Headlines

ನಿನ್ನ ಮಗ ನಿನ್ನ ಹೋಲಿಕೆ ಇಲ್ಲ’ ಎಂದು ಸ್ನೇಹಿತರು ಛೇಡಿಸಿದ್ದಕ್ಕೆ ಪತ್ನಿ ಮೇಲೆ ಅನುಮಾನಗೊಂಡು ಮಗನನ್ನು ಕೊಂದೇ ಬಿಟ್ಟ! | Vijayapura Horror Man Murders Son Suspecting Wife S Fidelity After Friends Teasing About Child S Looks Rav

ವಿಜಯಪುರ ತಾಲೂಕಿನ ನಾಗಠಾಣದಲ್ಲಿ, ತನ್ನಂತೆ ಹೋಲಿಕೆ ಇಲ್ಲ ಎಂಬ ಕಾರಣಕ್ಕೆ ತಂದೆಯೇ ತನ್ನ 6 ವರ್ಷದ ಮಗನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಕೋಚಿಂಗ್‌ಗೆ ಸೇರಿಸುವುದಾಗಿ ನಂಬಿಸಿ ಕರೆದೊಯ್ದು ಈ ಕೃತ್ಯ ಎಸಗಿದ್ದು, ಪತ್ನಿ ನೀಡಿದ ದೂರಿನ ಮೇರೆಗೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ (ಏ.15): ತನ್ನಂತೆ ಹೋಲಿಕೆಯಲ್ಲಿ ಇಲ್ಲ ಎಂದು ತಂದೆಯೇ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನಾಗಠಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಿದ್ಧಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ. ಈತನ ತಂದೆ ಮಲ್ಲಿಕಾರ್ಜುನ ಅರಕೇರಿ ಈಗ ಪೊಲೀಸರ ಅತಿಥಿ ಆಗಿದ್ದಾನೆ. ಮಗನನ್ನು ಟ್ಯೂಶನ್‌ಗಾಗಿ (ಕೋಚಿಂಗ್) ಹಾಸ್ಟೆಲ್‌ಗೆ ಸೇರಿಸುವುದಾಗಿ ಕರೆದೊಯ್ದು ಕೃಷ್ಣಾನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.

ತನ್ನ ಮಗ ತನ್ನಂತೆ ಹೋಲಿಕೆ ಇಲ್ಲವೆಂದು ಪತ್ನಿಯ ಮೇಲೆ ಅನುಮಾನಿಸಿ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಗ್ರಾಮದ ಕೆಲ ಕಿಡಿಗೇಡಿಗಳು ಛೇಡಿಸಿದ್ದರು. ಇದರಿಂದ ರೋಸಿದ ಮಲ್ಲಿಕಾರ್ಜುನ ಮಾ.16ರಂದು ಸಿಂದಗಿ ಬಳಿ ವಸತಿ ಶಾಲೆಯಲ್ಲಿ ಕೋಚಿಂಗ್‌ಗೆ ಸೇರಿಸುವುದಾಗಿ ಹೆಂಡತಿಗೆ ಸುಳ್ಳು ಹೇಳಿ ಸಿದ್ಧಾರ್ಥನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಹಾರಾಷ್ಟ್ರ ಗಡಿಯ ಕೃಷ್ಣಾನದಿ ಬಳಿ ಕರೆದೊಯ್ದು ನದಿಗೆ ತಳ್ಳಿ ಕೊಂದಿದ್ದಾನೆ. 

ಹುಟ್ಟುಹಬ್ಬಕ್ಕೆ ಮಗನನ್ನ ಕರೆತರಲು ಹೇಳಿದಾಗ ಬಯಲು!

ಏ.1ರಂದು ಮಗನ ಹುಟ್ಟುಹಬ್ಬಕ್ಕೆ ಆತನನ್ನು ಕರೆತರುವಂತೆ ಪತ್ನಿ ಪಟ್ಟು ಹಿಡಿದಾಗ ಮಲ್ಲಿಕಾರ್ಜುನ ಮನೆ ಬಿಟ್ಟು ಪರಾರಿಯಾಗಿದ್ದಾ‌ನೆ. ಅನುಮಾನಗೊಂಡ ಪತ್ನಿ ಭಾಗ್ಯಶ್ರೀ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಮಲ್ಲಿಕಾರ್ಜುನನನ್ನು ಹುಡುಕಿ ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಮಹಾರಾಷ್ಟ್ರದಲ್ಲಿ ಬಾಲಕನ ಶವ ಪತ್ತೆಯಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *