ಮಂತ್ರಾಲಯ ರಾಯರ ದರ್ಶನಕ್ಕೆ ತೆರಳುತ್ತಿದ್ದವರು ದುರಂತ ಅಂತ್ಯ: ಭಯಾನಕ ದುರ್ಘಟನೆ ನಡೆದಿದ್ದು ಹೇಗೆ ಗೊತ್ತಾ?

ಮಂತ್ರಾಲಯ ರಾಯರ ದರ್ಶನಕ್ಕೆ ತೆರಳುತ್ತಿದ್ದವರು ದುರಂತ ಅಂತ್ಯ: ಭಯಾನಕ ದುರ್ಘಟನೆ ನಡೆದಿದ್ದು ಹೇಗೆ ಗೊತ್ತಾ?


ರಾಯಚೂರು, (ಏಪ್ರಿಲ್ 16): ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರು ಮೂಲಲದ ಭಕ್ತರ ಬೊಲೆರೊ ವಾಹನಕ್ಕೆ ಟ್ಯಾಂಕರ್ ಡಿಕ್ಕಿ, ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘೋರ ದುರಂತದಿಂದ ಪವಾಡ ರೀತಿಯಲ್ಲಿ ಮನೋಜ್ ಬದುಕಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಬಾಗಿಲು ಪಕ್ಕದ ಸೀಟಿನಲ್ಲಿ ಮಲಗಿದ್ದ ಮನೋಜ್ ಹಾರಿ ರಸ್ತೆಗೆ ಬಿದ್ದಿದ್ದಾನೆ. ಇನ್ನು ತಾಯಿ ಮೀನಾಕ್ಷಮ್ಮ ಹಾಗೂ ಅಜ್ಜಿ ಪುಟ್ಟಮ್ಮನನ್ನು ಕಳೆದುಕೊಂಡಿರುವ ಮನೋಜ್, ಟಿವಿ9 ಎದುರು ನಡೆದ ಘಟನೆಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರಿನ 8 ಮಂದಿ ಭಕ್ತರು ಸಾವು



Source link

Leave a Reply

Your email address will not be published. Required fields are marked *