ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದ ಕಾಡಾನೆ: ಸೆರೆ ಹಿಡಿದ ಕ್ಷಣಾರ್ಧದಲ್ಲೇ ಎಸ್ಕೇಪ್

ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದ ಕಾಡಾನೆ: ಸೆರೆ ಹಿಡಿದ ಕ್ಷಣಾರ್ಧದಲ್ಲೇ ಎಸ್ಕೇಪ್


ಪರಾರಿ ಆಗಿರುವ ಕಾಡಾನೆಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ಹಾಸನ, ಏಪ್ರಿಲ್ 16: ಏಪ್ರಿಲ್ 12 ರ ಭಾನುವಾರದಂದು ರೈತನನ್ನ ಬಲಿ ಪಡೆದಿದ್ದ ಒಂಟಿ ಸಲಗ (ಆನೆ) ಸೆರೆಹಿಡಿಯಲು ನಡೆಸಿದ ಕಾರ್ಯಚರಣೆ ವಿಫಲವಾಗಿದೆ. ಇಡೀ ದಿನ ಸುಗ್ರೀವ, ಅಯ್ಯಪ್ಪ, ಧನಂಜಯ, ಏಕಲವ್ಯ ಸೇರಿ ಆರು ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಬೃಹತ್ ಒಂಟಿ ಸಲಗವನ್ನ ಸೆರೆಹಿಡಿದು ಎಳೆದುಕೊಂಡು ಹೋಗುವ ವೇಳೆ ಸಾಕಾನೆಗಳ ಜೊತೆ ರಣಭೀಕರ ಫೈಟ್ ನಡೆಸಿದ ಕಾಡಾನೆ ಕೊರಳು, ಕಾಲಿಗೆ ಕಟ್ಟಿದ್ದ ಹಗ್ಗವನ್ನ ತುಂಡರಿಸಿ ಶರವೇಗದಲ್ಲಿ ಕಾಫಿತೋಟದಲ್ಲಿ ಪರಾರಿಯಾಗಿದೆ. ಆ ಮೂಲಕ ಕಾರ್ಯಾಚರಣೆ ನಡೆಸಿದ್ದ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದೆ. ಸದ್ಯ ಆತಂಕಗೊಂಡಿರುವ ಜನರು ಕಾಡಾನೆ ಸೆರೆಗೆ ಇದ್ದಾರೆ.

ಅರವಳಿಕೆ ನೀಡಿದ್ದರೂ ಪರಾರಿ ಆದ ಕಾಡಾನೆ

ಏಪ್ರಿಲ್ 12ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ರೈತ ರಾಜಶೆಟ್ಟಿ ಎಂಬುವವರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಹಿಡಿತದಲ್ಲಿಟ್ಟು ಜನರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಇಂದು ಕೊಡಗಿನ ಸಾಕಾನೆ ಶಿಬಿರಗಳಿಂದ ಆರು ಸಾಕಾನೆಗಳ ಕರೆತಂದು ಬೇಲೂರು ತಾಲೂಕಿನ ಕಿತ್ತಾವರ ಗ್ರಾಮದ ಕಾಫಿತೋಟದಲ್ಲಿ ಅಡಗಿದ್ದ ಸಲಗವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಡಿಸಿಸಿ ಸೌರಭ್ ಕುಮಾರ್, ಎಸಿಎಫ್ ಸೇರಿ 70ಕ್ಕೂ ಹೆಚ್ಚು ಸಿಬ್ಬಂದಿ, ವನ್ಯಜೀವಿ ವೈದ್ಯರು ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಸೆರೆಹಿಡಿಯಲಾಯಿತು.

ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದುರಂತ; ಕಾವಾಡಿಗನ ಮೇಲೆ ದಾಳಿ ಮಾಡಿದ ಸಾಕಾನೆ ‘ಸುಗ್ರೀವ’!

ಕುತ್ತಿಗೆ, ಕಾಲುಗಳಿಗೆ ಹಗ್ಗ ಕಟ್ಟಿ ಎಳೆತಂದು ಲಾರಿಗೆ ಹತ್ತಿಸುತ್ತಿರುವ ವೇಳೆ ಕಾಫಿತೋಟದೊಳಗೆ ಸುಮಾರು ಒಂದು ಗಂಟೆ ಸಾಕಾನೆಗಳ ಜೊತೆಗೆ ಫೈಟ್ ನಡೆಸಿದ ಸಲಗ ಒಂದೇ ಒಂದು ಹೆಜ್ಜೆ ಮುಂದೆ ಇಡಲಿಲ್ಲ. ಏನೇ ಪ್ರಯತ್ನಪಟ್ಟರು ಜಗ್ಗದ ಸಲಗವನ್ನ ಸಾಕಾನೆಗಳು ಎಳೆದು ತರುತ್ತಿರುವ ವೇಳೆ ಒಂದೊಂದೇ ಹಗ್ಗವನ್ನ ಕಿತ್ತುಕೊಂಡು ಪರಾರಿ ಆಗ್ತಿದೆ. ಬಲಿಷ್ಟ ಸಲಗದ ಎದುರು ಸಾಕಾನೆಗಳು ಮಂಡ್ಯೂರಿವೆ. ಕಾಡಾನೆ ತಪ್ಪಿಸಿಕೊಂಡು ಹೋಗಿರುವುದು ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಮಾಡಿದ್ದು, ಶೀಘ್ರ ಸೆರೆಹಿಡಿಯುವಂತೆ ಕಾಣುತ್ತಿದೆ.

ಬೆಳೆ ಹಾನಿ: ಜನರ ಜೀವಕ್ಕೂ ಕುತ್ತು

ಜಿಲ್ಲೆಯ ಮಲೆನಾಡು ಭಾಗದ ಆಲೂರು ಬೇಲೂರು ಸಕಲೇಶಫುರ ಹಾಸನ ತಾಲೂಕಿನ ಬೀಡುಬಿಟ್ಟಿರುವ 80ಕ್ಕೂ ಹೆಚ್ಚು ಕಾಡಾನೆಗಳ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುವುದರ ಜೊತೆಗೆ ಜನರ ಜೀವ ಹಾನಿಯೂ ಉಂಟು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಕೂಡ ರೈತ ಬಲಿಯಾದಾಗ ಜನರು ಹೋರಾಟ ಮಾಡಿದರು. ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡುವ ಭರವಸೆ ನೀಡಿ ಎಂದು ಪಟ್ಟು ಹಿಡಿದಿದ್ದರು. ಕಡೆಗೂ ಅರಣ್ಯ ಇಲಾಖೆ ಹಂತಕ ಆನೆ ಸೆರೆಗೆ ಅನುಮತಿ ನೀಡಿತ್ತು. ಇಂದು ಸುಗ್ರೀವ, ಅಯ್ಯಪ್ಪ, ಧನಂಜಯ, ಏಕಲವ್ಯ, ಶ್ರೀರಾಮ ಸೇರಿ ಆರು ಆನೆಗಳ ನೇತೃತ್ವದಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಯಿತು. ಆದರೆ ಕೊನೆ ಹಂತದಲ್ಲಿ ಆದ ಎಡವಟ್ಟಿನಿಂದ ಸೆರೆ ಹಿಡಿದಿದ್ದ ಬೃಹತ್ ಗಾತ್ರದ ಸಲಗ ಮತ್ತೆ ತಪ್ಪಿಸಿಕೊಂಡು ಕಾಫಿತೋಟದಲ್ಲಿ ಪರಾರಿ ಆಗಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಸಾವು: ದಾರುಣವಾಗಿ ಹಾಸನದ ರೈತ

ಜಿಲ್ಲೆಯ ಮನೆನಾಡು ಭಾಗದ ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿರುವ ಕಾಡಾನೆ ಹಾವಳಿ ತಡೆಗೆ ಆನೆ ಸೆರೆ ಹಿಡಿದು ಸ್ಥಳಾಂತರ ಮಾಡುವುದು ಪರಿಹಾರ. ಹೀಗೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಇದೇ ಮೊದಲ ಬಾರಿಗೆ ಸಾಕಾನೆಗಳನ್ನೆ ಮಣ್ಣು ಮುಕ್ಕಿಸಿದ ಸೆರೆಯಲ್ಲಿ ಸಲಗ ಎಸ್ಕೇಪ್ ಆಗಿದ್ದಾನೆ. ಸದ್ಯ ಅರಣ್ಯ ಇಲಾಖೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *