ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನು ಮನೆಗೆ ತಂದ ಸೌಂದರ್ಯಳಿಗೆ ಈಗ ಸಂಕಷ್ಟ ಎದುರಾಗಿದೆ. ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೌಂದರ್ಯಳನ್ನು ಸೋಲಿಸಲು, ದೀಪಾಳು ಉಚಿತ ಸಿಲಿಂಡರ್ ಗ್ಯಾರೆಂಟಿಯ ಆಮಿಷವೊಡ್ಡಿ ಜಾಜಿಯನ್ನು ಕಣಕ್ಕಿಳಿಸಿದ್ದಾಳೆ.
ಬ್ರಹ್ಮಗಂಟು ಸೀರಿಯಲ್ (Brahmagantu Serial) ಸದ್ಯ ದಿಶಾ ಮತ್ತು ಸೌಂದರ್ಯಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ದಿಶಾಳನ್ನೇ ಚಿರುಗೆ ಮದ್ವೆ ಮಾಡಿಸಿರೋ ಸೌಂದರ್ಯಳಿಗೆ ಇದೀಗ ಸಂಕಷ್ಟ ಎದುರಾಗಿದೆ.

ನಾನೇ ಸಾಕಿದಾ ಗಿಣಿ… ಎಂದು ಹಾಡುವ ಹೇಳುವ ಸ್ಥಿತಿ ಸೌಂದರ್ಯಳಿಗೆ ಬಂದಿದೆ. ಸೌಂದರ್ಯಳ ಹುಟ್ಟಡಗಿಸಲು ದೀಪಾ ದಿಶಾ ಆಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇದೀಗ ಮಹಿಳಾ ಮಂಡಳದ ಅಧ್ಯಕ್ಷ ಸ್ಥಾನಕ್ಕೆ ಸೌಂದರ್ಯ ವಿರುದ್ಧ ಜಾಜಿಯನ್ನು ನಿಲ್ಲಿಸಿದ್ದಾಳೆ.

ಪ್ರತಿಬಾರಿಯೂ ಅವಿರೋಧವಾಗಿ ಆಯ್ಕೆಯಾಗ್ತಿರೋ ಸೌಂದರ್ಯಳನ್ನು ಸೋಲಿಸೋದು ಅಷ್ಟು ಸುಲಭವಲ್ಲ ಎನ್ನೋದು ದೀಪಾಳಿಗೆ ಗೊತ್ತಿರುವ ಕಾರಣ, ಜನರು ವೋಟ್ ಹಾಕಲು ಉಚಿತಕ್ಕಾಗಿ ಹಂಬಲಿಸೋದೂ ರಿಯಲ್ ಲೈಫ್ನಲ್ಲಿ ನಡೆಯುವುದನ್ನೇ ಈ ಸೀರಿಯಲ್ನಲ್ಲಿಯೂ ತೋರಿಸಲಾಗಿದೆ.

ಅಷ್ಟಕ್ಕೂ ದೀಪಾ, ಎಲ್ಲರಿಗೂ ಕೊಟ್ಟಿರೋದು ಒಂದೇ ಗ್ಯಾರೆಂಟಿ. ಅದು ಸಿಲಿಂಡರ್ ನೀಡೋದು. ಎಲೆಕ್ಷನ್ ಬಂದಾಗ ಒಂದು ಮತಕ್ಕೆ 5-10 ಸಾವಿರ ಕೊಡುವುದು ಇಂದಿಗೂ ನಡೆದೇ ಇದೆ. ಅದೇ ರೀತಿ ಗ್ಯಾರೆಂಟಿಗಳ ಸುರಿಮಳೆಯೂ ಶುರುವಾಗುತ್ತದೆ. ಇದೀಗ ಸಿಲಿಂಡರ್ ನೀಡುವ ಮೂಲಕ ದಿಶಾ ಜಾಜಿಯನ್ನು ಗೆಲ್ಲಿಸುತ್ತಿದ್ದಾಳೆ.

ಸದ್ಯ ಚುನಾವಣೆ ರಿಸಲ್ಟ್ ಬರಬೇಕಿದೆ ಅಷ್ಟೇ. ಆದರೆ ಇದು ಸೀರಿಯಲ್ ಆಗಿರೋ ಕಾರಣ, ಅದಕ್ಕಿಂತ ಮುಖ್ಯವಾಗಿ ಮಹಿಳೆಯರಿಗೇ ಗಿಫ್ಟ್ ಸಿಕ್ಕಮೇಲೆ ಇನ್ನು ಕೇಳಬೇಕೆ, ಜಾಜಿ ಗೆಲ್ಲೋದು ಕನ್ಫರ್ಮ್ ಆಗಿದೆ.

ಆದರೆ, ಇದರ ಪ್ರೊಮೋ ರಿಲೀಸ್ ಆಗುತ್ತಲೇ ಈ ಬಗ್ಗೆ ತನಿಖೆ ಮಾಡಬೇಕು ಎಂದು ನೆಟ್ಟಿಗರು ತಮಾಷೆಯಿಂದ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಕಾರಣ, ಸದ್ಯ ಸಿಲಿಂಡರ್ ಸ್ಟಾಕ್ ಇಲ್ಲ. ಒಬ್ಬರಿಗೆ ಒಂದು ಸಿಲಿಂಡರ್ ಸಿಗೋದೇ ಕಷ್ಟ ಆಗಿರುವಾಗ, ಗಿಫ್ಟ್ ಕೊಡಲು ಅಷ್ಟೆಲ್ಲಾ ಸಿಲಿಂಡರ್ ಹೇಗೆ ಬಂದಿದೆ, ಇದರ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಆಗ್ತಿರೋ ಕಾರಣ, ಸೀರಿಯಲ್ ಮೇಲೆ ಕೇಸ್ ಹಾಕಬೇಕು ಎಂದು ತಮಾಷೆಯಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ!

Source link
ಎಲೆಕ್ಷನ್ ಗೆಲ್ಲಲು ಒಂದೇ ಗ್ಯಾರೆಂಟಿ ಸಾಕೆಂದು ತೋರಿದ Brahmagantu ದೀಪಾ: ಕೇಸ್ ಹಾಕಲು ವೀಕ್ಷಕರು ರೆಡಿ