ಅಕ್ಷಯ ತೃತೀಯವು (ಅಕ್ಷಯ ತೃತೀಯ) ಭಾರತೀಯರ ಪಾಲಿಗೆ ಬಹಳ ಪುಣ್ಯವೆಂದು ಭಾವಿಸಲಾಗಿದೆ. ಶುಭ ಕಾರ್ಯಗಳಿಗೆ ಈ ದಿನ ಶ್ರೇಷ್ಠವಾಗಿದೆ. ಚಿನ್ನ ಮತ್ತು ಅದರ ಸಂಬಂಧಿತ ವಸ್ತುಗಳನ್ನು ಖರೀದಿಸಿದರೆ ಸಂಪತ್ತು ಸಮೃದ್ಧವಾಗಿ ಹೋಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ, ಬಹಳಷ್ಟು ಹಿಂದೂಗಳು ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುತ್ತಾರೆ.
ಈ ವರ್ಷ (2026) ಅಕ್ಷಯ ತೃತೀಯವು ಏಪ್ರಿಲ್ 19 ರಂದು ಇದೆ. ಭಾನುವಾರವೇ ಆಗಿರುವುದರಿಂದ ಹೆಚ್ಚಿನ ಜನರ ಒಡವೆ ಅಂಗಡಿಗಳಿಗೆ ಮುಗಿಬೀಳುವುದು ಹೌದು. ಅಕ್ಷಯ ತೃತೀಯದಂದು ಹೂಡಿಕೆಗಾಗಿ ಚಿನ್ನ ಖರೀದಿಸುವ ಟ್ರೆಂಡ್ ಶುರುವಾಗಿದೆ. ಹಲವು ಜನರು ಪ್ರತೀ ವರ್ಷವೂ ಅಕ್ಷಯ ತೃತೀಯದಿಂದ ಚಿನ್ನದ ನಾಣ್ಯವನ್ನು ಖರೀದಿಸಿ ಇಟ್ಟುಕೊಳ್ಳುವುದು ವಾಡಿಕೆಯಾಗಿದೆ.
ಇದನ್ನೂ ಓದಿ: ಆರೂವರೆ ಜನಿಸಿದ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್
2021ರಿಂದ, ಅಂದರೆ ಕಳೆದ 5 ವರ್ಷದಿಂದ ಅಕ್ಷಯ ತೃತೀಯ ದಿನದಂದು 10 ಗ್ರಾಮ್ ಚಿನ್ನದ ಖರೀದಿ ಮಾಡುತ್ತಾ ಬಂದರೆ ಹೇಗಿತ್ತು? ಈ ಐದು ಚಿನ್ನವನ್ನು ಖರೀದಿಸಲು ಎಷ್ಟು ವ್ಯಯಿಸುತ್ತಿದೆ, ಈಗ ಅದರ ಮೌಲ್ಯ ಎಷ್ಟಿರುತ್ತದೆ ಎಂಬ ಮಾಹಿತಿ ಇಲ್ಲಿದೆ.
10 ಗ್ರಾಂ ಗೋಲ್ಡ್ ಕಾಯಿನ್ ಮೇಲೆ ಹೂಡಿಕೆ
- 2021ರಲ್ಲಿ 1 ಗ್ರಾಮ್ ಚಿನ್ನದ ಬೆಲೆ 46,500 ರೂ
- 2022ರಲ್ಲಿ 1 ಗ್ರಾಮ್ ಚಿನ್ನದ ಬೆಲೆ 51,510 ರೂ
- 2023ರಲ್ಲಿ 1 ಗ್ರಾಮ್ ಚಿನ್ನದ ಬೆಲೆ 61,300 ರೂ
- 2024ರಲ್ಲಿ 1 ಗ್ರಾಮ್ ಚಿನ್ನದ ಬೆಲೆ 73,240 ರೂ
- 2025ರಲ್ಲಿ 1 ಗ್ರಾಮ್ ಚಿನ್ನದ ಬೆಲೆ 96,500 ರೂ
ಈ ಐದು ಖರೀದಿಸಲಾದ 50 ಗ್ರಾಮ್ ಚಿನ್ನಕ್ಕೆ ಹೂಡಿಕೆ ಮಾಡಲಾಗಿರುವುದು 3,29,050 ರೂ. ಇವತ್ತು ಒಂದು ಗ್ರಾಮ್ ಚಿನ್ನದ ಬೆಲೆ 1.55 ಲಕ್ಷ ರೂ ಇದೆ. ಇದನ್ನು ಪರಿಗಣಿಸಿ ಲೆಕ್ಕ ಮಾಡಿದರೆ 50 ಗ್ರಾಮ್ ಚಿನ್ನಕ್ಕೆ ಇವತ್ತಿನ ಮೌಲ್ಯ 7,75,000 ರೂ ಆಗುತ್ತದೆ. ಅಂದರೆ ನೀವು ಮಾಡಿದ ಹೂಡಿಕೆಯು ಎರಡು ಪಟ್ಟಿಗೂ ಹೆಚ್ಚು ಲಾಭ ತಂದಂತಾಗುತ್ತದೆ.
ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್
ನಿಯಮಿತ ಹೂಡಿಕೆಯನ್ನು ವಾರ್ಷಿಕ ರಿಟರ್ನ್‌ನಲ್ಲಿ ಅಳೆಯಲು ಎಕ್ಸ್‌ಐಆರ್‌ಆರ್ ಅನ್ನು ಬಳಸಲಾಗಿದೆ. ಅದರ ಪ್ರಕಾರ ಚಿನ್ನವು ಕಳೆದ 5 ವರ್ಷದ ಶೇ. 39-41 ಎಕ್ಸ್ ಐಆರ್ ಆರ್ ರಿಟರ್ನ್ ನೀಡಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ