ಪ್ರತಿಭಟನಾಕಾರರ ಬಂಧಿಸಿದ ಪೊಲೀಸ್ಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ಧಾರವಾಡ, ಏಪ್ರಿಲ್ 14: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗಾಗಿ (ಸರ್ಕಾರಿ ಉದ್ಯೋಗಗಳು) ಧಾರವಾಡದಲ್ಲಿ ನಿರಂತರವಾಗಿ ಉದ್ಯೋಗಕಾಂಕ್ಷಿಗಳ ಹೋರಾಟ (ಪ್ರತಿಭಟನೆ) ಮಾಡುತ್ತಲೇ ಬಂದಿದ್ದಾರೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಹೋರಾಟ ಮಾಡಿದ ಬಳಿಕವಷ್ಟೇ ಸರಕಾರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಇದೀಗ ಹೋರಾಟ ಮುಂದುವರೆದ ಭಾಗವಾಗಿ ಇಂದು ವಿದ್ಯಾರ್ಥಿಗಳ ಸಂಘಟನೆಯಿಂದ ಹೋರಾಟವನ್ನು ನಡೆಸಲಾಯಿತು. ಆದರೆ ಹೋರಾಟಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು, ಬೆಳಿಗ್ಗೆಯೇ ಮುಖಂಡರನ್ನು ಬಂಧಿಸಿ, ಹೋರಾಟಕ್ಕೆ ಬ್ರೇಕ್ ಹಾಕಿದರು.
ರಾಜ್ಯದಲ್ಲಿ ಖಾಲಿ 2.84 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ವಿದ್ಯಾರ್ಥಿಗಳ ಇರುವ ಸಂಘಟನೆ ಕರೆ ಕೊಟ್ಟಿತ್ತು. ಈ ಕರೆಗೆ ರೈತ ಸಂಘಟನೆ ಹಾಗೂ ಇತರ ಎಡಪಂಥಿಯ ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ಆದರೆ ಹೋರಾಟಕ್ಕೆ ಉಪನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿಂದೆ ನಡೆದಿದ್ದ ಅನೇಕ ಹೋರಾಟದ ವೇಳೆ ಅಹಿತಕರ ಘಟನೆಗಳು ನಡೆದಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ಇದನ್ನೇ ಕಾರಣವಾಗಿಟ್ಟುಕೊಂಡು ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಹೋರಾಟ ಮಾಡೋದಾಗಿ ವಿದ್ಯಾರ್ಥಿ ಸಂಘಟನೆ ಹೇಳಿದ್ದರು.
ಐವರು ಮುಖಂಡರ ಬಂಧನ
ಅಂಬೇಡ್ಕರ್ ಜಯಂತಿ ದಿನವೇ ನಮ್ಮ ನಾಡಿಗೆ ಭೀಮನೆಡೆಗೆ ಘೋಷವಾಕ್ಯದಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಅನುಮತಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಹೋರಾಟ ಮಾಡಿಯೇ ತೀರೋದಾಗಿ ಹೇಳಿ ಬೀದಿಗೆ ಇಳಿದರು. ಈ ವೇಳೆ ಯಲ್ಲಪ್ಪ ಹೆಗಡೆ, ನಾಗರಾಜ ಸೇರಿದಂತೆ ಐವರು ಮುಖಂಡರನ್ನು ಪೊಲೀಸರು ಜಯನಗರ ವೃತ್ತದ ಬಳಿ ಬಂಧಿಸಿ, ಕರೆದೊಯ್ದರು. ಪೊಲೀಸರ ಈ ಕ್ರಮಕ್ಕೆ ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಉದ್ಯೋಗಕಾಂಕ್ಷಿಗಳ ಹೋರಾಟಕ್ಕೆ ಗ್ರೀನ್ ಸಿಗ್ನಲ್: ಷರತ್ತು ಅನ್ವಯ
ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಹೋರಾಟದಿಂದಾಗಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಇದೇ ವೇಳೆ ನಗರದ ಜ್ಯೂಬಿಲಿ ವೃತ್ತದ ಬಳಿ ರಸ್ತೆ ತಡೆ ನಡೆಸಿದ್ದಕ್ಕೆ ಗಂಟೆಗಳ ಕಾಲ ಇಡೀ ಧಾರವಾಡ ಸ್ತಬ್ಧವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ಧಾರವಾಡ ಮೊರೆ ಹೋಗಿತ್ತು. ಇದರ ವಿಚಾರಣೆ ನಡೆಸಿದ್ದ ಸಂಘಟನೆಗೆ ಹೋರಾಟ ನಡೆಸಲು ಅನುಮತಿ ನೀಡಿ, ಹುಬ್ಬಳ್ಳಿಯ ನೆಹರು ಮೈದಾನದಲ್ಲಿ 100 ಜನರಷ್ಟೇ ಹೋರಾಟ ನಡೆಸಲು ಸೂಚಿಸಿತ್ತು.
ಸರ್ಕಾರ ಪರಿಣಾಮಕಾರಿಯೂ ಹೋರಾಟ ಮಾಡೋದು ಎಷ್ಟು ಸರಿ? ಸಚಿವ ಸಂತೋಷ ಲಾಡ್
ಹೋರಾಟದಲ್ಲಿ ಭಾಗವಹಿಸುವವರ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸರಿಗೆ ನೀಡಿ, ಬಳಿಕ ಹೋರಾಟ ಮಾಡುವಂತೆ ಸೂಚನೆ ನೀಡಿತ್ತು. ಇದೇ ಕಾರಣದಿಂದ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಆದರೂ ಅದೇಕೆ ಮತ್ತೆ ಹೋರಾಟ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರ ಹೋರಾಟವನ್ನು ನಾನು ಕೂಡ ಬೆಂಬಲಿಸುವೆ. ಆದರೆ ಇಷ್ಟೆಲ್ಲಾ ಸ್ಪಂದನೆ ಸಿಕ್ಕ ಬಳಿಕವೂ ಹೋರಾಟ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗಾಕಾಕ್ಷಿಗಳಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ: ಧಾರವಾಡದಲ್ಲಿ ನಾಳೆ ನಡೆಯಲಿದ್ಯಾ ಹೈಡ್ರಾಮಾ?
ಇದೇ ವೇಳೆ ಹೋರಾಟಕ್ಕೆ ದಲಿತ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು. ಅಂಬೇಡ್ಕರ್ ಜಯಂತಿ ದಿನ ಇಂಥ ಹೋರಾಟ ಮಾಡುವ ಅವಶ್ಯಕತೆ ಇದೆ ಅನ್ನೋದು ದಲಿತ ಸಂಘಟನೆಗಳ ಪ್ರಶ್ನೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಹೋರಾಟಕ್ಕೆ ಬ್ರೇಕ್ ಹಾಕಿದ್ದರು. ಆದರೆ ಇದೀಗ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಅನ್ನೋ ಆರೋಪಕ್ಕೆ ಗುರಿಯಾಗಿದ್ದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.