ಜೀವನದಲ್ಲಿ ಹಾಸ್ಯದ ಮಹತ್ವ ಮತ್ತು ಅದರ ಮಿತಿಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿರ್ಮಿಸಿದ ಡಾ. ಬಸವರಾಜ್ ಗುರೂಜಿಅವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಜೀವನದಲ್ಲಿ ಸುಖಜ, ನಗು ಅಳು ಸಹ. ಆಕಾಂಕ್ಷೆಗಳು, ಭಾವನಾತ್ಮಕ ಸ್ಪಂದನಗಳು ಜೀವನದ ಭಾಗವಾಗಿದೆ. ಹಾಸ್ಯವು ಜೀವನದ ಅತಿದೊಡ್ಡ ಮದ್ದು ಮತ್ತು ಅವಿಭಾಜ್ಯ ಅಂಗವಾಗಿದೆ. ನಗುವಿನಿಂದ ಮನುಷ್ಯನ ಜೀವನದಲ್ಲಿ ಖುಷಿ ಹೆಚ್ಚುತ್ತದೆ. ಹಾಸ್ಯವಿಲ್ಲದ ಬದುಕು ನಿರರ್ಥಕ ಎನಿಸಬಹುದು. ಹಾಸ್ಯವು ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ತುಂಬುತ್ತದೆ ಮತ್ತು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಮಾನಸಿಕ ಒತ್ತಡ, ಸಾಲದ ಸಂಕಟ, ಕುಟುಂಬದ ಅಗಲಿಕೆ, ಅನಾರೋಗ್ಯದಿಂದ ಬಳಲುತ್ತಿರುವವರು, ಉದ್ಯೋಗದಲ್ಲಿ ಕಿರುಕುಳ ಅಥವಾ ಆತ್ಮವಿಶ್ವಾಸ ಕುಗ್ಗಿದಂತಹ ತೊಂದರೆಗಳು ನಮ್ಮನ್ನು ಕಾಡುತ್ತವೆ. ಇದು ಕಷ್ಟಗಳನ್ನು ಎದುರಿಸಲು ಶಕ್ತಿಯನ್ನು ತುಂಬುತ್ತದೆ ಮತ್ತು ಮುಖದ ನಂತರ ಉಂಟಾಗುತ್ತದೆ.
ಆದರೆ, ಹಾಸ್ಯವು ಎಂದಿಗೂ ಅಪಹಾಸ್ಯವಾಗಿ ಬದಲಾಗಬಾರದು. ಜನರು ಹಾಸ್ಯವನ್ನು ಮಾಡಬಾರದು ಎಂಬುದು ಅರಿಯುವುದು ಅತ್ಯಗತ್ಯ. ಎಲ್ಲವೂ, ದೇವಾಲಯಗಳಲ್ಲಿ ಹಾಸ್ಯ ಮಾಡಬಾರದು. ದೇವಾಲಯಕ್ಕೆ ಹೋದಾಗ ಮೌನವಾಗಿ, ಭಗವಂತನ ಬಗ್ಗೆ ಗಮನಹರಿಸಬೇಕು. ಯಾವುದೇ ವಿಷಯದ ಕುರಿತು ದೇವಸ್ಥಾನದಲ್ಲಿ ಹಾಸ್ಯದಿಂದ ಮಾತನಾಡುವುದು ಶಾಸ್ತ್ರಗಳ ಪ್ರಕಾರ ಸರಿಯಲ್ಲ.
ಎರಡನೆಯದಾಗಿ, ಯಾರಾದರೂ ನಿಧನರಾದಾಗ ಅಥವಾ ದೈವಾದೀನರಾದಾಗ ಅವರ ವಿಚಾರವಾಗಿ ಹಾಸ್ಯ ಮಾಡಬಾರದು. ಅನಾರೋಗ್ಯದ ಸ್ಥಿತಿಯಲ್ಲಿರುವವರ ಮನೆಯಲ್ಲಿ ಅಥವಾ ಸಾವಿನ ಸಂದರ್ಭದಲ್ಲಿ ಹಾಸ್ಯ ಮಾಡುವುದು ಅಷ್ಟು ಶುಭವಲ್ಲ. ಮೂರನೆಯದಾಗಿ, ಪ್ರಾರ್ಥನಾ ಮಂದಿರಗಳು, ಧ್ಯಾನ ಕೇಂದ್ರಗಳು (ಮೆಡಿಟೇಶನ್ ಸೆಂಟರ್‌ಗಳು) ಅಥವಾ ಪ್ರವಚನ ನಡೆಯುವ ಸ್ಥಳಗಳಲ್ಲಿ ಹಾಸ್ಯ ಮಾಡಬಾರದು. ಅಂತಹ ಸಂದರ್ಭಗಳಲ್ಲಿ ನಾವು ಪ್ರಾರ್ಥನೆಗೆ ಕುಳಿತಿರುವಾಗ ಅಥವಾ ಜಪ ಮಾಡುತ್ತಿರುವಾಗ ಗಂಭೀರವಾದ ವಾತಾವರಣವನ್ನು ಕಾಪಾಡಿಕೊಳ್ಳಬೇಕು.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ನಾಲ್ಕನೆಯದಾಗಿ, ಹಿರಿಯರ ಬಗ್ಗೆ, ನಿಮ್ಮ ಮೇಲಾಧಿಕಾರಿಗಳ ಬಗ್ಗೆ ಅಥವಾ ನಿಮ್ಮ ನಿವೃತ್ತ ಸಹೋದ್ಯೋಗಿಗಳ ಬಗ್ಗೆ ಹಾಸ್ಯದಿಂದ ಮಾತನಾಡಲು ಅವರ ಅನುಮತಿ ಪಡೆಯುವುದು ಸೂಕ್ತ. ಧರ್ಮ ಚಿಂತಕರು, ದೈವಾಂಶ ಸಂಭೂತರು, ಸನ್ಯಾಸಿ ವರ್ಗಗಳು, ಮಠಾಧೀಶರು ಮತ್ತು ಸಾಧಕರ ಬಗ್ಗೆ ಮಾತನಾಡುವಾಗ ಹಾಸ್ಯವನ್ನು ಅತಿಯಾಗಿ ಬಳಸುತ್ತಾರೆ. ಇಂತಹ ವ್ಯಕ್ತಿಗಳ ಬಗ್ಗೆ ಗೌರವದಿಂದ ವರ್ತಿಸಬೇಕು.
ಐದನೆಯದಾಗಿ, ಸ್ತ್ರೀಯರ ಬಗ್ಗೆ ಅವರ ಮುಂದೆಯೇ ಹಾಸ್ಯ ಮಾಡುವುದು ಶುಭಕರವಲ್ಲ. ಆರನೆಯದಾಗಿ, ತೊಡಲು ಮಾತಾಡುವವರು, ಕಿವುಡರು, ಅಂಗವಿಕಲರು ಅಥವಾ ಕುರುಡರ ಬಗ್ಗೆ ಹಾಸ್ಯ ಮಾಡುವುದು, ಅಥವಾ ಅವರ ಬಗ್ಗೆ ಕೆಲವು ಹಾಸ್ಯ ಮಾತಾಡುವುದು ಅಷ್ಟು ಶುಭವಲ್ಲ. ಹಾಸ್ಯವು ಬಹಳ ವಿಶೇಷವಾದ ಮತ್ತು ವಿಶೇಷವಾದ ಜೀವನದ ಅಂಗವಾಗಿದ್ದರೂ, ಅದಕ್ಕೆ ಒಂದು ಇತಿಮಿತಿ ಇರಬೇಕು. “ಅತಿ ಸರ್ವತ್ರ ವರ್ಜಯೇತ್” ಎಂಬಂತೆ, ಯಾವುದೇ ವಿಷಯದಲ್ಲಿ ಅತಿರೇಕ ಸಲ್ಲದು. ಹಾಸ್ಯಕ್ಕೆ ಒಂದು ಜಾಗ ಮತ್ತು ಒಳ್ಳೆಯ ವಾತಾವರಣವನ್ನು ಸೃಷ್ಟಿಸುವ ಶಕ್ತಿಯಿದೆ. ಆದರೆ, ಅದು ಕೆಲವರಿಗೆ ಅಪಹಾಸ್ಯವಾಗಬಾರದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:18 am, ಶುಕ್ರ, 17 ಏಪ್ರಿಲ್ 26