Headlines

ವಿದ್ಯುತ್ ದರ ಮತ್ತೆ ಹೆಚ್ಚಳ: ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ, ಸೆಸ್ಕ್‌ನಿಂದ 15 ಪೈಸೆ ಏರಿಕೆ | Electricity Prices Up Again Bescom Hikes Rates By 56 Paise Cesc By 15 Paise Per Unit Rav

ವಿದ್ಯುತ್ ದರ ಮತ್ತೆ ಹೆಚ್ಚಳ: ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ, ಸೆಸ್ಕ್‌ನಿಂದ 15 ಪೈಸೆ ಏರಿಕೆ | Electricity Prices Up Again Bescom Hikes Rates By 56 Paise Cesc By 15 Paise Per Unit Rav



ವಿದ್ಯುತ್ ದರ ಮತ್ತೆ ಹೆಚ್ಚಳ: ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ, ಸೆಸ್ಕ್‌ನಿಂದ 15 ಪೈಸೆ ಏರಿಕೆ | Electricity Prices Up Again Bescom Hikes Rates By 56 Paise Cesc By 15 Paise Per Unit Rav

2026-27ನೇ ಸಾಲಿನಲ್ಲಿ ಆದಾಯ ಕೊರತೆ ಸರಿದೂಗಿಸಲು ಬೆಸ್ಕಾಂ ಮತ್ತು ಸೆಸ್ಕ್ ಗ್ರಾಹಕರಿಗೆ ವಿದ್ಯುತ್ ದರ ಕ್ರಮವಾಗಿ 56 ಮತ್ತು 15 ಪೈಸೆ ಹೆಚ್ಚಳವಾಗಲಿದೆ. ಇದೇ ವೇಳೆ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಹುಕ್ಕೇರಿ ಎಸ್ಕಾಂ ಗ್ರಾಹಕರಿಗೆ ಹೆಚ್ಚುವರಿ ಆದಾಯದ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ.

ಬೆಂಗಳೂರು (ಏ.19): ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಗಳಿಗೆ (ಸೆಸ್ಕ್-ಮೈಸೂರು) 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್‌ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 15 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ.

ಇದೇ ವೇಳೆ 2024-25ರಲ್ಲಿ ನಿರ್ವಹಣಾ ವೆಚ್ಚಕ್ಕಿಂತ ಹೆಚ್ಚು ಆದಾಯ ಸಂಗ್ರಹ ಮಾಡಿರುವ ಹೆಸ್ಕಾಂ (ಹುಬ್ಬಳ್ಳಿ) ತನ್ನ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಪ್ರತಿ ತಿಂಗಳು ಪ್ರತಿ ಯುನಿಟ್‌ಗೆ 10 ಪೈಸೆಯಂತೆ ಮರುಪಾವತಿ ಮಾಡಬೇಕು.

ಜತೆಗೆ ಜೆಸ್ಕಾಂ (ಕಲಬುರಗಿ) ಗ್ರಾಹಕರಿಗೆ 10 ಪೈಸೆ, ಮಂಗಳೂರಿನ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸರಬರಾಜು ಸಹಕಾರ ಸೊಸೈಟಿಯ (ಎಚ್‌ಆರ್‌ಇಸಿಎಸ್) ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ಬರೋಬ್ಬರಿ 155 ಪೈಸೆಯಷ್ಟು ಹಣವನ್ನು ಮರು ಪಾವತಿ ಮಾಡಬೇಕು ಎಂದು ಆದೇಶ ಮಾಡಿದೆ.

ತನ್ಮೂಲಕ 2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ಸರರಬಾಜು ಕಂಪೆನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಆದರೆ ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಹುಕ್ಕೇರಿ ಎಸ್ಕಾಂಗಳ ಗ್ರಾಹಕರಿಗೆ ವಿದ್ಯುತ್ ದರ ಕಡಿಮೆಯಾಗಲಿದೆ.

ಈ ಆದೇಶ 2026 ಮೇ 1 ರಿಂದ 2027ರ ಏಪ್ರಿಲ್‌ 31ರವರೆಗೆ ಬಳಕೆಯಾಗುವ ವಿದ್ಯುತ್‌ ಬಿಲ್‌ಗೆ ಅನ್ವಯವಾಗಲಿದೆ.

ಮರು ಪಾವತಿ ಹೇಗೆ?:

ಎಸ್ಕಾಂಗಳಿಂದ ಮರುಪಾವತಿ ಪಡೆಯಲು ಅರ್ಹರಾಗಿರುವ 2024-25ನೇ ಸಾಲಿನಲ್ಲಿ ಬಳಕೆ ಮಾಡಿರುವ ವಿದ್ಯುತ್‌ ಪ್ರಮಾಣದ ಆಧಾರದ ಮೇಲೆ 2026-27ನೇ ಸಾಲಿನಲ್ಲಿ ಮರುಪಾವತಿ ಪಡೆಯುತ್ತಾರೆ. ಉದಾ: 2024-25ನೇ ಸಾಲಿನಲ್ಲಿ ಮೆಸ್ಕಾಂನ ಗ್ರಾಹಕನೊಬ್ಬ ಪ್ರತಿ ತಿಂಗಳು ಸರಾಸರಿ 100 ಯುನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿರುತ್ತಾರೆ. ಕೆಇಆರ್‌ಸಿ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ವಾಪಸು ಮಾಡುವಂತೆ ಆದೇಶಿಸಿದೆ. ಹೀಗಾಗಿ 2026-27ನೇ ಸಾಲಿನಲ್ಲಿ ಆ ಗ್ರಾಹಕ ಪ್ರತಿ ತಿಂಗಳು ಬಳಕೆ ಮಾಡುವ 100 ಯುನಿಟ್‌ಗಳಿಗೆ ಪ್ರತಿ ಯುನಿಟ್‌ಗೆ ತಲಾ 9 ಪೈಸೆಯಂತೆ ಹಣ ಮರು ಪಾವತಿ ಆಗಲಿದೆ.

ಇದನ್ನು ವಿದ್ಯುತ್‌ ಬಿಲ್‌ನಲ್ಲಿ ‘ಎಫ್‌ವೈ25 ಟ್ರೂ ಅಪ್‌ ಚಾರ್ಜಸ್‌’ ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿ ಲೆಕ್ಕಾಚಾರ ಮಾಡಲಾಗುತ್ತದೆ.

ಬೆಸ್ಕಾಂಗೆ ಭಾರಿ ನಷ್ಟ:

2024-25ನೇ ಸಾಲಿನಲ್ಲಿ ಕೆಇಆರ್‌ಸಿಯು ಬೆಸ್ಕಾಂಗೆ 32,019 ಕೋಟಿ ರು. ನಿರ್ವಹಣಾ ವೆಚ್ಚ ತಗಲುವ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಿತ್ತು. ಆದರೆ, 2024-25ನೇ ಸಾಲಿನಲ್ಲಿ ಬೆಸ್ಕಾಂಗೆ 34,087 ಕೋಟಿ ರು. ವೆಚ್ಚ ಉಂಟಾಗಿ 2024 ಕೋಟಿ ರು. ಆದಾಯ ಕೊರತೆ ಉಂಟಾಗಿತ್ತು.

ಈ ಕೊರತೆಯನ್ನು ತುಂಬಿಕೊಡುವಂತೆ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿ (ಎಪಿಆರ್‌) ಆಧಾರದ ಮೇಲೆ ಬೆಸ್ಕಾಂ ಕೆಇಆರ್‌ಸಿ ಮೊರೆ ಹೋಗಿತ್ತು. ಇದೀಗ ಕೆಇಆರ್‌ಸಿಯು ಪ್ರತಿ ಯುನಿಟ್‌ಗೆ 56 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಿ ನಷ್ಟ ತುಂಬಿಕೊಳ್ಳುವಂತೆ ಆದೇಶ ನೀಡಿದೆ. ಉಳಿದಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ 121.71 ಕೋಟಿ ರು. ಆದಾಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್‌ಗೆ 15 ಪೈಸೆ ಹೆಚ್ಚಳ ಮಾಡಲಾಗಿದೆ.

ಆದರೆ, ಮಂಗಳೂರಿನ ಮೆಸ್ಕಾಂ 276.48 ಕೋಟಿ ರು. ಉಳಿತಾಯ ದಾಖಲಿಸಿರುವುದರಿಂದ ಪ್ರತಿ ಯುನಿಟ್‌ಗೆ 9 ಪೈಸೆ ಮರುಪಾವತಿಗೆ ಸೂಚಿಸಲಾಗಿದೆ. ಹೆಸ್ಕಾಂ 133.46 ಕೋಟಿ ರು. ಉಳಿತಾಯ ದಾಖಲಿಸಿರುವುದರಿಂದ 10 ಪೈಸೆ, ಜೆಸ್ಕಾಂ 90.40 ಕೋಟಿ ರು. ಉಳಿತಾಯ ದಾಖಲಿಸಿರುವುದಕ್ಕೆ 10 ಪೈಸೆ ಮರುಪಾವತಿಗೆ ಆದೇಶಿಸಲಾಗಿದೆ. ಎಚ್ಆರ್‌ಇಸಿಎಸ್‌ (ಹುಕ್ಕೇರಿ) 381 ಮಿಲಿಯನ್‌ ಯುನಿಟ್‌ ವಿದ್ಯುತ್ ಪೂರೈಕೆ ಮಾಡಿದ್ದು, 267.35 ಕೋಟಿ ರು. ಖರ್ಚು ಮಾಡಿದೆ. ಇದಕ್ಕಿಂತ ಹೆಚ್ಚು ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್‌ಗೆ 155 ಪೈಸೆಯಂತೆ ಮರುಪಾವತಿ ಮಾಡಲು ಆದೇಶಿಸಲಾಗಿದೆ.

ಎಸ್ಕಾಂಗಳು – ದರ ಬದಲಾವಣೆ (ಪ್ರತಿ ಯುನಿಟ್‌ಗೆ)

ಬೆಸ್ಕಾಂ – 56 ಪೈಸೆ ಹೆಚ್ಚಳ

ಮೈಸೂರು ಸೆಸ್ಕ್- 15 ಪೈಸೆ ಹೆಚ್ಚಳ

ಮೆಸ್ಕಾಂ – 9 ಪೈಸೆ ಇಳಿಕೆ

ಹೆಸ್ಕಾಂ- 10 ಪೈಸೆ ಇಳಿಕೆ

ಜೆಸ್ಕಾಂ- 10 ಪೈಸೆ ಇಳಿಕೆ

ಹುಕ್ಕೇರಿಯ ಎಚ್‌ಆರ್‌ಇಸಿಎಸ್‌- 155 ಪೈಸೆ ಇಳಿಕೆ



Source link

Leave a Reply

Your email address will not be published. Required fields are marked *