ಬೆಂಗಳೂರು (ಏ.18): ಪಿಜಿಗಳಲ್ಲಿ ಗುರಿಯಾಗಿಸಿ ಮೊಬೈಲ್ ಹಾಗೂ ಬೈಕ್ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಶಕ್ತಿವೇಲು ಬಂಧಿತನಾಗಿದ್ದು, ಆರೋಪಿಯಿಂದ ತಲಾ 5 ಲ್ಯಾಪ್‌ಟಾಪ್, ಮೊಬೈಲ್ ಹಾಗೂ 3 ಬೈಕ್‌ಗಳು ಸೇರಿ 6 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪಿಜಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ದೂರಿನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಮುಂಜಾನೆ ಕಾರ್ಯಾಚರಣೆ: ಸುಲಭವಾಗಿ ಹಣ ಸಂಪಾದನೆಗೆ ಪಿಜಿಗಳಲ್ಲಿ ಶಕ್ತಿವೇಲು ಕಳ್ಳತನಕ್ಕಿಳಿದಿದ್ದ. ಐಟಿ-ಬಿಟಿ ಉದ್ಯೋಗಿಗಳ ಬಾಹುಳ್ಯವಿರುವ ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಪಿಜಿಗಳೇ ಆತನ ಟಾರ್ಗೆಟ್ ಆಗಿದ್ದವು. ನಸುಕಿನಲ್ಲಿ ಕೆಲಸ ಮುಗಿಸಿ ಬಂದು ಕೋಣೆ ಬಾಗಿಲು ಹಾಕದೆ ಐಟಿ ಉದ್ಯೋಗಿಗಳು ಮಲಗುತ್ತಿದ್ದರು. ಆ ವೇಳೆ ಅವರಿಂದ ಮೊಬೈಲ್, ಲ್ಯಾಪ್‌ಟಾಪ್ ಮಾತ್ರವಲ್ಲದೆ ಬೈಕ್ ಕೀ ಪಡೆದು ಬೈಕ್ ಅನ್ನು ಕಳವು ಮಾಡುತ್ತಿದ್ದ. ಇದಕ್ಕಾಗಿ ತನ್ನೂರು ತಮಿಳುನಾಡಿನಿಂದ ನಸುಕಿನಲ್ಲಿ ಬಂದು ಕೃತ್ಯ ಎಸಗಿ ಶಕ್ತಿವೇಲು ಮರಳುತ್ತಿದ್ದ. ಅಂತೆಯೇ ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪಿಜಿಯಲ್ಲಿ ಆತ ಕೈ ಚಳಕ ತೋರಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Source link
ನಸುಕಿನಲ್ಲಿ ಪಿಜಿಗಳಿಗೆ ಕನ್ನಾಹಾಕುತ್ತಿದ್ದ ಖದೀಮ ಅರೆಸ್ಟ್; 5 ಲ್ಯಾಪ್‌ಟಾಪ್, ಮೊಬೈಲ್, 3 ಬೈಕ್ ಜಪ್ತಿ