
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. ದೀದಿಯ ಆಡಳಿತದಿಂದ ಜನರು ಬೇಸತ್ತಿದ್ದು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಗೆದ್ದ ನಂತರವೂ ಬಂಗಾಳವನ್ನು ನಿಯಂತ್ರಿಸುವುದು ಮೋದಿಗೆ ಸುಲಭವಲ್ಲ ಎಂದು ವಿಶ್ಲೇಷಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಇದೇ ತಿಂಗಳು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೀದೀ ಎಂದೇ ಫೇಮಸ್ ಆಗಿರೋ ಮಮತಾ ಬ್ಯಾನರ್ಜಿ ಅವರು ಸತತ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮೊದಲು ಮೇ 20, 2011 ರಂದು ಅಧಿಕಾರ ವಹಿಸಿಕೊಂಡರು ಮತ್ತು ನಂತರ 2016 ಮತ್ತು 2021 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಮುನ್ನಡೆಸಿದರು. ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ. ಆದರೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದೆ.
ನುಸುಳುಕೋರರ ಶಾಕ್
ದೀದಿಯ ಕೋಟೆಯನ್ನು ಭೇದಿಸುವಲ್ಲಿ ಮೋದಿ ಸಕ್ಸಸ್ ಆಗ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಏಕೆಂದರೆ, ಪಶ್ಚಿಮ ಬಂಗಾಳ ಕೆಲವು ವರ್ಷಗಳಿಂದ ಇನ್ನಿಲ್ಲದಂತೆ ಹಿಂಸಾಚಾರ ಕಂಡಿದೆ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅಲ್ಲಿದ್ದವರು ಸಹಿಸುತ್ತಿಲ್ಲ. ನುಸುಳುಕೋರರಿಗೆ ಆಶ್ರಯ ನೀಡಿದ್ದ ಮಮತಾ ಬ್ಯಾನರ್ಜಿಗೆ SIR ಶಾಕ್ ಕೊಟ್ಟಿದೆ. ಲಕ್ಷಾಂತರ ಮಂದಿ ನುಸುಳುಕೋರರು ಗಡಿಪಾರಾಗಿದ್ದಾರೆ. ಇವರೆಲ್ಲರೂ ಮಮತಾಗೆ ವೋಟರ್ಸ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಸಾಕಷ್ಟು ರಂಗೇರಿಸುತ್ತಿದೆ.
ದೀದೀ ಫ್ಯಾನ್ಸ್
ಹಾಗೆಂದು, ಮಮತಾ ದೀದಿಯ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಇದೇ ಕಾರಣಕ್ಕಾಗಿಯೇ ಇಷ್ಟು ವರ್ಷ ಆಕೆ ಅಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ ಈ ಬಾರಿಯ ಚುನಾವಣೆ ದೀದಿಯ ಲೆಕ್ಕಾಚಾರವನ್ನೆಲ್ಲಾ ಬುಡಮೇಲು ಮಾಡತ್ತಾ? ಬಿಜೆಪಿ ಅಧಿಕಾರಕ್ಕೆ ಬರತ್ತಾ ಎನ್ನುವ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಹಲವಾರು ಜ್ಯೋತಿಷಿಗಳು ಇದು ನಿಜ ಎನ್ನುತ್ತಿದ್ದಾರೆ. ಮಮತಾ ದೀದಿಯ ಅಧಿಕಾರ ಮುಕ್ತಾಯೊಂಡಿದೆ,, ಈಕೆಯ ಯುಗಾಂತ್ಯವಾಗಿದೆ. ಈಗ ಏನಿದ್ದರೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುಗ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮೋದಿಗೆ ಸುಲಭವಲ್ಲ
ಆದರೆ,, ಬಿಜೆಪಿ ಅಧಿಕಾರಕ್ಕೆ ಬಂದರೂ, ಪಶ್ಚಿಮ ಬಂಗಾಳವನ್ನು ಕಂಟ್ರೋಲ್ಗೆ ತೆಗೆದುಕೊಳ್ಳುವುದು ನರೇಂದ್ರ ಮೋದಿ ಅವರಿಗೆ ಅಷ್ಟು ಸುಲಭದ ಮಾತಲ್ಲ ಎಂದು ಖ್ಯಾತ ಜ್ಯೋತಿಷಿ ಡಾ.ವೈ.ರಾಖಿ ಅವರು ಹೇಳಿದ್ದಾರೆ. ಶಾಲಿನಿ ಕಪೂರ್ ತಿವಾರಿ ಅವರ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರಾಖಿ ಅವರು, ಮೋದಿ ಪಕ್ಕಾ ಈ ಬಾರಿ ಪಶ್ಚಿಮ ಬಂಗಾಳ ಗೆಲ್ಲುವುದು ಖಚಿತ. ಆದರೆ ಅವರು ಸಂಪೂರ್ಣ ಕಂಟ್ರೋಲ್ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಇನ್ನೂ ಒಂದೂವರೆ ವರ್ಷವಾದರೂ ಸಾಕಷ್ಟು ಹೆಣಗಾಡಬೇಕಾಗುತ್ತದೆ. ಬಿಜೆಪಿ ಅಲ್ಲಿ ಅಧಿಕಾರಕ್ಕೆ ಸ್ವತಂತ್ರವಾಗಿ ಬರುವುದು ಕಷ್ಟ. ಸ್ಥಳೀಯರ ನೆರವು ಪಡೆದುಕೊಂಡು ಗೆಲುವು ಸಾಧಿಸುತ್ತದೆ ಎಂದಿದ್ದಾರೆ ರಾಖಿ.