Headlines

Night Shift: ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ? ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು! | Night Shift Work Linked To Higher Diabetes And Cholesterol Risks Study Finds Gvd

Night Shift: ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ? ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು! | Night Shift Work Linked To Higher Diabetes And Cholesterol Risks Study Finds Gvd



Night Shift: ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ? ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು! | Night Shift Work Linked To Higher Diabetes And Cholesterol Risks Study Finds Gvd

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ, ಅವರು ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಅಥವಾ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡೋದು ನಿಮ್ಮ ನಿದ್ದೆಯನ್ನಷ್ಟೇ ಕೆಡಿಸಲ್ಲ, ಜೊತೆಗೆ ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ವಿಟಮಿನ್ ಡಿ ಕೊರತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಅಂತ ಒಂದು ಹೊಸ ಅಧ್ಯಯನ ಹೇಳಿದೆ. ನೈಟ್ ಶಿಫ್ಟ್ ಕೆಲಸವು ನಿಮ್ಮ ನಿದ್ದೆಯ ಚಕ್ರವನ್ನು ಹಾಳುಮಾಡಿ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ನಿದ್ದೆಯ ಕೊರತೆಯು ರಾತ್ರಿ ಪಾಳಿಯ ಕೆಲಸಗಾರರು ಎದುರಿಸುವ ದೊಡ್ಡ ಸವಾಲು. ‘ಇಂಡಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿ ಅಂಡ್ ಮೆಟಬಾಲಿಸಂ’ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಆರೋಗ್ಯವಂತ ಯುವಕರಲ್ಲಿಯೂ ನೈಟ್ ಶಿಫ್ಟ್ ಕೆಲಸವು ದೇಹದ ಚಯಾಪಚಯ ಕ್ರಿಯೆ (metabolism) ಮತ್ತು ಹಾರ್ಮೋನುಗಳ ಮಟ್ಟವನ್ನು ಗಣನೀಯವಾಗಿ ಏರುಪೇರು ಮಾಡುತ್ತದೆ.

ನೈಟ್ ಶಿಫ್ಟ್ ಕೆಲಸಗಾರರಲ್ಲಿ ಇನ್ಸುಲಿನ್ ಪ್ರತಿರೋಧದ (insulin resistance) ಸಮಸ್ಯೆ ಹೆಚ್ಚಾಗಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಅಂದರೆ, ಇವರಿಗೆ ಟೈಪ್ 2 ಡಯಾಬಿಟಿಸ್ ಬರುವ ಅಪಾಯ ಹೆಚ್ಚು. ಹಗಲು ಪಾಳಿಯಲ್ಲಿ ಕೆಲಸ ಮಾಡುವ ಶೇ. 62ರಷ್ಟು ಜನರಲ್ಲಿ ಈ ಲಕ್ಷಣಗಳಿದ್ದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಶೇ. 77ರಷ್ಟು ಜನರಲ್ಲಿ ಇನ್ಸುಲಿನ್ ಪ್ರತಿರೋಧದ ಲಕ್ಷಣಗಳು ಕಂಡುಬಂದಿವೆ.

ಅಷ್ಟೇ ಅಲ್ಲ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ರಕ್ತದಲ್ಲಿ ಟ್ರೈಗ್ಲಿಸರೈಡ್ (ಒಂದು ಬಗೆಯ ಕೊಬ್ಬು) ಹೆಚ್ಚಿದ್ದು, ಎಚ್‌ಡಿಎಲ್ (ಒಳ್ಳೆಯ ಕೊಲೆಸ್ಟ್ರಾಲ್) ಮಟ್ಟ ಕಡಿಮೆ ಇತ್ತು. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಪುರುಷರ ವಿಚಾರಕ್ಕೆ ಬಂದರೆ, ನೈಟ್ ಶಿಫ್ಟ್ ಕೆಲಸಗಾರರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಲ್ಯುಟೈನೈಸಿಂಗ್ ಹಾರ್ಮೋನುಗಳ ಮಟ್ಟ ಕಡಿಮೆ ಇರುವುದು ಕಂಡುಬಂದಿದೆ.

ವಿಟಮಿನ್ ಡಿ ಕೊರತೆ

ಇದು ಅವರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಗಲಿನಲ್ಲಿ ನಿದ್ದೆ ಮಾಡುತ್ತಾರೆ ಅಥವಾ ಹೆಚ್ಚು ಸಮಯ ಮನೆಯೊಳಗೆ ಇರುತ್ತಾರೆ. ಇದರಿಂದ ಅವರಿಗೆ ಸೂರ್ಯನ ಬೆಳಕು ಸಿಗುವುದಿಲ್ಲ. ಈ ಕಾರಣದಿಂದಾಗಿ, ಅವರಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುವ ಸಾಧ್ಯತೆ ತುಂಬಾ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *