ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾಡಲ್ಲ ಎಂದಾಗ ಭೂಮಿಕಾ ಕಣ್ಣೀರಾಗುತ್ತಾಳೆ.

ಒಟ್ಟಿನಲ್ಲಿ ಮಕ್ಕಳಿಬ್ಬರೂ ತಮ್ಮ ಅಭಿನಯದಿಂದ ವೀಕ್ಷಕರ ಕಣ್ಣೀರಿನ ಕೋಡಿಯನ್ನೇ ಹರಿಸಿರುವುದನ್ನು ಈ ಪ್ರೊಮೋಗೆ ಬಂದಿರುವ ಕಮೆಂಟ್​ಗಳಿಂದಲೇ ತಿಳಿದು ಬರುತ್ತದೆ.

Source link

Leave a Reply

Your email address will not be published. Required fields are marked *