Headlines

ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?

ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?



<p>ಏ.17ಕ್ಕೆ ಬರಬೇಕಿದ್ದ ಮಾತೃಭೂಮಿಗೆ ಇಲ್ಲ ಬಿಡುಗಡೆ ಭಾಗ್ಯ; ವಿಘ್ನಗಳ ಸುಳಿಯಲ್ಲಿ ಸಲ್ಮಾನ್​’ಮಾತೃಭೂಮಿ’ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ಆಗಿದ್ದ ಹೀರೋ ಸಲ್ಮಾನ್ ಖಾನ್. ಸಾವಿರ ಕೋಟಿ ಕಲೆಕ್ಷನ್ ಮಾಡುತ್ತಿದ್ದ ಸಲ್ಲು ಈಗ 200 ಕೋಟಿ ಬಾಕ್ಸಾಫೀಸ್​ ಗಳಿಕೆ ಮಾಡಿದ್ರೆ ಹೆಚ್ಚು ಅನ್ನೋ ಹಾಗಾಗಿದೆ. ಈಗ ಗಲ್ಲಾಪೆಟ್ಟಿಗೆಯನ್ನ ಮತ್ತೆ ಗೆಲ್ಲಬಹುದು ಅಂತ ನಂಬಿರೋ ಒಂದೇ ಒಂದು ಅಸ್ತ್ರ ಮಾತೃಭೂಮಿ ಸಿನಿಮಾ.. ಆದ್ರೆ ಈ ಮಾತೃಭೂಮಿಗೇ ಈಗ ಸಂಕಷ್ಟ ಎದುರಾಗಿದೆ. ಅದೇನು ಅಂತ ನೋಡೋಣ ಬನ್ನಿ</p><p>ವಿಘ್ನಗಳ ಸುಳಿಯಲ್ಲಿ ಸಲ್ಮಾನ್ ‘ಮಾತೃಭೂಮಿ’..&nbsp;ಬಿಟೌನ್​ಸ್ಟಾರ್ ಸಲ್ಮಾನ್​ಖಾನ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಬರೋದಕ್ಕೆ ಹರ ಸಾಹಸ ಪಡುತ್ತಿದ್ದಾರೆ. ಬಾಲಿವುಡ್ ಸುಲ್ತಾನ ಅಂತಲೇ ಫೇಮಸ್ ಆಗಿರೋ ಸಲ್ಲುಗೆ ಸಿನಿಮಾ ಸಕ್ಸಸ್​ ಸಿಕ್ಕು ಹಲವು ವರ್ಷಗಳಾಗ್ತಾ ಬಂದಿದೆ. ಸಿಕ್ಕಿರೋ ಎಲ್ಲಾ ಪ್ರಯೋಗಗಳನ್ನ ಮಾಡಿ ಮುಗಿಸಿರೋ ಸಲ್ಲು ಈಗ ದೇಶಪ್ರೇಮದ ಕತೆಯ ಮಾತೃಭೂಮಿ ಸಿನಿಮಾವನ್ನ ನಂಬಿ ಕೂತಿದ್ದಾರೆ. ಆದ್ರೆ ಈ ಚಿತ್ರಕ್ಕೆ ಒಂದರ ಹಿಂದೊಂದರಂತೆ ವಿಘ್ನಗಳು ಸುತ್ತಿಕೊಳ್ಳುತ್ತಿವೆ..</p><p>ಮಾತೃಭೂಮಿ ಚಿತ್ರಕ್ಕೆ ಮೊದಲು ಟೈಟಲ್​ಇದ್ದಿದ್ದು, ಬ್ಯಾಟಲ್ ಆಫ್ ಗಲ್ವಾನ್ ಎಂದು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಿನಿಮಾಗೆ ಕತೆ ಹೆಣೆಯಲಾಗಿತ್ತು. ಆದ್ರೆ ಟೀಸರ್ ಬಂದಾಗ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಕೊನೆಗೆ ಎರಡೂ ದೇಶಗಳ ರಾಜತಾಂತ್ರಿಕ ಸಮಸ್ಯೆಗೆ ಈ ಸಿನಿಮಾ ಕಾರಣ ಆಗಬಾರದು ಅಂತ ಶೇಕಡ 40 ಕತೆಯನ್ನೇ ಬದಲಿಸಿ ಮಾತೃಭೂಮಿ ಎಂದು ಹೆಸರಿನಲ್ಲಿ ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡಲಾಗಿತ್ತು. ಆದ್ರೆ ಇಗಲೂ ಈ ಮಾತೃಭೂಮಿ ರಿಲಿಸ್​ಗೆ ಸಂಕಷ್ಟ ಸುತ್ತಿಕೊಂಡಿದೆ.</p><p>ಏ.17ಕ್ಕೆ ಬರಬೇಕಿದ್ದ ಮಾತೃಭೂಮಿಗೆ ಇಲ್ಲ ಬಿಡುಗಡೆ ಭಾಗ್ಯ..!ಸಲ್ಲು ಸಿನಿಮಾಗೆ ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪ್ರಮಾಣ ಪತ್ರ..!ಹೌದು, ಸಲ್ಲು ನಟನೆಯ ಮಾತೃಭೂಮಿ ಸಿನಿಮಾ ಇದೇ ಏಪ್ರಿಲ್ 17ಕ್ಕೆ ವಿಶ್ವದಾದ್ಯಂತ ತೆರೆ ಕಾಣಬೇಕಿತ್ತು. ಆದ್ರೆ ಈ ಚಿತ್ರಕ್ಕೆ ಇನ್ನೂ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಯಾಕಂದ್ರೆ ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ಸಿಬಿಎಫ್‌ಸಿ ಇವುಗಳಲ್ಲಿ ಯಾವುದೇ ವಿಭಾಗದ ಅಧಿಕಾರಿಗಳು ಈವರೆಗೆ ಸಿನಿಮಾವನ್ನು ನೋಡಿ ಸೆನ್ಸಾರ್​ಮಾಡಲು ಅನುಮತಿ ಕೊಟ್ಟಿಲ್ಲ. ಹೀಗಾಗಿ ಮಾತೃಭೂಮಿ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.&nbsp;ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..</p>



Source link

Leave a Reply

Your email address will not be published. Required fields are marked *