ಕೊಯಮತ್ತೂರು, ಏಪ್ರಿಲ್ 14: ರಸ್ತೆಯಲ್ಲಿ ಹೋಗುವಾಗ ವಾಹನಗಳು ಡಿಕ್ಕಿಯಾಗಿ ಹೊಡೆದು ಅಪಘಾತವಾಗುವುದು (ಬಸ್ ಅಪಘಾತ) ಸಾಮಾನ್ಯ. ಆದರೆ, ಬಸ್‌ನೊಳಗಿದ್ದರೂ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ಬಸ್ ನೊಳಗೆ ಕುಳಿತು ಪ್ರಯಾಣಿಸುತ್ತಿದ್ದ 66 ವರ್ಷದ ಮಹಿಳೆ ತನ್ನ ಸ್ಟಾಪ್ ಬಂದಿತೆಂದು ಎದ್ದು ನಿಲ್ಲುವಷ್ಟರಲ್ಲಿ ಚಾಲಕ ಬ್ರೇಕ್ ಒತ್ತಿದ್ದಾನೆ. ಆಗ ಆ ಮಹಿಳೆ ಬ್ಯಾಲೆನ್ಸ್ ತಪ್ಪಿ ಬಸ್ ನ ಮೆಟ್ಟಿಲುಗಳ ಮೇಲೆ ಬಿದ್ದು ಹೊರಗೆ ಬಿದ್ದಿದ್ದಾರೆ. ಚಲಿಸುವ ಬಸ್ಸು ಬಿದ್ದ ಕಾರಣದಿಂದ ಮಹಿಳೆಗೆ ತೀವ್ರವಾಗಿ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಮಾರ್ಚ್ 29 ರಂದು ಕೋವೈಪುದೂರಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 66 ವರ್ಷದ ಜಿ. ಕಾಮಚ್ಚಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್ ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ