ಗದಗ, ಫೆಬ್ರವರಿ 6: ಗದಗ ಜಿಲ್ಲೆಯ ಕಪ್ಪತ್ತಗುಡ್ಡವು ಈಗ ರಾಜ್ಯದ ಗಮನ ಸೆಳೆದಿದೆ. ಪ್ರಾಚೀನ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಬೆನ್ನಲ್ಲೇ, ಕಪ್ಪತ್ತಗುಡ್ಡದ ನಿಗೂಢ ಗುಹೆಯಲ್ಲಿ ಚಿನ್ನದ ರಹಸ್ಯ ಬಯಲಾಗಿದೆ. ಮಹಾಲಿಂಗಪುರ ಸಮೀಪದ ಕಪ್ಪತ್ತಗುಡ್ಡದಲ್ಲಿ ‘ಟಿವಿ9’ ಗ್ರೌಂಡ್ ರಿಪೋರ್ಟ್ ನಡೆಸಿದ್ದು, ಈ ಗುಹೆಗಳಲ್ಲಿ ಅಪಾರ ಚಿನ್ನದ ನಿಕ್ಷೇಪವಿರುವ ಸಾಧ್ಯತೆ ಕುರಿತು ಕುತೂಹಲ ಮೂಡಿಸಿದೆ. ಎಲ್ಲಾ ದುರ್ಗಮ ರಸ್ತೆಗಳು ಮತ್ತು ಭಯಾನಕ ಕಾಡುಗಳ ಮಧ್ಯೆ ಇರುವ ಈ ಗುಹೆಗಳಿಗೆ ತಲುಪುವುದು ಸವಾಲಿನ ಕೆಲಸವಾಗಿದೆ. ಈ ಗುಹೆಗಳು ಒಂದರೊಳಗೊಂದು ಇರುವಂತೆ ಭಾಸವಾಗುತ್ತದೆ, ಪ್ರತಿ ಹೆಜ್ಜೆಯಲ್ಲೂ ಹೊಸ ಕೌತುಕ ಮೂಡುತ್ತದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು ಎಂಬ ಐತಿಹಾಸಿಕ ಮಾಹಿತಿಯನ್ನು ಸ್ಥಳೀಯ ಹಿರಿಯರು ಬಹಿರಂಗಪಡಿಸಿದ್ದಾರೆ. ಕಪ್ಪತ್ತಗುಡ್ಡವು ‘ಔಷಧ ಸಸ್ಯಕಾಶಿ’ ಎಂದೂ ಹೆಸರಾಗಿದ್ದರೆ, ಇದೀಗ ನಿಗೂಢ ಗುಹೆಗಳಲ್ಲಿ ಚಿನ್ನದ ನಿಕ್ಷೇಪ ಇದೆಯಾ ಎಂಬ ಕುತೂಹಲವಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ