Headlines

Businessman ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್ | Kolkata Businessman Found Shot Dead After Cj Roy Woman Arrested Over Murder Plot

Businessman ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್ | Kolkata Businessman Found Shot Dead After Cj Roy Woman Arrested Over Murder Plot



Businessman ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್ | Kolkata Businessman Found Shot Dead After Cj Roy Woman Arrested Over Murder Plot

ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್, ಉದ್ಯಮಿ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಯುವತಿ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

ಕೋಲ್ಕತಾ (ಏ.14) ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಸ್ವಯಂ ಗುಂಡಿಕ್ಕಿ ಬದುಕು ಅಂತ್ಯಗೊಳಿಸಿದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಾವಿರಾರು ಕೋಟಿ ರೂಪಾಯಿ ಉದ್ಯಮ ಸಾಮ್ರಾಜ್ಯದ ಮಾಲೀಕ ಸಿಜೆ ರಾಯ್ ಸಾವಿನ ತನಿಖೆ ನಡೆಯುತ್ತಿದೆ. ಇದರ ನಡುವೆ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಕ್ಕಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾ ಉದ್ಯಮಿ ಅರೂಪ್ ಮೊಂಡಾಲ್ ಶವ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಅರೂಪ್ ಮೊಂಡಾಲ್ ಗೆಳತಿ ಹಾಗೂ ಮತ್ತೊರ್ವನನ್ನು ಅರೆಸ್ಟ್ ಮಾಡಲಾಗಿದೆ.

37ರ ಹರೆಯದ ಉದ್ಯಮಿ ಅರೂಪ್ ಮೊಂಡಾಲ್ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ. ಕೋಟಿ ಕೋಟಿ ರೂಪಾಯಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ. ನರೇಂದ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಬಗ್ರಾಮದಲ್ಲಿ ಫ್ಲಾಟ್ ಒಂದರಲ್ಲಿ ವಾಸವಿದ್ದ ಉದ್ಯಮಿ ಅರೂಪ್ ಮೊಂಡಾಲ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀರು ಮೃತದೇಹ ವಶಕ್ಕೆ ಪಡೆದಿದ್ದಾರೆ. ರಿವಾಲ್ವರ್, ಸ್ಥಳದಲ್ಲಿ ಸಿಕ್ಕ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ತಲೆಗೆ ಹೊಕ್ಕಿದೆ ಗುಂಡು

ಅರೂಪ್ ಮೊಂಡಾಲ್ ಮೃತೇದಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅರೂಪ್ ಮೊಂಡಾಲ್ ತಲೆಗೆ ಗುಂಡುಗಳು ಹೊಕ್ಕಿತ್ತು. ಇದು ಸ್ವಯಂ ಬದುಕು ಅಂತ್ಯಗೊಳಿಸಿದ್ದೇ ಅಥವಾ ಹತ್ಯೆವೇ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಗುಂಡಿನ ಶಬ್ದ ಕೇಳಿದ ಬೆನ್ನಲ್ಲೇ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಅರೂಪ್ ಮೊಂಡಾಲ್ ಮೃತಪಟ್ಟಿದ್ದರು.

ಅರೂಪ್ ಮೊಂಡಾಲ್ ಗೆಳತಿ ಅರೆಸ್ಟ್

ಈ ಪ್ರಕರಣ ಸಂಬಂಧ ಅರೂಪ್ ಮೊಂಡಾಲ್ ಗೆಳತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೆಳತಿ ಜೊತೆ ಆಕೆಯ ಆಪ್ತನೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೆಳತಿ ಹಾಗೂ ಆಕೆಯ ಆಪ್ತನ ನಡೆ ಹಲವು ಅನುಮಾನ ಮೂಡಿಸಿದೆ. ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿರುವ ಅನುಮಾನಗಳು ವ್ಯಕ್ತವಾಗಿದೆ. ಗೆಳತಿಯೇ ಕೆಲ ವಿಡಿಯೋಗಳನ್ನು ಚಿತ್ರಿಕೀರಿಸಿ ಅರೂಪ್ ಮೊಂಡಾಲ್ ಬಳಿ ಹಣಕೆ ಬೇಡಿಕೆ ಇಟ್ಟಿರುವ ಅನುಮಾನಗಳು ವ್ಯಕ್ತವಾಗಿದೆ.

ಸಹೋದರಿನಿಂದ ದೂರು, ಹಲವು ಅನುಮಾನ

ಅರೂಪ್ ಮೊಂಡಾಲ್ ಕಿರಿಯ ಸಹೋದರ ಸ್ವರೂಪ್ ಮೊಂಡಾಲ್ ದೂರು ನೀಡಿದ್ದಾರೆ. ಇದೇ ವೇಳೆ ಅರೂಪ್ ಮೊಂಡಾಲ್ ಗೆಳತಿ ಹಾಗೂ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ ಅರೂಪ್ ಮೊಂಡಾಲ್ ಸಂಬಂಧಿಯೊಬ್ಬರು ಕೆಲ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅರೂಪ್ ಮೊಂಡಾಲ್ ತಲೆಯ ಬಾಲಭಾಗಕ್ಕೆ ಗುಂಡುಗಳು ಹೊಕ್ಕಿದೆ. ಅರೂಪ್ ಮೊಂಡಾಲ್ ಎಡಗೈ ವ್ಯಕ್ತಿ. ಹೀಗಾಗಿ ಇದು ಬದುಕು ಅಂತ್ಯಗೊಳಿಸಿದ ಪ್ರಕರಣವಲ್ಲ, ವ್ಯವಸ್ಥಿತ ಕೊಲೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *