ದಾಖಲೆ ಬರೆದ ಕಲಬುರಗಿ ಬಿಸಿಲು: ಆರೆಂಜ್ ಅಲಟ್೯ ಘೋಷಣೆ, ಈ ಸಮಯದಲ್ಲಿ ಹೊರಬಾರದಂತೆ ಸೂಚನೆ

ದಾಖಲೆ ಬರೆದ ಕಲಬುರಗಿ ಬಿಸಿಲು: ಆರೆಂಜ್ ಅಲಟ್೯ ಘೋಷಣೆ, ಈ ಸಮಯದಲ್ಲಿ ಹೊರಬಾರದಂತೆ ಸೂಚನೆ


ಕಲಬುರಗಿ, ಏಪ್ರಿಲ್ 16: ಕಲಬುರಗಿ (ಕಲಬುರಗಿ) ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ. ಇದೀಗ ರಣಬಿಸಿಲಿನ (ಉಷ್ಣ ಅಲೆ) ಕೇಂದ್ರವಾಗಿಯೂ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಇದೀಗ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಜನರು ಮನೆ ಬಿಟ್ಟು ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಜಿಲ್ಲೆಯಲ್ಲಿ ಬರೋಬ್ಬರಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಣಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಜಿಲ್ಲೆಯ ಜನ

ಕಲಬುರಗಿ ಅದುವೆ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗ. ರಣಬಿಸಿಲಿನ ಹೊಡೆತಕ್ಕೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಪ್ರಾರಂಭದ ಬಳಿಕ ರಾಜ್ಯದಲ್ಲಿಯೇ ಅತಿ ಹೆಚ್ಚು ಬಿಸಿಲು ಜಿಲ್ಲೆಯಲ್ಲಿ ದಾಖಲಾಗಿದೆ. ಇದು ಜನರನ್ನು ಬೆಚ್ಚಿಬಿಳಿಸಿದೆ. ನಿನ್ನೆಯಷ್ಟೆ ಕಲಬುರಗಿ ತಾಲ್ಲೂಕಿನಲ್ಲಿ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಯಾರೋ ಹೇಳುತ್ತಿರುವ ಮಾತಲ್ಲ, ಹವಾಮಾನ ಇಲಾಖೆಯೇ ನೀಡಿರುವ ಮಾಹಿತಿ.

ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂದ ಕರ್ನಾಟಕ: ಬೆಂಗಳೂರು ಸೇರಿ ವಿವಿಧೆಡೆ ಹೀಟ್‌ವೇವ್ ಎಚ್ಚರಿಕೆ

ಬಿಸಿಲೂರು ಎಂದೆಂದೂ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಇದೇ ವಾರದಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಝಳಕ್ಕೆ ಹೋಗುವ ಜನರು ಭಯಭೀತರಾಗಿದ್ದಾರೆ. ಕೆಲ ಜನರು ತಂಪು ಪಾಣಿಗಳ ಮೊರೆ ಹೋಗ್ತಿದ್ದಾರೆ. ನಿಂಬೆ ಹಣ್ಣಿನ ರಸ, ಕಬ್ಬಿನ ಹಾಲು, ತೆಂಗಿನಕಾಯಿ ನೀರು, ಸೇರಿದಂತೆ ಕಲ್ಲಂಗಡಿ ಹಣ್ಣಿನ ಸೇವನೆ ಮಾಡ್ತಿದ್ದಾರೆ. ಬಿರು ಬಿಸಿಲಿನ ಹೊಡೆತಕ್ಕೆ ಸರ್ಕಾರಿ ಕಚೇರಿಯ ಸಮಯದಲ್ಲಿ ಸಹ ಬದಲಾವಣೆ ಮಾಡಲಾಗಿದೆ. ಆದರೆ ಜನ ಮಾತ್ರ ಪಾರ್ಕ್‌ನ ಗಿಡ ಮರಗಳು ನೆರಳಿನ ಆಶ್ರಯ ಪಡೆಯುತ್ತಿವೆ.

ಕಲಬುರಗಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುವುದರಿಂದ ಜನ ತತ್ತರಿಸಿ ಹೋಗಿದ್ದಾರೆ. ಔರಾದದಲ್ಲಿ 45 ಡಿಗ್ರಿ ಸೆಲ್ಸಿಯಸ್, ಚಿಂಚೋಳಿ ತಾಲ್ಲೂಕಿನ ಐನಾಪೂರದಲ್ಲಿ 44 ಡಿಗ್ರಿ ಸೆಲ್ಸಿಯಸ್, ಅಫಜಲಪುರ ತಾಲ್ಲೂಕಿನ ಆನೂರ್‌ನಲ್ಲಿ 44 ಸೆಲ್ಸಿಯಸ್, ಆಳಂದ ತಾಲ್ಲೂಕಿನ ಮಾದನಹಿಪ್ಪರಗಾದಲ್ಲಿ 44 ಡಿಗ್ರಿ ಸೆಲ್ಸಿಯಸ್ ಹೀಗೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ.

ಮನೆಯಿಂದ ಹೊರಹೋಗದಂತೆ ಆದೇಶ

ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಕೆಲವು ದಿನ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ. ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮನೆಯಿಂದ ಹೊರಹೋಗುವುದನ್ನು ತಪ್ಪಿಸಬೇಕಾಗಿದೆ. ಬಿಸಿ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನು ಆದೇಶ ಹೊರಡಿಸಿದ್ದಾರೆ.

ಆರೋಗ್ಯದ ಮೇಲೂ ಪರಿಣಾಮ

ಬಿಸಿಲಿನ ಪರಿಣಾಮ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಹೈಡ್ರೇಶನ್ ಉಂಟಾಗಿ ವಾಂತಿ, ಭೇದಿ ಸೇರಿದಂತೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಆರೋಗ್ಯ ಇಲಾಖೆ.

ಇದನ್ನೂ ಓದಿ: ಸುಡು ಬಿಸಿಲಿಗೆ ಬೆಂದ ಕರ್ನಾಟಕ: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ

ಇನ್ನು ಪ್ರತಿ ಬಾರಿಗಿಂತ ಈ ಬಾರಿ ಸಹ ಕಲ್ಯಾಣ ಜಿಲ್ಲೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗಿದೆ. ಮುಂದಿನ ತಿಂಗಳು ಮೇ ತಿಂಗಳಿನಲ್ಲಿ ಇನ್ನೂ ಹೆಚ್ಚಿನ ತಾಪಮಾನವನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಇರುತ್ತದೆ. ಕೇವಲ ಕಲಬುರಗಿ ಅಷ್ಟೇ ಅಲ್ಲದೆ ಯಾದಗಿರಿ, ರಾಯಚೂರು, ಬೀದರ್, ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸೂರ್ಯನ ಪ್ರಖರತೆಗೆ ವಿವಿಧ ಜಿಲ್ಲೆಯ ಜನ ತತ್ತರಿಸಿರುವುದಂತು ನಿಜ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *