ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯದ ಮೂಲಕ ‘ರಾಜಧಾನಿ ಎಕ್ಸ್‌ಪ್ರೆಸ್’ ಮತ್ತೆ ಮರಳಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟುಕೊಂಡಿರುವುದು ಮಯಾಂಕ್ ಯಾದವ್ ಅವರ ಫಿಟ್ನೆಸ್ ಅಪ್ಡೇಟ್ನಿಂದ. ಏಕೆಂದರೆ ಈ ಬಾರಿಯ ಪ್ರೆಸ್ ನಲ್ಲಿ ಒಂದೇ ಒಂದು ಪಂದ್ಯವಾಡದ ರಾಜಧಾನಿ ಎಕ್ಸ್’ ಖ್ಯಾತಿಯ ಮಯಾಂಕ್ ಯಾದವ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಜೊತೆಗೆ ಆರ್ಸಿಬಿ ವಿರುದ್ಧ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.
ವಿಶೇಷ ಎಂದರೆ ಇದೇ ಮಯಾಂಕ್ ಯಾದವ್ 2024ರಲ್ಲಿ ಬೆಂಗಳೂರಿನ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಇದೀಗ ಮತ್ತೆ ರಾಯಲ್ ಪಡೆಯ ವಿರುದ್ಧವೇ ಕಣಕ್ಕಿಳಿಯುವ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಮಯಾಂಕ್ ಯಾದವ್
ಎಲ್‌ಎಸ್‌ಜಿ ಕ್ರಿಕೆಟ್ ತಂಡದ ನಿರ್ದೇಶಕ ಟಾಮ್ ಮೂಡಿ ಅವರು, ಆರ್ಸಿಬಿ ವಿರುದ್ಧ ಮಯಾಂಕ್ ಸಿದ್ಧರಿದ್ದಾರೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಕಠಿಣ ತರಬೇತಿ ಮತ್ತು ಬೌಲಿಂಗ್ ವರ್ಕ್‌ಲೋಡ್ ನಿರ್ವಹಣೆಯ ನಂತರ ಅವರು ಈಗ 150+ ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಲು ಫಿಟ್ ಆಗಿದ್ದಾರೆ. ಈ ಮೂಲಕ ಮಯಾಂಕ್ ಯಾದವ್ ಆರ್ಸಿಬಿ ವಿರುದ್ಧದ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸೂಚನೆ.
ಇತ್ತ ಮಯಾಂಕ್ ಯಾದವ್ ಮರಳುತ್ತ ಲಕ್ನೋ ತಂಡದ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಮೊಹಮ್ಮದ್ ಶಮಿ ಮತ್ತು ಪ್ರಿನ್ಸ್ ಯಾದವ್ ಉತ್ತಮ ಲಯದಲ್ಲಿದ್ದಾರೆ. ಇದೀಗ ಮಯಾಂಕ್ ಯಾದವ್ ಕೂಡ ಕಣಕ್ಕಿಳಿದರೆ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆನೆಬಲ ಬಂದಂತಾಗಲಿದೆ.
ಇಲ್ಲಿ ಮಯಾಂಕ್ ಯಾದವ್ ಅವರ ಆಗಮನವು ಆರ್ಸಿಬಿ ಪಾಲಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ 2024 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಯಾಂಕ್ ತನ್ನ ವೇಗಾಸ್ತ್ರದೊಂದಿಗೆ ಆರ್ಸಿಬಿ ದಾಂಡಿಗರನ್ನು ಕಟ್ಟಿದ್ದರು. ಜೊತೆಗೆ ಈ ವೇಳೆ 4 ರಲ್ಲಿ ಮಾತ್ರ ನೀಡಿದ್ದು ಕೇವಲ 14 ರನ್ಗಳು. ಇದರ ನಡುವೆ 3 ಎಗರಿಸಿದ್ದರು.
ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಮಾಯಾಂಕ್ ಯಾದವ್ ಮತ್ತೊಮ್ಮೆ ತನ್ನ ಘಾತಕ ವೇಗದೊಂದಿಗೆ ಆರ್ಸಿಬಿ ಪಾಲಿಗೆ ಮುಳುವಾಗಲಿದ್ದಾರಾ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: IPL 2026: ಸೋಲಿನಿಂದ ಕಂಗೆಟ್ಟ ಕೆಕೆಆರ್ ತಂಡದ ನಾಯಕನಿಗೆ ದಂಡದ ಬರೆ..!