ಸಂಜಯ್ ದತ್ ನಟಿಸಿ, ನಿರ್ಮಿಸಿರೋ ‘ಆಖ್ರಿ ಸವಾಲ್’ ಮೊದಲಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಾ ಬರುತ್ತಿದೆ. ಈ ಚಿತ್ರದ ಪೋಸ್ಟರ್‌ಗಳು ಗಮನ ಸೆಳೆದಿವೆ. ಈಗ ಚಿತ್ರ ತಂಡ ಒಂದಷ್ಟು ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಒಂದಷ್ಟು ಪ್ರಶ್ನೆಗಳಿವೆ. ಈವರೆಗೆ ಯಾರೂ ಕೇಳದ ಪ್ರಶ್ನೆಗಳು. ಇದಕ್ಕೆಲ್ಲ ಉತ್ತರ ‘ಆಕ್ರಿ ಸವಾಲ್’ ಸಿನಿಮಾದಲ್ಲಿ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಮೇ 8ರಂದು ‘ಆಕ್ರಿ ಸವಾಲ್’ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾ ಪ್ರಚಾರ ಕೆಲಸ ಮಾಡಲಾಗುತ್ತಿದೆ. ವಿವಿಧ ರೀತಿಯ ಪೋಸ್ಟರ್‌ಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆದಿದೆ.ಈಗ ರಿಲೀಸ್ ಆಗಿರೋ ಪ್ರಶ್ನೆಗಳು ಸಾಕಷ್ಟು ಆಳವಾದ ಅರ್ಥವನ್ನು ಹೊಂದಿವೆ.
‘ಮಹಾತ್ಮ ಗಾಂಧಿ ಹತ್ಯೆಯ ಹಿಂದೆ ಆರ್ ಎಸ್ ಎಸ್ ಕೈವಾಡ ಇತ್ತಾ?’, ‘ಬಾಬ್ರಿ ಮಸೀದಿ ನಾಶದ ಹಿಂದೆ ಆರ್ ಎಸ್ ಎಸ್ ಇತ್ತಾ?’, ‘ತುರ್ತುಪರಿಸ್ಥಿತಿ ಹಿಂದಿನ ಸತ್ಯವೇನು? ಇದರಲ್ಲಿ ಆರ್ಎಸ್ನ ಪಾತ್ರವೇನು? ಎಂಬ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ.
ಈ ದೇಶದ ಇತಿಹಾಸಕ್ಕೆ ಸಂಬಂಧಿಸಿದ ಗಂಭೀರವಾದ ಪ್ರಶ್ನೆ. ‘ಯಾರೂ ಈ ಬಗ್ಗೆ ಪ್ರಶ್ನೆ ಮಾಡುವ ಧೈರ್ಯ ಮಾಡಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಮೇ 8 ರಂದು ಉತ್ತರ ಪರೀಕ್ಷೆ’ ಎಂದು ಬರೆಯಲಾಗಿದೆ. ಅಂದರೆ ಮೇ 8ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಧುರಂಧರ’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಕ್ರಿ ಸವಾಲ್’
‘ಆಕ್ರಿ ಸವಾಲ್’ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ಮಾಡಿದ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನ ಮಾಡಿದ್ದಾರೆ. ಮರಾಠಿಯಲ್ಲಿ ನಿರ್ದೇಶನ ಮಾಡಿದ್ದ ‘ಪೊಕಾಸೋ’ (2021) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ ಅವರು ಹಿಂದಿಯಲ್ಲಿ ತಮ್ಮ ಎರಡನೇ ಸಿನಿಮಾ ಮಾಡಿದ್ದಾರೆ. ‘ಆಕ್ರಿ ಸವಾಲ್’ ಚಿತ್ರವನ್ನು ನಿಖಿಲ್ ನಂದ್ ಪ್ರೆಸೆಂಟ್ ಮಾಡುತ್ತಿದ್ದಾರೆ. ನಿಖಿಲ್ ಹಾಗೂ ಸಂಜಯ್ ದತ್ ಇದನ್ನು ನಿರ್ಮಾಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.