Actress Anushka Sharma: ಐಪಿಎಲ್ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಸುದ್ದಿ ಆಗ್ತಾರೋ ಅಷ್ಟೇ ಅವರನ್ನು ಸಪೋರ್ಟ್ ಮಾಡಲು ಬರುವ ಅನುಷ್ಕಾ ಕೂಡ ಚರ್ಚೆ ಆಗ್ತಾರೆ. ವಿರಾಟ್ ಕೊಹ್ಲಿ ಅವರ ಮ್ಯಾಚ್ ಎಲ್ಲೇ ಇದ್ದರೂ ಕೂಡ ಅನುಷ್ಕಾ ಮಾತ್ರ ಮಿಸ್ ಮಾಡೋದಿಲ್ಲ.

ಅನುಷ್ಕಾ ಶರ್ಮಾ ಅವರು ಮೂಲತಃ ಬೆಂಗಳೂರಿನವರು, ಇಲ್ಲೇ ಓದಿದ್ದರು. ಇತ್ತೀಚೆಗೆ RCB ಹಾಗೂ LSG ನಡುವೆ ನಡೆದ ಮ್ಯಾಚ್ನಲ್ಲಿ ಅನುಷ್ಕಾ ಶರ್ಮಾ ಬಂದಿದ್ದರು. ಆಗ ಅವರು ಧರಿಸಿದ್ದ ಉಡುಗೆ ಬಗ್ಗೆ ಚರ್ಚೆ ಆಗಿದೆ.

ಆರ್ಸಿಬಿ (RCB) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೀಲ್ಡ್ನಲ್ಲಿ ಆಡುತ್ತಿದ್ದರೆ, ಅತ್ತ ಅನುಷ್ಕಾ ಶರ್ಮಾ ಅವರು ಫ್ಲೈಯಿಂಗ್ ಕಿಸ್ ಮೂಲಕವೋ ಅಥವಾ ಚಪ್ಪಾಳೆ ತಟ್ಟಿ ಗಂಡನನ್ನು ಹುರಿದುಂಬಿಸುತ್ತಾರೆ. ಪಂದ್ಯಗಳಿಗೆ ಸಿಂಪಲ್ ಆಗಿ ಬರುವ ಅನುಷ್ಕಾ ಶರ್ಮಾ ಅವರು ಈ ಬಾರಿ ಡ್ರೆಸ್ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ. ಇತ್ತೀಚಿನ ಪಂದ್ಯದಲ್ಲಿ ಅವರು ಧರಿಸಿದ್ದ ಉಡುಪಿನ ಮೌಲ್ಯ ಸಂಚಲನ ಮೂಡಿಸಿದೆ.

ಅನುಷ್ಕಾ ಅವರು ‘ಸ್ಯಾಂಡ್ರೋ ಪ್ಯಾರಿಸ್’ (Sandro Paris) ಬ್ರ್ಯಾಂಡ್ನ ಸುಂದರ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಮೌಲ್ಯದಲ್ಲಿ ರಫಲ್ ಸ್ಟ್ರೈಪ್ಡ್ ಶರ್ಟ್ ₹29 ,750 ರೂಪಾಯಿ, ಮ್ಯಾಕ್ಸಿ ಪಾಪ್ಲಿನ್ ಸ್ಕರ್ಟ್, ₹36,125 ಒಟ್ಟು ₹65,875 ಆಗಿದೆ. ಆರ್ಸಿಬಿ ಮ್ಯಾಚ್ನಲ್ಲಿ ವಿಐಪಿ ಗ್ಯಾಲರಿ ಒಂದು ಟಿಕೆಟ್ ದರವು 45000 ರೂಪಾಯಿವರೆಗ ಇರುವುದು.

Source link
ಬೆಂಗಳೂರು ಮ್ಯಾಚ್ ದಿನ ಅನುಷ್ಕಾ ಶರ್ಮಾ ಹಾಕಿದ ಡ್ರೆಸ್ ಬೆಲೆಗೆ RCB ವಿಐಪಿ ಟಿಕೆಟ್ ಎಷ್ಟು ಬರತ್ತೆ ಗೊತ್ತಾ?