ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಿ ಎರಡು ತಿಂಗಳಾಗಿದ್ದು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಜಯ ಅವರು ಪತ್ನಿ ರಶ್ಮಿಕಾ ಅವರನ್ನು ಬಹಿರಂಗವಾಗಿ ಹೊಗಳಿದ್ದಾರೆ. ಪತಿಯ ಪ್ರೀತಿಯ ಮಾತುಗಳನ್ನು ಕೇಳಿ ರಶ್ಮಿಕಾ ಅವರು ವೇದಿಕೆಯಲ್ಲೇ ಭಾವುಕರಾಗಿ ಆನಂದಭಾಷ್ಪ ಸುರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರು ಮದುವೆಯಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಕೆಲ ವರ್ಷಗಳಿಂದ ಡೇಟಿಂಗ್ ಮಾಡಿದ್ದ ಜೋಡಿ ಕೊನೆಗೂ ಮದುವೆಯ ಮುದ್ರೆ ಒತ್ತಿದೆ. ಮದುವೆಯಾದ ಬೆನ್ನಲ್ಲೇ ಇಬ್ಬರೂ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಇದಾಗಲೇ ಈ ಜೋಡಿ, ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದೆ. ವಿಜಯ ದೇವರಕೊಂಡ ಅವರು ರಶ್ಮಿಕಾರನ್ನೂ, ರಶ್ಮಿಕಾ ವಿಜಯ ದೇವರಕೊಂಡ ಅವರನ್ನೂ ಸಾಕಷ್ಟು ಹೊಗಳಿದ್ದಾರೆ.

ಇದೀಗ, ಕಾರ್ಯಕ್ರಮವೊಂದರಲ್ಲಿ ಎಲ್ಲರ ಎದುರು ವಿಜಯ ದೇವರಕೊಂಡ ಅವರು ಹೇಳಿರುವ ಮಾತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಕಣ್ಣೀರಿಗೆ ಕಾರಣವಾಗಿದೆ.

ಅಷ್ಟಕ್ಕೂ ವಿಜಯ್ ಅವರು ಇಲ್ಲಿ ರಶ್ಮಿಕಾ ಅವರು ತಮಗೇಕೆ ಇಷ್ಟ ಎಂದು ಹೇಳಿದ್ದಾರೆ. ರಶ್ಮಿಕಾ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದ್ದು, ಇದು ನಟಿಯ ಆನಂದ ಬಾಷ್ಪಕ್ಕೆ ಕಾರಣವಾಗಿದೆ.

ರಶ್ಮಿಕಾ ಒಬ್ಬಳು ಅದ್ಭುತ ಮಹಿಳೆ. ನಕಾರಾತ್ಮಕತೆಯನ್ನು ಎದುರಿಸುತ್ತಿದ್ದರೂ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡುತ್ತಾರೆ ಮತ್ತು ಯಾವಾಗಲೂ ಎಲ್ಲರಿಗೂ ಪ್ರೀತಿ ತೋರುತ್ತಾರೆ, ದಯೆಯನ್ನು ಕಾಪಾಡುತ್ತಾರೆ ಎಂದರು.

"ಈ ಜಗತ್ತು ನನ್ನನ್ನು ಬದಲಾಯಿಸಬಾರದು ಎಂದು ನಾನು ಬಯಸುತ್ತೇನೆ. ಹಾಗೆಯೇ ರಶ್ಮಿಕಾ ಕೂಡ ನನ್ನನ್ನು ಬದಲಾಯಿಸಲು ಹೋಗುವುದಿಲ್ಲ. ಈ ಬೇಡಿಕೆಯ ಉದ್ಯಮದಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಆಕೆ ಸದಾ ಶ್ರಮಿಸುತ್ತಾರೆ ಎಂದರು ನಟ.

Source link
ಮದ್ವೆಯಾಗುತ್ತಿದ್ದಂತೆಯೇ ರಶ್ಮಿಕಾ ಬಗ್ಗೆ ಎಲ್ಲರೆದುರು ಹೀಗೆ ಹೇಳಿದ ವಿಜಯ ದೇವರಕೊಂಡ: ನಟಿ ಕಣ್ಣೀರು