Headlines

ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?

ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?


ಜೀ ಕನ್ನಡದ ವಾಹಿನಿಯಲ್ಲಿ ಒಂದಾದ ಬಳಿಕ ಒಂದು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಲೇ ಇರುತ್ತವೆ. ಇತ್ತೀಚೆಗೆ ‘ಜೋಡಿ ನಂ.1’ ಶೋ ಪ್ರಸಾರ ಆರಂಭವಾಗಿದೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಇತ್ತೀಚೆಗೆ ತೆರೆಕಂಡಿದೆ. ಹೀಗಿರುವಾಗಲೇ ಜನರ ಫೇವರಿಟ್ ಶೋ ಎನಿಸಿಕೊಂಡಿರುವ ‘ಸರಿಗಮಪ ಲಿಟ್ಲ್ ಚಾಂಪ್ಸ್’ (ಸರಿಗಮಪ) ಆಗಮನಕ್ಕೆ ಜೀ ಕನ್ನಡ ವೇದಿಕೆ ರೆಡಿ ಮಾಡಿದೆ. ಈ ವೀಕೆಂಡ್ ನಿಂದ ಶೋ ಪ್ರಾರಂಭ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.

‘ಸರಿಗಮಪ’ ಶೋ ಅಂದರೆ ಅನೇಕರಿಗೆ ಇಷ್ಟ. ಅದರಲ್ಲೂ ಈ ಬಾರಿ ಸಣ್ಣ ಮಕ್ಕಳಿಗೆ ಶೋ ವೇದಿಕೆ ಆಗಲಿದೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತದೆ. ಈ ವರ್ಷ 3 ವರ್ಷದಿಂದ ಆರಂಭಗೊಂಡು 15 ವರ್ಷದ ಮಕ್ಕಳು ಶೋನಲ್ಲಿ ಭಾಗವಹಿಸಬಹುದು ಎಂಬುದು ಈ ಬಾರಿಯ ವಿಶೇಷ. ಬೆಂಗಳೂರಿನಲ್ಲಿ ಮಾತ್ರ ಆಡಿಷನ್ ಮಾಡಿದರೆ ಕರ್ನಾಟಕದಲ್ಲಿರುವ ಅನೇಕರಿಗೆ ಭಾಗವಹಿಸಲು ಸಾಧ್ಯವಾಗಬಹುದು. ಹೀಗಾಗಿ, ಕರ್ನಾಟಕದ ಮೂಲೆ ಮೂಲೆಗೆ ತೆರಳಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

‘ಸರಿಗಮಪ ಲಿಟ್ಲ್ ಚಾಂಪ್ಸ್’ ಏಪ್ರಿಲ್ 18 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರ ಕಾರ್ಯಕ್ರಮ. ಸಣ್ಣ ಮಕ್ಕಳು ತಮ್ಮ ಪ್ರತಿಭೆಯನ್ನು ಕರ್ನಾಟಕದ ಜನತೆ ಮುಂದೆ ಇಡುತ್ತಿದ್ದಾರೆ. ಈ ಶೋ ಉದಯೋನ್ಮುಖ ಗಾಯಕರಿಗೆ ಉತ್ತಮ ವೇದಿಕೆಯಾಗಿದೆ.

ಇದನ್ನೂ ಓದಿ: ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್ಗಳಿಗೆ ಸರಿಗಮಪ ಉತ್ತರ

‘ಸರಿಗಮಪ’ ಶೋನ ಮತ್ತೊಂದು ಹೈಲೈಟ್ ಎಂದರೆ ಜಡ್ಜ್‌ಗಳು ಮತ್ತು ಆಯಂಕರ್ಸ್. ರಾಜೇಶ್ ಕೃಷ್ಣನ್, ಮ್ಯೂಸಿಕ್ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕ ವಿಜಯ್ ಪ್ರಕಾಶ್ ಅವರು ತೀರ್ಪುಗಾರರಾಗಿ ಇರಲಿದ್ದಾರೆ. ಇವರುಗಳು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಜನಪ್ರಿಯ ನಿರೂಪಕಿ ಅನುಶ್ರೀ ಅವರು ಈ ಶೋನ ನಡೆಸಿಕೊಡಲಿದ್ದಾರೆ. ಅವರು ಸಣ್ಣ ಮಕ್ಕಳ ಜೊತೆ ಮಗುವಾಗೇ ನಡೆದುಕೊಳ್ಳುವ ಗುಣ ಹೊಂದಿರೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *