ಜನವರಿ, ಏಪ್ರಿಲ್ 15: ಷೇರು ಮಾರುಕಟ್ಟೆ (ಸ್ಟಾಕ್ ಮಾರುಕಟ್ಟೆ) ಇವತ್ತು ಒಟ್ಟಾರೆಯಾಗಿ ಭಾರತದಲ್ಲಿ ಭರ್ಜರಿಯಾಗಿ ಆಯ್ಕೆಯಾಗಿದೆ. ಬಿಎಸ್‌ಐ ಮತ್ತು ಎನ್‌ಎಸ್‌ಇನ ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಇವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಇವತ್ತು ಶೇ. 2ರವರೆಗೆ ಹಿಗ್ಗಿವೆ. ಬಿಎಸ್‌ಇ ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 1,400 ಅಂಕಗಳ ಏರಿಕೆ ಕಂಡಿತ್ತು. ನಿಫ್ಟಿ 400 ಅಂಕಗಳು ಜಿಗಿದಿದ್ದವು. 24,280ರ ಮಟ್ಟಕ್ಕೆ ಹೋಗಿತ್ತು. 384 ಅಂಕಗಳು ಸದ್ಯಕ್ಕೆ 24,163ರ ಮಟ್ಟದಲ್ಲಿದೆ. ಬಿಎಸ್‌ಇನಲ್ಲಿ ಪಟ್ಟಿ ಆಗಿರುವ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಆಸ್ತಿಮೌಲ್ಯ 449 ಲಕ್ಷ ಕೋಟಿ ರೂನಿಂದ 458 ಲಕ್ಷ ಕೋಟಿ ರೂಗೆ ಏರಿದೆ. ಇವತ್ತು ೯ ಲಕ್ಷ ಕೋಟಿ ರೂಣಷ್ಟು ಸಂಪತ್ತು ಹಿಗ್ಗಿದೆ. ಷೇರು ಮಾರುಕಟ್ಟೆಯ ಇವತ್ತಿನ ರಂಗಕ್ಕೆ ಏನು ಕಾರಣಗಳು?
ಅಮೆರಿಕ ಇರಾನ್ ಮಾತುಕತೆ ಪುನಾರಂಭಗೊಳ್ಳುವ ಸಾಧ್ಯತೆಯಿದೆ
ಜಗತ್ತಿಗೆ ತಲೆನೋವಾಗಿರುವುದು ಇರಾನ್ ಅಮೆರಿಕ ಯುದ್ಧ. ಸದ್ಯ ಕದನ ವಿರಾಮ ಇದೆ. ಈ ನಡುವೆ ಮೊದಲ ಸುತ್ತಿನ ಸಂಧಾನ ಮಾತುಕತೆ ಮುರಿಬಿದ್ದದ್ದು ಚಿಂತೆಯ ಸಂಗತಿಯಾಗಿತ್ತು. ಈಗ ಪಾಕಿಸ್ತಾನದಲ್ಲೇ ಸುತ್ತಿನ ಸಂಧಾನ ಸಭೆ ನಡೆಯಬಹುದು. ಇನ್ನೆರಡು ದಿನದಲ್ಲಿ ಮಾತುಕತೆ ಪುನಾರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದು ಮಾರುಕಟ್ಟೆಯ ಖುಷಿಗೆ ಕಾರಣವಾಗಿದೆ.
ಇದನ್ನೂ ಓದಿ: ಎನ್ ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್
ಕಚ್ಚಾ ತೈಲ ಬೆಲೆಯಲ್ಲಿ ಇಳಿಮುಖ
ಬ್ಯಾರಲ್‌ಗೆ 100 ಡಾಲರ್‌ಗಿಂತ ಹೆಚ್ಚಿಗೆ ಏರಿದ್ದ ಕಚ್ಚಾ ತೈಲ ಬೆಲೆ ಈಗ 95 ಡಾಲರ್‌ಗಿಂತ ಕಡಿಮೆಯಾಗಿದೆ. ಇದು ಷೇರು ಬಜಾರಿಗೆ ಡಬಲ್ ಧಮಾಕ ಕೊಟ್ಟಿರುವ ಸಂಗತಿ.
ಜಾಗತಿಕ ಮಾರುಕಟ್ಟೆಯೂ ಹುರುಪಿನಲ್ಲಿ
ಜಾಗತಿಕ ಷೇರು ಮಾರುಕಟ್ಟೆಗಳೂ ಕೂಡ ಬುಧವಾರ ಗರಿಗೆದರಿವೆ. ಜಪಾನ್ನ ನಿಕ್ಕಿ, ಸೌತ್ ಕೊರಿಯಾದ ಕೊಸ್ಪಿ, ಅಮೆರಿಕದ ನಾಸ್ಡಾಕ್, ಎಸ್ ಅಂಡ್ ಪಿ ಇತ್ಯಾದಿ ಮಾರುಕಟ್ಟೆಗಳು ಉತ್ಸಾಹದಲ್ಲಿವೆ. ಇದು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿರಬಹುದು.
ಇದನ್ನೂ ಓದಿ: ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್ ಗೆ ಆಗುತ್ತಿರುವ ನಷ್ಟ ಎಷ್ಟು ಗೊತ್ತಾ?
ರುಪಾಯಿ ಬಲವರ್ಧನೆ
ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆ ಕಂಡಿದೆ. ಇವತ್ತಿನ ಟ್ರೇಡಿಂಗ್ ನಲ್ಲಿ ರುಪಾಯಿ ಮೌಲ್ಯ 12 ಪೈಸೆಯಷ್ಟು ಮೊತ್ತವಾಗಿದೆ. ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿ ಆಮದು ವೆಚ್ಚವೂ ಕಡಿಮೆಯಾಗಿ ರುಪಾಯಿಯ ಮೇಲಿನ ಒತ್ತಡ ತಗ್ಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ