Headlines

4 ಗಂಟೆಗೆ ₹5,000, 18 ವರ್ಷ ತುಂಬಿದ್ರೆ ಅಪ್ಪಿಕೊಳ್ತಾರೆ, ಕೈ ಹಿಡ್ಕೊತಾರೆ.. ಬೆಂಗಳೂರಿಗೂ ಬಂತು ‘ಕಡಲ್ ಥೆರಪಿ’ | Cuddle Therapy The Rise Of Professional Snuggling To Combat Loneliness

4 ಗಂಟೆಗೆ ₹5,000, 18 ವರ್ಷ ತುಂಬಿದ್ರೆ ಅಪ್ಪಿಕೊಳ್ತಾರೆ, ಕೈ ಹಿಡ್ಕೊತಾರೆ.. ಬೆಂಗಳೂರಿಗೂ ಬಂತು ‘ಕಡಲ್ ಥೆರಪಿ’ | Cuddle Therapy The Rise Of Professional Snuggling To Combat Loneliness



4 ಗಂಟೆಗೆ ₹5,000, 18 ವರ್ಷ ತುಂಬಿದ್ರೆ ಅಪ್ಪಿಕೊಳ್ತಾರೆ, ಕೈ ಹಿಡ್ಕೊತಾರೆ.. ಬೆಂಗಳೂರಿಗೂ ಬಂತು ‘ಕಡಲ್ ಥೆರಪಿ’ | Cuddle Therapy The Rise Of Professional Snuggling To Combat Loneliness

Cuddle Therapy Bangalore: ಇಂದಿನ ಯಾಂತ್ರಿಕ ಜೀವನದಲ್ಲಿ ಸಾವಿರಾರು ಜನರ ಪರಿಚಯವಿದ್ದರೂ, ಮನದ ಆಳದ ನೋವನ್ನು ಹಂಚಿಕೊಳ್ಳಲು ಅಥವಾ ಒಂದು ಕ್ಷಣ ಪ್ರೀತಿಯಿಂದ ಅಪ್ಪಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಈ ಭಾವನಾತ್ಮಕ ಶೂನ್ಯತೆಯನ್ನು ನೀಗಿಸಲು ಇಂದು ‘ಕಡಲ್ ಥೆರಪಿ’ ಎಂಬ ಹೊಸ ಪ್ರವೃತ್ತಿ ಜನ್ಮತಾಳಿದೆ.

ಗಂತೂ ಜನರು ಹಗಲಿರುಳು ಕೆಲಸದಲ್ಲಿ ಮುಳುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ‘ಫ್ರೆಂಡ್ಸ್’ ಇದ್ದರೂ, ಮನಸ್ಸಿನ ಮಾತು ಕೇಳಲು ಅಥವಾ ಪ್ರೀತಿಯಿಂದ ಅಪ್ಪಿಕೊಳ್ಳಲು ಯಾರೂ ಇರುವುದಿಲ್ಲ. ನಗರಗಳಲ್ಲಿ ಒಂಟಿತನ ಎಷ್ಟು ಹೆಚ್ಚಾಗಿದೆಯೆಂದರೆ, ಅನೇಕರು ಮಾನಸಿಕ ಒತ್ತಡದಿಂದ ಒಳಗೊಳಗೆ ಕಣ್ಣೀರು ಹಾಕುತ್ತಿದ್ದಾರೆ. ಒಂದು ಕ್ಷಣ ಯೋಚಿಸಿ, ಆಫೀಸ್ ಕೆಲಸ ಮುಗಿಸಿ ದಣಿದು ಮನೆಗೆ ಬರುತ್ತೀರಿ, ಫೋನ್ ಸ್ಕ್ರಾಲ್ ಮಾಡುತ್ತಲೇ ನಿದ್ದೆ ಹೋಗುತ್ತೀರಿ. ಆದರೆ ಮನಸ್ಸಿನಲ್ಲಿ ಒಂದು ಬಗೆಯ ಶೂನ್ಯತೆ ಕಾಡುತ್ತಿರುತ್ತದೆ.

ಯಾವುದೇ ನಿರೀಕ್ಷೆಗಳಿಲ್ಲದೆ, ನಮ್ಮನ್ನು ಜಡ್ಜ್ ಮಾಡದೆ, ಕೇವಲ ಪ್ರೀತಿಯಿಂದ ಅಪ್ಪಿಕೊಂಡು, ನಮ್ಮ ಮಾತು ಕೇಳುವ ಒಬ್ಬ ವ್ಯಕ್ತಿ ಇರಬಾರದೇ ಎಂದು ಅನ್ನಿಸುವುದು ಸಹಜ. ಇಂದಿನ ಸಂಬಂಧಗಳಲ್ಲಿ ಅತಿಯಾದ ನಿರೀಕ್ಷೆಗಳು, ಜಗಳ ಮತ್ತು ಬ್ರೇಕ್‌ಅಪ್‌ ಭಯ ಹೆಚ್ಚಾಗಿರುವುದರಿಂದ ಜನರು ಸುಲಭ ಮತ್ತು ಸುರಕ್ಷಿತ ಮಾರ್ಗವನ್ನು ಹುಡುಕುತ್ತಿದ್ದಾರೆ. ಇಲ್ಲಿಂದಲೇ ಶುರುವಾಗುವುದು ‘ಕಡಲ್ ಥೆರಪಿ’ (Cuddle Therapy) ಕಥೆ.

ಏನಿದು ಕಡಲ್ ಥೆರಪಿ?

ಸರಳವಾಗಿ ಹೇಳುವುದಾದರೆ, ಇದು ಒಂದು ರೀತಿಯ ‘ಪ್ಲೇಟೋನಿಕ್ ಟಚ್ ಥೆರಪಿ’ (Platonic Touch Therapy). ಅಂದರೆ, ಇದು ಸಂಪೂರ್ಣವಾಗಿ ಲೈಂಗಿಕವಲ್ಲದ, ಕೇವಲ ಸ್ನೇಹಪರ ಸ್ಪರ್ಶದ ಚಿಕಿತ್ಸೆ. ಇದರಲ್ಲಿ ತರಬೇತಿ ಪಡೆದ ‘ಕಡಲರ್’ (Cuddler) ಅಥವಾ ಥೆರಪಿಸ್ಟ್ ಗ್ರಾಹಕರ ಜೊತೆ ಸಮಯ ಕಳೆಯುತ್ತಾರೆ. ಅವರು ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ ಅಥವಾ ನಿಮ್ಮ ತಲೆಯನ್ನು ಅವರ ಹೆಗಲ ಮೇಲೆ ಇಟ್ಟುಕೊಳ್ಳಲು ಅವಕಾಶ ನೀಡುತ್ತಾರೆ.

ಇದರ ನಿಯಮಗಳು ಕಟ್ಟುನಿಟ್ಟಾಗಿವೆ

ಪೂರ್ಣ ಬಟ್ಟೆ ಧರಿಸಿರಬೇಕು.
ಪರಸ್ಪರ ಒಪ್ಪಿಗೆ ಇರಬೇಕು.
ಕಿಸ್ ಮಾಡುವುದು ಅಥವಾ ಲೈಂಗಿಕ ಸ್ಪರ್ಶ ಸಂಪೂರ್ಣ ನಿಷಿದ್ಧ.
ಈ ಸೆಷನ್‌ಗಳು ಸಾಮಾನ್ಯವಾಗಿ 1 ರಿಂದ 4 ಗಂಟೆಗಳವರೆಗೆ ಇರುತ್ತವೆ.

ಭಾರತದ ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ಇದು ಜನಪ್ರಿಯವಾಗುತ್ತಿದೆ. 3-4 ಗಂಟೆಗಳ ಸೆಷನ್‌ಗೆ ಸುಮಾರು ₹5,000 ವರೆಗೆ ಶುಲ್ಕ ಇರುತ್ತದೆ. ‘Cuddlist.com’ ನಂತಹ ಜಾಗತಿಕ ವೇದಿಕೆಗಳಲ್ಲಿ ಪ್ರಮಾಣೀಕೃತ ಥೆರಪಿಸ್ಟ್‌ಗಳು ಲಭ್ಯವಿದ್ದಾರೆ.

ಇದು ಹೇಗೆ ಕೆಲಸ ಮಾಡುತ್ತದೆ?
ಒಪ್ಪಿಗೆ ಮತ್ತು ನಿಯಮ: ಸೆಷನ್ ಆರಂಭಕ್ಕೂ ಮುನ್ನ ಇಬ್ಬರೂ ನಿಯಮಗಳನ್ನು ಒಪ್ಪಬೇಕು. ಯಾರು ಬೇಕಾದರೂ ಯಾವುದೇ ಕ್ಷಣದಲ್ಲಿ ಸೆಷನ್ ನಿಲ್ಲಿಸಬಹುದು.
ಸುರಕ್ಷತೆ: ಅಧಿಕೃತ ಪ್ಲಾಟ್‌ಫಾರ್ಮ್‌ಗಳಲ್ಲಿ ಹಿನ್ನೆಲೆ ತಪಾಸಣೆ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಇಬ್ಬರೂ 18 ವರ್ಷ ಮೇಲ್ಪಟ್ಟವರಾಗಿರಬೇಕು.
ಹಾರ್ಮೋನ್ ಪ್ರಭಾವ: ಮಾನವ ಸ್ಪರ್ಶದಿಂದ ದೇಹದಲ್ಲಿ ‘ಆಕ್ಸಿಟೋಸಿನ್’ (Oxytocin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ‘ಫೀಲ್ ಗುಡ್’ ಹಾರ್ಮೋನ್ ಎನ್ನುತ್ತಾರೆ. ಇದು ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಭಾರತದಲ್ಲಿನ ಪರಿಸ್ಥಿತಿ
ಭಾರತದಲ್ಲಿ ಇದು ಇನ್ನೂ ಹೊಸತು. ಕೆಲವು ಜನರು ಇದನ್ನು ‘ಡೇಟಿಂಗ್’ ಎಂದು ತಪ್ಪಾಗಿ ಭಾವಿಸುತ್ತಾರೆ. ಆದ್ದರಿಂದ ‘Ko-Partner’ ನಂತಹ ಪ್ಲಾಟ್‌ಫಾರ್ಮ್‌ಗಳು ಇದು ಕೇವಲ ವೃತ್ತಿಪರ ಸೇವೆಯೆಂದು ಸ್ಪಷ್ಟಪಡಿಸುತ್ತವೆ. ಇಲ್ಲಿ ಪ್ರತಿದಿನ ಸಾವಿರಾರು ಜನರು ನೋಂದಾಯಿಸಿಕೊಳ್ಳುತ್ತಿದ್ದಾರೆ, ಇದರಲ್ಲಿ 32-35 ವರ್ಷ ವಯಸ್ಸಿನವರೇ ಹೆಚ್ಚು.

ಪ್ರಯೋಜನಗಳು
ಒಂಟಿತನದಿಂದ ಮುಕ್ತಿ.
ಆತಂಕ, ಒತ್ತಡ ಮತ್ತು ಭಾವನಾತ್ಮಕ ಸುಸ್ತು ಕಡಿಮೆ ಮಾಡುವುದು.
ಯಾವುದೇ ನಿರೀಕ್ಷೆಯಿಲ್ಲದ ಭಾವನಾತ್ಮಕ ಬೆಂಬಲ.

ಎಚ್ಚರಿಕೆ ವಹಿಸಿ
ತಜ್ಞರ ಪ್ರಕಾರ, ಇದು ತಾತ್ಕಾಲಿಕ ಪರಿಹಾರ ನೀಡಬಹುದೇ ಹೊರತು ನಿಜವಾದ ಸಂಬಂಧಗಳಿಗೆ ಪರ್ಯಾಯವಲ್ಲ. ಇದಕ್ಕೆ ಅತಿಯಾಗಿ ದಾಸರಾದರೆ ಒಂಟಿತನ ಮತ್ತಷ್ಟು ಹೆಚ್ಚಾಗಬಹುದು. ಭಾರತದಲ್ಲಿ ನಕಲಿ ವೆಬ್‌ಸೈಟ್‌ಗಳ ಕಾಟವಿದ್ದು, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷತೆಯ ರಿಸ್ಕ್ ಹೆಚ್ಚಿದೆ. ಆದ್ದರಿಂದ ಯಾವಾಗಲೂ ಅಧಿಕೃತ ಮತ್ತು ವಿಮರ್ಶೆಗಳನ್ನು ಹೊಂದಿರುವ ಪ್ಲಾಟ್‌ಫಾರ್ಮ್‌ಗಳನ್ನು ಮಾತ್ರ ಆರಿಸಿ.

ಕೊನೆಯ ಮಾತು: ಕಡಲ್ ಥೆರಪಿ ಎಂಬುದು ಕೇವಲ ಒಂದು ಸಾಧನ. ನಿಜವಾದ ಸಂತೋಷ ಇರುವುದು ಪ್ರೀತಿ, ವಿಶ್ವಾಸ ಮತ್ತು ಕಷ್ಟಪಟ್ಟು ಕಟ್ಟಿದ ಸಂಬಂಧಗಳಲ್ಲಿ ಮಾತ್ರ. ನೀವು ಒಂಟಿತನ ಅನುಭವಿಸುತ್ತಿದ್ದರೆ ಮೊದಲು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡಿ. 



Source link

Leave a Reply

Your email address will not be published. Required fields are marked *