
ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್ ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಸಮಾಜದಲ್ಲಿ, ಸೋಷಿಯಲ್ ನಾರ್ಮ್ ಕಾಪಾಡಲು ಹೇಳಬಾರದ, ಹೇಳಲಾಗದ ಮಾತೇನಾದ್ರೂ ಇದ್ರೆ ಅದನ್ನು ‘ಬೀಪ್’ ಎಂಬ ಹೆಸರಿನಿಂದ ಕರೆಯುವುದು ರೂಢಿ. ಇದೀಗ ಅಂತಹ ಕಾಮೆಂಟ್ ಒಂದು ವರ್ಷಾ ಕಾವೇರಿಗೆ ಬಂದಿದ್ದು ಅದಕ್ಕವರು ತಿರುಗೇಟು ಕೊಟ್ಟಿದ್ದಾರೆ.