Headlines

ಮಾವನ ಜೊತೆ ಸೇರಿ ಧ್ರುವ್ ರಾಠಿಗೆ ಟಾಂಗ್ ಕೊಟ್ಟ ರಣ್ವೀರ್ ಸಿಂಗ್

ಮಾವನ ಜೊತೆ ಸೇರಿ ಧ್ರುವ್ ರಾಠಿಗೆ ಟಾಂಗ್ ಕೊಟ್ಟ ರಣ್ವೀರ್ ಸಿಂಗ್


ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಭರ್ಜರಿ ಹಿಟ್ ಆಗಿದೆ. ಸಿನಿಮಾ ಬಾಕ್ಸ್‌ಗಳನ್ನು ಆಫೀಸ್‌ನಲ್ಲಿ ಹಲವು ದಾಖಲೆ ಬರೆಯುತ್ತಿದೆ. ಆದರೆ ಈ ಸಿನಿಮಾವನ್ನು ಪ್ರಪೊಗಾಂಡ ಸಿನಿಮಾ ಎಂದು. ಒಂದು ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲೆಂದು ನಿರ್ಮಿಸಲಾದ ಸಿನಿಮಾ ಎಂದು ಆರೋಪಿಸಿದ್ದಾರೆ. ಸಿನಿಮಾದಲ್ಲಿರುವ ಕೆಲ ತಪ್ಪುಗಳನ್ನು ಎತ್ತಿ ತೋರಿಸಿ ಟೀಕಿಸಿದ್ದಾರೆ. ವಿಶೇಷವಾಗಿ ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ಈ ಸಿನಿಮಾವನ್ನು ಟೀಕೆ ಮಾಡಿದ್ದು, ಇದೀಗ ಪರೋಕ್ಷವಾಗಿ ನಟ ರಣ್ವೀರ್ ಸಿಂಗ್, ‘ಧ್ರುವ್ ರಾಠಿ’ಗೆ ಟಾಂಗ್ ನೀಡಿದ್ದಾರೆ.

ಧ್ರುವ್ ರಾಠಿ ತಮ್ಮ ವಿಡಿಯೋ ಒಂದರಲ್ಲಿ ‘ಧುರಂಧರ’ ಅನ್ನು ಟೀಕೆ ಮಾಡುತ್ತಾ ಸಿನಿಮಾವನ್ನು ‘ಭವಂಧರ್’ ಎಂದು ಕರೆದಿದ್ದರು. ಇದೀಗ ರಣ್ವೀರ್ ಸಿಂಗ್ ಅವರ ಹೊಸ ಜಾಹೀರಾತೊಂದು ಬಿಡುಗಡೆ ಆಗಿದ್ದು, ಜಾಹೀರಾತಿನಲ್ಲಿ ನಟ ರಣ್ವೀರ್ ಸಿಂಗ್ ಅವರು ಇದನ್ನೇ ಇರಿಸಿಕೊಂಡು ಧ್ರುವ್ ರಾಠಿಗೆ ಟಾಂಗ್ ನೀಡಿದ್ದಾರೆ. ಇದೀಗ ಆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೆಂಡ್ ಆಗುತ್ತಿದೆ.

ನಟ ರಣವೀರ್ ಸಿಂಗ್ ತಮ್ಮ ಮಾವ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರೊಂದಿಗೆ ನಟಿಸಿರುವ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ಸ್ವದೇಶಿ ಹಣ ಪಾವತಿ ಸೇವಾ ಆಯಪ್ (RuPay) ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಮತ್ತು ಮಾಜಿ ಬ್ಯಾಡ್ಮಿಂಟನ್ ಪ್ರಶಸ್ತಿ ಮತ್ತು ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಒಟ್ಟಿಗೆ ನಟಿಸಿದ್ದಾರೆ. ಈ ಜಾಹೀರಾತಿನಲ್ಲಿ ರಣವೀರ್ ಅವರು ಪ್ರಕಾಶ್ ಪಡುಕೋಣೆ ಅವರನ್ನು ‘ಪಪ್ಪಾ’ ಎಂದು ಕರೆಯುತ್ತಾರೆ ಮತ್ತು ಬ್ಯಾಡ್ಮಿಂಟನ್ ಆಡುವ ದೃಶ್ಯಗಳು ಅಭಿಮಾನಿಗಳ ಮನ ಗೆದ್ದಿವೆ.

ಇದನ್ನೂ ಓದಿ:ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೇ?

ಅದೇ ಜಾಹೀರಾತಿನ ಕಾಣಿಸುವ ಒಂದು ಪೋಸ್ಟರ್ ಈಗ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟರ್‌ನಲ್ಲಿ ‘ಭವಂದರ್: ದಿ ಟೊರ್ನಾಡೋ’ ಎಂಬ ಹೆಸರಿನ ಸಿನಿಮಾದ ಪೋಸ್ಟರ್ ಇದೆ. ಧ್ರುವ್ ರಾಠಿ, ಈ ಹಿಂದೆ ರಣವೀರ್ ಸಿಂಗ್ ನಟನೆಯ ‘ಧುರಂಧರ’ ಸರಣಿಯನ್ನು ಟೀಕಿಸಿದ್ದರು. ಆ ಸಿನಿಮಾಗಳನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದ ಅವರು, ತಮ್ಮ ವಿಡಿಯೋದಲ್ಲಿ ‘ಆಪರೇಷನ್ ಭವಂದರ್’ ಕಾಲ್ಪನಿಕ ಚಿತ್ರದ ಹೆಸರು ಎಂಬ ಟೀಕೆ ಇತ್ತು. ಈಗ ಜಾಹೀರಾತಿನಲ್ಲಿ ಅದೇ ಹೆಸರಿನ ಪೋಸ್ಟರ್ ಬಳಸಿದ್ದು, ಧ್ರುವ್ ರಾಠಿಗೆ ಟಾಂಗ್ ನೀಡಲೆಂದರೆ ಹೀಗೆ ಮಾಡಲಾಗಿರುವುದು ಸ್ಪಷ್ಟ.

ಟೀಕೆಗಳ ನಡುವೆಯೂ ‘ಧುರಂಧರ’ ಮತ್ತು ‘ಧುರಂಧರ 2’ ಸಿನಿಮಾ ಭಾರತೀಯ ಚಿತ್ರರಂಗದ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಈ ಚಿತ್ರ ಸರಣಿಯು ವಿಶ್ವಾದ್ಯಂತ ಸುಮಾರು 1700 ಕೋಟಿಗೂ ಹೆಚ್ಚಿನ ಮೊತ್ತವನ್ನು ಹೊಂದಿದೆ. ಭಾರತದ ಅತಿಹೆಚ್ಚು ಮೊತ್ತ ಗಳಿಸಿದ ಸಿನಿಮಾಗಳಾದ ‘ಪುಷ್ಪ 2’, ‘ಬಾಹುಬಲಿ 2’ ಸಿನಿಮಾಗಳ ದಾಖಲೆಯನ್ನು ಅಳಿಸುವ ಹೊಸ್ತಿಲಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *