ಈರುಳ್ಳಿ ಪಕೋಡ ಎಣ್ಣೆಗೆ ಬಿಡ್ತಿರೋ ಈ ವಿಶ್ವಸುಂದರಿ (Miss Supranational) ಯಾರು ಗೊತ್ತಾ? | Miss Supranational Asha Bhat Making Onion Pakora Viral Video Bni

ಈರುಳ್ಳಿ ಪಕೋಡ ಎಣ್ಣೆಗೆ ಬಿಡ್ತಿರೋ ಈ ವಿಶ್ವಸುಂದರಿ (Miss Supranational) ಯಾರು ಗೊತ್ತಾ? | Miss Supranational Asha Bhat Making Onion Pakora Viral Video Bni



ಈರುಳ್ಳಿ ಪಕೋಡ ಎಣ್ಣೆಗೆ ಬಿಡ್ತಿರೋ ಈ ವಿಶ್ವಸುಂದರಿ (Miss Supranational) ಯಾರು ಗೊತ್ತಾ? | Miss Supranational Asha Bhat Making Onion Pakora Viral Video Bni

ನಟ ನಟಿಯರು ಸಾಮಾನ್ಯರಂತೆ ಇರೋದನ್ನು ನೋಡೋದೇ ಕ್ರೇಜ್. ಈ ವಿಶ್ವಸುಂದರಿಯನ್ನೇ (miss supranational Asha Bhat) ನೋಡಿ, ಈರುಳ್ಳಿ ಪಕೋಡಾ ಎಣ್ಣೆಗೆ ಬಿಡ್ತಿರೋ ಆ ಸ್ಟೈಲ್ ನೋಡಿ. ಭದ್ರಾವತಿಯ ಈ ಚೆಲುವೆಯ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  

ಸೆಲೆಬ್ರಿಟಿಗಳು ಅಂದರೆ ಸಾಮಾನ್ಯರ ಕಣ್ಣಲ್ಲಿ ನೆಕ್ಸ್ಟ್ ಲೆವೆಲ್ ಅಲ್ಲಿ ಇರ್ತಾರೆ. ಅವರನ್ನು ದೇವತೆಗಳ ಹಾಗೋ ಆಕಾಶದ ಮೇಲಿನ ನಕ್ಷತ್ರ ಹಾಗೋ ಜನಸಾಮಾನ್ಯರು ನೋಡ್ತಿರ್ತಾರೆ. ಆದರೆ ಇಲ್ಲೊಬ್ಬ ವಿಶ್ವಸುಂದರಿ ಅಡುಗೆ ಮನೆಯ ಕಟ್ಟೆಯಲ್ಲಿ ಕೂತು ಈರುಳ್ಳಿ ಪಕೋಡಾದ ಹಿಟ್ಟನ್ನು ರೆಡಿ ಮಾಡಿಟ್ಕೊಂಡು ಜಾಗೃತೆಯಲ್ಲಿ ಎಣ್ಣೆಗೆ ಬಿಡ್ತಿದ್ದಾರೆ. ಈರುಳ್ಳಿ ಪಕೋಡ ಇಷ್ಟಪಡುವವರು ಬಾಯಲ್ಲಿ ನೀರೂರಿಸುವ ಈರುಳ್ಳಿ ಪಕೋಡವನ್ನು ಕಣ್ತುಂಬಿಕೊಳ್ಳಬೇಕೋ ಇಲ್ಲಾ ಪಕೋಡ ಮಾಡ್ತಿರೋ ಸುಂದರಿಯನ್ನು ನೋಡಬೇಕೋ ಗೊತ್ತಾಗದೇ ಕಣ್ ಕಣ್ ಬಿಡುತ್ತಿದ್ದಾರೆ. ಈ ಸುಂದರಿಯನ್ನೇ ಗಮನವಿಟ್ಟು ನೋಡಿ, ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ, ನಮ್ ಕನ್ನಡದಲ್ಲೂ ಸದ್ಯ ಜೈಲಿನಲ್ಲಿರುವ ಸ್ಟಾರ್ ನಟರೊಬ್ಬರ ಸಿನಿಮಾಕ್ಕೂ ನಾಯಕಿಯಾಗಿದ್ದಾರೆ. ಸದ್ಯ ತಾನಾಯ್ತು, ತನ್ನ ಕೆಲಸ ಆಯ್ತು ಅಂದುಕೊಂಡು ಈರುಳ್ಳಿ ಪಕೋಡಾದ ಜೊತೆಗೆ ಸಂಜೆ ಕಾಫಿ ಕುಡಿಯೋ ಮೂಡ್ನಲ್ಲಿದ್ದಾರೆ.

ನೀವು ಗೆಸ್ ಮಾಡಿರಬಹುದೇನೋ, ಈ ಈರುಳ್ಳಿ ಸುಂದರಿ ಅಲ್ಲಲ್ಲ, ವಿಶ್ವಸುಂದರಿ ಅಲ್ಲ ಮಾಜಿ ವಿಶ್ವ ಸುಂದರಿ ಹೆಸರು ಆಶಾ ಭಟ್. ನಮ್ ಭದ್ರಾವತಿಯ ಚೆಲುವೆ. ಮಿಸ್ ಸುಪ್ರಾ ನ್ಯಾಶನಲ್ ಎಂಬ ಇಂಟರ್ನ್ಯಾಶನಲ್ ಬ್ಯೂಟಿ ಪೇಟೆಂಟ್ ಗೆದ್ದು ವಿಶ್ವ ಸುಂದರಿಯಾಗಿ, ಈ ಪಟ್ಟ ಗೆದ್ದ ಮೊದಲ ಕನ್ನಡತಿಯಾಗಿ ಒಂದಿಷ್ಟು ಕಾಲ ಸುದ್ದಿಯಲ್ಲಿದ್ದವರು. ದರ್ಶನ್ ನಟನೆಯ ‘ರಾಬರ್ಟ್” ಸಿನಿಮಾದ ನಾಯಕಿ. ‘ಕಣ್ಣು ಹೊಡಿಯಾಕ..’ ಅನ್ನೋ ಫೇಮಸ್ ಸಾಂಗ್ ನೆನಪಿಸಿಕೊಳ್ಳಿ. ಇದರ ತೆಲುಗು ವರ್ಶನ್ ಹಾಡಿ ಮಂಗ್ಲಿ ಎಂಬ ಗಾಯಕಿ ರಾತ್ರೋ ರಾತ್ರಿ ಜನಪ್ರಿಯರಾದರು. ಅಂಥಾ ಹುಡುಗಿ ಇದೀಗ ಈರುಳ್ಳಿ ಪಕೋಡ ಎಣ್ಣೆಗೆ ಬಿಡ್ತಿದ್ದಾರೆ ಅಂದರೆ ಅವರಿಗೆ ಏಕ್ದಂ ಬಡತನ ಬಂದಿದೆ ಅಂತಲ್ಲ. ಅವರು ಸಿಂಪಲ್ಲಾಗಿದ್ದಾರೆ ಅಂತಷ್ಟೇ ಅರ್ಥ.

ಆಶಾ ಭಟ್ ಮೊದಲು ಮೀಡಿಯಾದಲ್ಲಿದ್ದವರು. ಮಾಡೆಲಿಂಗ್ ಮಾಡುತ್ತಿದ್ದವರು. ಬ್ಯೂಟಿ ಪೇಜೆಂಟ್ ಗೆದ್ದ ಮೇಲೆ ಯೂನಿವರ್ಸಲ್ ಲೆವೆಲ್ನಲ್ಲಿ ಕೆಲಸ ಮಾಡಲಾರಂಭಿಸಿದರು. ಸದ್ಯ ತನ್ನದೇ ಸಂಸ್ಥೆ ಕಟ್ಟಿಕೊಂಡು ಸಾಮಾಜಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಲೆನಾಡಿನ ಹುಡುಗಿಯ ಪಕೋಡ ಮೋಡಿ

ಆಶಾ ಭಟ್ ಸೋಷಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಇಲ್ಲ. ಕೆಲವೊಮ್ಮೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕೋದಿದೆ. ಆದರೆ ಇನ್ಸ್ಟಾದಲ್ಲಿ ಲಕ್ಷಾಂತರ ಫ್ಯಾನ್ ಫಾಲೋವಿಂಗ್ ಇದ್ದರೂ ಅತ್ತ ತಲೆ ಹಾಕಲ್ಲ. ಇಂಥಾ ಸುಂದರಿ ಇದೀಗ ಕಿಚನ್ ಕಟ್ಟೆ ಮೇಲೇರಿ ಈರುಳ್ಳಿ ಪಕೋಡ ಮಾಡ್ತಿರೋ ಪೋಸ್ಟ್ ಸಖತ್ ಫೇಮಸ್ ಆಗಿದೆ. ಮಿಸ್ ಸುಪ್ರಾ ನ್ಯಾಶನಲ್ ಆದಮೇಲೆ ಇಂಟರ್ನ್ಯಾಶನಲ್ ಲೆವೆಲ್ನಲ್ಲಿ ಇವರ ಸಂಪರ್ಕ ಬೆಳೆದಿದೆ. ವಿದೇಶದಲ್ಲಿ ಹಲವು ಮಂದಿ ಸ್ನೇಹಿತರಿದ್ದಾರೆ. ಈ ಮಲೆನಾಡಿನ ಹುಡುಗಿ ಈರುಳ್ಳಿ ಪಕೋಡ ಮಾಡೋದನ್ನು ನೋಡಿ ಅವರಿಗೆ ಇದೇನು ಅಂತ ಅರ್ಥ ಆಗಿಲ್ಲ. ನೀನು ಈರುಳ್ಳಿಯನ್ನು ಫ್ರೈ ಮಾಡ್ತಿದ್ದೀಯಾ, ಅದಕ್ಕೆ ಏನ್ ಮಿಕ್ಸ್ ಮಾಡಿದ್ದೀಯ? ಈರುಳ್ಳಿ ಪಕೋಡ ಅಂದ್ರೇನೂ ಅಂತೆಲ್ಲ ಪ್ರಶ್ನೆ ಕೇಳ್ತಿರೋದು ಹಿಲೇರಿಯಸ್ ಆಗಿದೆ.

ಕೆಲವೊಂದಿಷ್ಟು ಜನ ಹಿಂಗೆ ಈರುಳ್ಳಿ ಪಕೋಡ ಮಾಡಿ ತಿಂತಿದ್ರೆ ನಿಮ್ ಡಯೆಟ್ ಕಥೆ ಏನಾಗುತ್ತೆ, ಅಂತೆಲ್ಲ ಪ್ರಶ್ನೆ ಮಾಡಿದ್ದಾರೆ. ಆಶಾ ಭಟ್ ಮಾತ್ರ ಇದ್ಯಾವುದಕ್ಕೂ ಉತ್ತರಿಸದೇ ತಾನು ಮಾಡಿರೋ ಈರುಳ್ಳಿ ಪಕೋಡ ಸವಿಯೋದ್ರಲ್ಲಿ ನಿರತರಾಗಿದ್ದಾರೆ.

ಈ ಹುಡುಗಿ ಸದ್ಯ ಮತ್ಯಾವುದೆ ಸಿನಿಮಾದಲ್ಲು ಕಾಣಿಸಿಕೊಂಡಿಲ್ಲ. ಆಗಾಗ ತನ್ನ ಹಳ್ಳಿಯ ಹೆಣ್ಮಕ್ಕಳ ಜೊತೆಗೆ ದೇವಸ್ಥಾನಕ್ಕೆ ಹೋಗುವ ಫೋಟೋ, ವಿದೇಶದ ಯಾವುದೋ ಜಾಗದ ಫೋಟೋ ಎಲ್ಲ ಪೋಸ್ಟ್ ಮಾಡುತ್ತಿರುತ್ತಾರೆ.



Source link

Leave a Reply

Your email address will not be published. Required fields are marked *