ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು


ಜನವರಿ, ಏಪ್ರಿಲ್ 15: ಯುದ್ಧಗಳು, ತೈಲ ಬಿಕ್ಕಟ್ಟು, ಟ್ರಂಪ್ ಟ್ಯಾರಿಫ್ ಇತ್ಯಾದಿ ಜಾಗತಿಕವಾಗಿ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ (ಭಾರತದ GDP ಬೆಳವಣಿಗೆ) ಪ್ರಗತಿ ಮುಂದುವರೆದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳು ಅತಿವೇಗವಾಗಿ ಬೆಳೆಯುತ್ತಿದೆ. ಮುಂದೆಯೂ ಇದೇ ಹಾದಿಯಲ್ಲಿ ಭಾರತದ ಆರ್ಥಿಕತೆ ಸಾಗಲಿದೆ ಎಂದು ವಿವಿಧ ಏಜೆನ್ಸಿಗಳು ಹೇಳುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಾದ ಐಎಂಎಫ್ ಕೂಡ ಇದನ್ನು ಪುಷ್ಟೀಕರಿಸಿದೆ. ಐಎಂಎಫ್ ಪ್ರಕಾರ 2026ರಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಹೆಚ್ಚಾಗಬಹುದು. ಇದು ಈ ವರ್ಷ ವಿಶ್ವದಲ್ಲೇ ಅತಿವೇಗದ ಆರ್ಥಿಕ ಬೆಳವಣಿಗೆಯಾಗಬಹುದು.

ಕಳೆದ ಕೆಲ ಕಾಲದಿಂದ ಸೂಪರ್ ವೇಗದಲ್ಲಿ ಬೆಳವಣಿಗೆ ದಾಖಲಿಸಿದ್ದ ಚೀನಾ ಇತ್ತೀಚಿನ ಕೆಲ ವರ್ಷಗಳಿಂದ ಮಂಕಾಗಿತ್ತು. ಈಗ ಮತ್ತೆ ಕಂಬ್ಯಾಕ್ ಮಾಡುತ್ತಿದೆ. 2026ರಲ್ಲಿ ಚೀನಾದ ಜಿಡಿಪಿ ಶೇ 4.9ರಷ್ಟು, ಹಾಗೂ 2027ರಲ್ಲಿ ಶೇ. 4.8ರಷ್ಟು ಹೆಚ್ಚಿದೆ ಎಂದು ಐಎಂಎಫ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ?

ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 3.1 ಮಾತ್ರ

ವಿಶ್ವಾದ್ಯಂತ ಎಲ್ಲಾ ದೇಶಗಳ ಜಿಡಿಪಿ ಬೆಳವಣಿಗೆಯನ್ನು ಪರಿಗಣಿಸಿದರೆ 2026 ರಲ್ಲಿ ಸರಾಸರಿ ಶೇ. 3.1ರಷ್ಟು ಹೆಚ್ಚಾಗಬಹುದು. 2027 ರಲ್ಲಿ ಶೇ. 3.2ರಷ್ಟು ವೃದ್ಧಿಸಬಹುದು.

ಕಳೆದ ಕೆಲ ವರ್ಷಗಳಿಂದ ಇರುವ ಟ್ರೆಂಡ್‌ನಂತೆ ಶ್ರೀಮಂತ ಮತ್ತು ಮುಂದುವರಿದ ದೇಶಗಳ ಜಿಡಿಪಿ ಬೆಳವಣಿಗೆ ಬಹಳ ಕಡಿಮೆ ಇರುತ್ತದೆ. 2026ರಲ್ಲಿ ಈ ದೇಶಗಳ ಜಿಡಿಪಿ ಶೇ 1.8ರಷ್ಟು ಮಾತ್ರ ಏರಿಕೆ ಆಗಲಿದೆ. ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳು ಸರಾಸರಿಯಾಗಿ ಶೇ. 3.9ರಷ್ಟು ಬೆಳವಣಿಗೆ ಹೊಂದಬಹುದು ಎಂದು ಐಎಂಎಫ್ ಹೇಳಿದೆ. ಕೆಳ ಆದಾಯ ವರ್ಗದ ಅಭಿವೃದ್ಧಿಶೀಲ ದೇಶಗಳು 2026ರಲ್ಲಿ ಶೇ. 4.8 ಮತ್ತು 2027ರಲ್ಲಿ ಶೇ. 4.9ರಷ್ಟು ಜಿಡಿಪಿ ವೃದ್ಧಿ ಕಂಡುಬರುತ್ತದೆ.

ಇದನ್ನೂ ಓದಿ: ಎನ್ ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್

ಭಾರತದ ಉತ್ತಮ ಜಿಡಿಪಿ ಬೆಳವಣಿಗೆಗೆ ಕಾರಣವೇನು?

ಭಾರತವು 2025 ರಲ್ಲಿ ನಿರೀಕ್ಷೆಮೀರಿದ ಆರ್ಥಿಕ ಬೆಳವಣಿಗೆ ಕಂಡುಬಂದಿದೆ. ಇದರ ಸಕಾರಾತ್ಮಕ ಪರಿಣಾಮ 2026 ಮತ್ತು 2027ರಲ್ಲೂ ಮುಂದುವರಿಯಬಹುದು. ಇದು ಮೊದಲ ಪ್ರಮುಖ ಕಾರಣ.

ಎರಡನೇ ಬಲವಾದ ಕಾರಣ ಎಂದರೆ, ಭಾರತದ ಆರ್ಥಿಕತೆಯ ವೇಗಕ್ಕೆ ಹೆಚ್ಚಿನ ಪುಷ್ಟಿ ಕೊಟ್ಟಿರುವುದು ರಫ್ತಿಗಿಂತ ಹೆಚ್ಚಾಗಿ ಆಂತರಿಕ ಅನುಭೋಗ. ಅಂದರೆ, ದೇಶೀಯ ಮಾರುಕಟ್ಟೆ ಬಲವಾಗಿದೆ. ಅಂತರಿಕ ಬೇಡಿಕೆ ಹೆಚ್ಚಿದೆ. ಇದು ಆರ್ಥಿಕತೆ ಮಂದಗೊಳ್ಳದಂತೆ ನೋಡಿಕೊಳ್ಳುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *