Nitish Kumar resign as CM ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ | Nitish Kumar Resigns As Bihar Chief Minister After Final Cabinet Meeting

ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ, ಬಿಹಾರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳ ಇದೀಗ ಮುಂದಿನ ಸಿಎಂ ರೇಸ್‌ನಲ್ಲಿ ಕೆಲವರು ಕಾಣಿಸಿಕೊಂಡಿದ್ದಾರೆ. 

ಪಾಟ್ನಾ (ಏ.14) ಬಿಹಾರದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಕೊನೆಯ ಕ್ಯಾಬಿನೆಟ್ ಸಭೆ ನಡೆಸಿದ ನಿತೀಶ್ ಕುಮಾರ್, ಇದೀಗ ರಾಜ್ಯಪಾಲ ಸೈಯದ್ ಅತ್ನಾ ಹಸ್ನೈನ್‌ಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಸಚಿವ ಸಂಪುಟ ವಿಸರ್ಜನೆ ಮಾಡಿದ ನಿತೀಶ್ ಕುಮಾರ್, ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ.

ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್ ಏಪ್ರಿಲ್ 9 ರಂದು ರಾಜ್ಯಸಭೆ ಸದಸ್ಯರಾಗಿ ಪ್ರಮಮಾಣವಚನ ಸ್ವೀಕರಿಸಿದ್ದರು. 2 ದಶಕಗಳ ಬಳಿಕ ನಿತೀಶ್ ಕುಮಾರ್ ಮತ್ತೆ ಸಂಸತ್ತು ಪ್ರವೇಶಿಸಿದ್ದಾರೆ. ಇತ್ತ ಬಿಹಾರ ರಾಜಕೀಯದಲ್ಲಿ ನಿತೀಶ್ ಕುಮಾರ್ ಕಾಲ ಅತ್ಯಂತ ಪ್ರಮುಖವಾಗಿದೆ. ಜಿಡಿಯು ಮೂಲಕ ಬಿಹಾರದಲ್ಲಿ ಸುದೀರ್ಘ ಕಾಲಗಳ ಮೂಲಕ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭಾವುಕ ಕ್ಷಣ

ನಿತೀಶ್ ಕುಮಾರ್ ರಾಜೀನಾಮೆ ನಮಗೆ ಭಾವನಾತ್ಮಕ ಕ್ಷಣವಾಗಿತ್ತು. ಬಿಹಾರದಲ್ಲಿ ಆಡಳಿತದ ಮೂಲಕ ಸುಧಾರಣೆ, ಅಭಿವೃದ್ಧಿ ಹಾಗೂ ನವ ಬಿಹಾರ ಪರಿಕಲ್ಪನೆಯಡಿ ಆಳಿದ ನಿತೀಶ್ ಕುಮಾರ್ ಇಂದು ರಾಜೀನಾಮೆ ನೀಡಿದ್ದಾರೆ. ಸಂಪುಟ ವಿಸರ್ಜನೆ ಮಾಹಿತಿ ನೀಡಿದ್ದ ನಿತೀಶ್ ಕುಮಾರ್, ಔಪಚಾರಿಕ ಮಾತುಕತೆ ನಡೆಸಿದ್ದಾರೆ ಎಂದು ರಾಜ್ಯ ಸಚಿವ ರಾಮ್ ಕೃಪಾಲ್ ಯಾದವ್ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *