IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್‌ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್ ನಮ್ದಾಗತ್ತಾ?

RCB ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಕೋಟ್ಯಂತರ ಕನ್ನಡಿಗರ, ಕ್ರಿಕೆಟ್ ಪ್ರೇಮಿಗಳ ಭಾವನೆ. ಟ್ರೋಫಿ ಇರಲಿ ಬಿಡಲಿ, ಅವರ ಆಕ್ರಮಣಕಾರಿ ಆಟ ಎಂದಿಗೂ ಜನಮಾನಸದಲ್ಲಿ ಉಳಿಯುತ್ತದೆ. ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಈ ತಂಡಕ್ಕೆ ಇದ್ದಷ್ಟು ಅಭಿಮಾನಿ ಬಳಗ ಯಾವ ಟೀಂಗೂ ಇಲ್ಲ.

ವಿರಾಟ್ ಕೊಹ್ಲಿ ಈಗ ತುಂಬ ಆಧ್ಯಾತ್ಮಿಕವಾಗಿದ್ದಾರೆ. ಅವರು ಮೈದಾನದಲ್ಲಿ ಶತಕಗಳನ್ನು ಸಿಡಿಸಲಿದ್ದಾರೆ. ಅವರ ಏಕದಿನ (ODI) ವೃತ್ತಿಜೀವನವು 2028 ಸುಮಾರಿಗೆ ಇದ್ದಕ್ಕಿದ್ದಂತೆ ಕೊನೆಗೊಳ್ಳಬಹುದು.

ಆರ್‌ಸಿಬಿ ಕಪ್ ಗೆಲ್ಲಲಿದೆಯಾ ಎಂದು ಪ್ರಶ್ನೆ ಇದೆ. ಟ್ಯಾರೋ ಕಾರ್ಡ್ ರೀಡರ್ ಅಮಾಯ್ರಾ ಅವರು ಆರ್‌ಸಿಬಿ ಗೆಲ್ಲಲಿದೆಯಾ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂ ಚೆನ್ನಾಗಿ ಆಡುತ್ತಾರೆ, ಆದರೆ ಫೈನಲ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. RCB ತಂಡವು ಕೊನೇವರೆಗೂ ಹೋದರೂ ಕೂಡ ಟ್ರೋಫಿ ಗೆಲ್ಲುವುದು ಕಷ್ಟ ಎಂದು ಅಮಾಯ್ರಾ ಹೇಳಿದ್ದಾರೆ.

ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಟೀಂ ನಡುವೆ ತೀವ್ರ ಪೈಪೋಟಿ ಇರಲಿದೆ. ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಭಾರತವು 2027 ರ ವಿಶ್ವಕಪ್ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.

Source link
IPL 2026 Winner: ಈ ಬಾರಿ RCB ಕಪ್ ಗೆಲ್ಲತ್ತಾ?: ಟ್ಯಾರೋ ರೀಡರ್ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!