Headlines

₹7.50 ಲಕ್ಷ ಮೌಲ್ಯದ ₹2000 ಖೋಟಾ ನೋಟು ಬದಲಿಸಿಕೊಳ್ಳಲು ಬೆಂಗಳೂರಿನ RBIಗೆ ಬಂದ; ಮುಂದೇನಾಯ್ತು? | Man Arrested For Coming To Rbi In Bengaluru To Exchange Fake Rs 2000 Notes Worth Rs 7 Point 50 Lakh Mrq

ಚಲಾವಣೆ ಸ್ಥಗಿತಗೊಂಡಿರುವ ₹2000 ಮುಖಬೆಲೆಯ ಖೋಟಾ ನೋಟುಗಳನ್ನು ಆರ್‌ಬಿಐನಲ್ಲಿ ಬದಲಿಸಲು ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನ ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ  ₹7.50 ಲಕ್ಷ ಮೌಲ್ಯದ 375 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಮೂರು ವರ್ಷಗಳ ಹಿಂದೆಯೇ ಚಲಾವಣೆ ಸ್ಥಗಿತವಾಗಿರುವ ₹2000 ಮುಖಬೆಲೆಯ ಖೋಟಾ ನೋಟುಗಳನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ (ಆರ್‌ಬಿಐ) ಸಲ್ಲಿಸಿ ಅಸಲಿ ಹಣ ಪಡೆಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

₹7.50 ಲಕ್ಷ ಮೌಲ್ಯದ ನಕಲಿ ನೋಟು

ನಾಗಶೆಟ್ಟಿಹಳ್ಳಿಯ ಎಸ್‌.ವಿ ರಮೇಶ್‌ ಬಂಧಿತನಾಗಿದ್ದು, ಆರೋಪಿಯಿಂದ 375 ನೋಟುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಶಾಖಾ ಕಚೇರಿಗೆ ತೆರಳಿ ನೋಟು ಬದಲಾವಣೆಗೆ ರಮೇಶ್ ಯತ್ನಿಸಿದ್ದಾನೆ. ಆಗ ಆತನ ನೋಟುಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಆರೋಪಿ ಬಳಿ ₹7.50 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿಯಾಗಿವೆ. ಈ ಖೋಟಾ ನೋಟು ಚಲಾವನೆ ಹಿಂದೆ ದೊಡ್ಡ ಜಾಲವಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Bengaluru: ಗ್ಯಾಸ್ ಸಂಕಷ್ಟಕ್ಕೆ ಹೋಟೆಲ್ ಮಾಲೀಕರ ಮಾಸ್ಟರ್ ಪ್ಲಾನ್! ಇದು ಸ್ವಾವಲಂಬಿ ಯೋಜನೆ

ಅವಕಾಶ ದುರ್ಬಳಕೆ

2023ರ ಮೇ 19 ರಿಂದಲೇ ಎರಡು ಸಾವಿರ ರು ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್‌ಬಿಐ ಸ್ಥಗಿತಗೊಳಿಸಿದೆ. ಆದರೆ ಈ ನೋಟುಗಳನ್ನು ಆರ್‌ಬಿಐಗೆ ಸಲ್ಲಿಸಿ ಅದಕ್ಕೆ ಪ್ರತಿಯಾಗಿ ಹಣವನ್ನು ಪಡೆಯಬಹುದಾಗಿದೆ. ಒಬ್ಬ ವ್ಯಕ್ತಿ ಒಂದು ಬಾರಿಗೆ 20 ಸಾವಿರ ರು ಮೌಲ್ಯದ ಎರಡು ಸಾವಿರ ಮುಖಬೆಲೆ ನೋಟು ಬದಲಾಯಿಸಿಕೊಳ್ಳಲು ಅವಕಾಶವಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ನೋಟು ಬದಲಾವಣೆಗೆ ಆರೋಪಿ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಕಂಗಲಾದ ಬೆಂಗಳೂರು ನಿವಾಸಿಗಳು, ಟ್ಯಾಕ್ಸ್ ಕಟ್ಟಬೇಕು ಅಂದ್ರೆ ಕಸದ ಲೆಕ್ಕ ಕೊಡಬೇಕಂತೆ!

Scroll to load tweet…

Source link

Leave a Reply

Your email address will not be published. Required fields are marked *