ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ: ದೇಶದ ಮಹಿಳೆಯರ ಗೆಲುವು ಎಂದ ಕೈ; ನಾಯಕರ ಕೆಸರೆರಚಾಟ

ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ: ದೇಶದ ಮಹಿಳೆಯರ ಗೆಲುವು ಎಂದ ಕೈ; ನಾಯಕರ ಕೆಸರೆರಚಾಟ


ಮಹಿಳಾ ಮೀಸಲಾತಿ ವಿಧೇಯ (ಸಂಗ್ರಹ ಚಿತ್ರ)ಚಿತ್ರದ ಕ್ರೆಡಿಟ್ ಮೂಲ: google

ಬೆಂಗಳೂರು, ಏಪ್ರಿಲ್ 17: ನಾರಿ ಶಕ್ತಿ ವಂದನಾ ಅಧಿನಿಯಮ ಅರ್ಥಾತ್ ಮಹಿಳಾ ಮೀಸಲಾತಿ (ಮಹಿಳಾ ಮೀಸಲಾತಿ ಮಸೂದೆ) ವಿಧೇಯಕಕ್ಕೆ ಲೋಕಸಭೆಯಲ್ಲಿ ಸೋಲಾಗಿದೆ. ಆ ಮೂಲಕ ಒಂದೆಡೆ ಎನ್ ಡಿಎ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಸಂಭ್ರಮಿಸಿದ್ದಾರೆ. ವಿಪಕ್ಷಗಳ ವಿರುದ್ಧ ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ. ಇತ್ತ ಕರ್ನಾಟಕದಲ್ಲಿ (ಕರ್ನಾಟಕ) ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೆಸರೆರಚಾಟ. ನಾರಿ ಶಕ್ತಿ ವಂದನಾ ವಿಧೇಯಕ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ದೇಶ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಭಾರತದ ಇತಿಹಾಸಕ್ಕೆ ಇದೊಂದು ಕರಾಳ ದಿನವಾಗಿದೆ. ಐಸಿಹಾಸಿಕ ವಿಧೇಯಕವನ್ನು INDIA ಮೈತ್ರಿಕೂಟ ಸೋಲಿಸಿದೆ. ಸ್ತ್ರೀಯರ ಉನ್ನತಿಗೆ ಅಡ್ಡಗಾಲು ಹಾಕಿದ ವಿಪಕ್ಷಗಳನ್ನು ಕ್ಷಮಿಸಲ್ಲ. ರಾಜಕೀಯ ಜಿದ್ದಿಗೆ ಬಿದ್ದ ಸ್ತ್ರೀ ವಿರೋಧಿಗಳು ಬಿಲ್ ಸೋಲಿಸಿದ್ದಾರೆ. ಇದು ಮಹಿಳಾ ಮೀಸಲಾತಿ ಬಿಲ್ ಸೋಲಲ್ಲ, ದೇಶದ ಸೋಲು. ದೇಶದ ಜನತೆ ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಲಾರದು ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ಟ್ವೀಟ್

ಇನ್ನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪೋಸ್ಟ್ ಮಾಡಿದ್ದು, ವಿಧೇಯಕ ತಡೆಯಲು ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಡಿಎಂಕೆ ಒಟ್ಟಾಗಿದ್ದವು. ಇದು ಕೇವಲ ಒಂದು ಮಸೂದೆಗೆ ಸಂಬಂಧಿಸಿದ ವಿಷಯವಲ್ಲ. ಇದು ದೇಶದ ನಾರಿ ಶಕ್ತಿಗೆ ನೀಡುವ ಗೌರವದ ಪ್ರಶ್ನೆಯಾಗಿದೆ. ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಕ್ಷಣವನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಮುಂದಿನ ಪ್ರತಿಯಲ್ಲೂ ಇದರ ಹೊಣೆಗಾರಿಕೆ ಕೇಳಲಾಗುತ್ತೆ.

ಮಹಿಳಾ ಮೀಸಲಾತಿ ವಿರೋಧಿ ಕಾಂಗ್ರೆಸ್ ಗೆ ಧಿಕ್ಕಾರ ಎಂದ ಜೆಡಿಎಸ್

ವಿಧಾನಸಭೆಗಳು ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33% ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನಾ ಮಸೂದೆ ಲೋಕಸಭೆಯಲ್ಲಿ ಸೋತಿರುವ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟಕ್ಕೆ ನಾಚಿಕೆಯಾಗಬೇಕು. ಮಹಿಳಾ ಮೀಸಲಾತಿ ವಿಧೇಯಕವನ್ನು ಬೆಂಬಲಿಸಿದೆ, ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿಗಳು, ಮಸೂದೆ ವಿರುದ್ಧ ಮತಚಲಾಯಿಸುವ ಮೂಲಕ ಸಾಬೀತಾಗಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಬಹುಮತ ಸಿಗದಿದ್ದಕ್ಕೆ ಸಂಸತ್ ಸದಸ್ಯ ಎನ್‌ಡಿಎ ನಾಯಕರ ಪ್ರತಿಭಟನೆ

1996ರಲ್ಲಿ ಪ್ರಧಾನಿಯಾಗಿದ್ದ ವೇಳೆ ದೇವೇಗೌಡರು ಮಹತ್ವಾಕಾಂಕ್ಷೆಯಿಂದ ಮಹಿಳೆಯರಿಗೆ ಶೇ.33% ಮೀಸಲಾತಿ ಕಲ್ಪಿಸುವ ಐತಿಹಾಸಿಕ ಮಸೂದೆಯನ್ನು ಮಂಡಿಸಿದ್ದರು. ಆಗಲೂ ಸಹ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದ ಕಾಂಗ್ರೆಸ್ ಇವತ್ತು ಸಹ ಮಸೂದೆ ವಿರುದ್ಧ ಮತ ಹಾಕಿ ಸೋಲಿಸಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಇದಕ್ಕೆ ಕಾಂಗ್ರೆಸ್ ಕಾರಣ ಎಂದ ಆರ್ ಅಶೋಕ್

ಕಾಂಗ್ರೆಸ್ ನವರು ಮಹಿಳಾ ವಿರೋಧಿಗಳು. ಅವರು ಮಸೂದೆಯನ್ನು ಪಾಸ್ ಮಾಡಬೇಕಾಗಿತ್ತು. ಇದರಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿತ್ತು. ಅದನ್ನು ಹಾಳು ಮಾಡಿದ್ದಾರೆ, ಇದಕ್ಕೆ ಕಾಂಗ್ರೆಸ್ ಕಾರಣ ಎಂದು ವಿಪಕ್ಷ ನಾಯಕ. ಅಶೋಕ್ ಹರಿಹಾಯ್ದಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಸಂಚು: ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದ ಕಾಂಗ್ರೆಸ್

ಇನ್ನು ಈ ಬಗ್ಗೆ ರಾಜ್ಯ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರ ಮರುವಿಂಗಡಣೆ ಮಾಡಲು ಮುಂದಾಗಿದ್ದರು. ಆ ಮೂಲಕ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾನಿ ಮಾಡುವ ದುರುದ್ದೇಶದ ಪ್ರಯತ್ನ ನಡೆಸಿದ್ದರು. ಆದರೆ ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷಗಳು ಅವರ ಈ ಕುತಂತ್ರದ ನಡೆಯನ್ನು ತಡೆಹಿಡಿಯಲಾಗಿದೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸೋಲಿಸಲಾಗಿದೆ. ಈ ಹೋರಾಟದಲ್ಲಿ ಕೈಜೋಡಿಸಿದ ವಿರೋಧ ಪಕ್ಷಗಳ ಎಲ್ಲಾ ನಾಯಕರಿಗೆ ನಾವು ಹೃತ್ಪೂರ್ವಕ ಧನ್ಯವಾದವನ್ನು ತಿಳಿಸಲಾಗಿದೆ.

ರಾಜ್ಯ ಕಾಂಗ್ರೆಸ್ ಟ್ವೀಟ್

ಮೋದಿ-ಶಾ ಜೋಡಿಯು ತಮ್ಮ ಸಂಕುಚಿತ ರಾಜಕೀಯ ಲಾಭಕ್ಕಾಗಿ ಭಾರತದ ಪ್ರಜಾಪ್ರಭುತ್ವವನ್ನು ನಾಶಮಾಡಲು ಹೊರಟಿದ್ದರು. ಆದರೆ ಅವರ ಈ ಸಂಚು ಈಗ ಸಂಪೂರ್ಣವಾಗಿ ನೆಲಕಚ್ಚಿದೆ. 2023 ರಲ್ಲಿ ಅಂಗೀಕರಿಸಲಾದ “ನಾರಿ ಶಕ್ತಿ ವಂದನ ಅಧಿನಿಯಮ” ಕ್ಕೆ ಅನುಗುಣವಾಗಿ, 2029 ರ ಚುನಾವಣೆಯಿಂದಲೇ ಮಹಿಳೆಯರಿಗೆ ಶೇ. 33ರಷ್ಟು ಪ್ರಧಾನಿ ಮೀಸಲಾತಿಯನ್ನು ತರಬೇಕೆಂದು ನಾವು ಮತ್ತೊಮ್ಮೆ ಮೋದಿ ಸರ್ಕಾರವನ್ನು ಒತ್ತಾಯಿಸುತ್ತೇವೆ. ಕಾಂಗ್ರೆಸ್ ಪಕ್ಷವು 2023ರ ಸೆಪ್ಟೆಂಬರ್‌ನಿಂದಲೂ ಈ ಬೇಡಿಕೆಯನ್ನು ಮಂಡಿಸುತ್ತಾ ಬಂದಿದೆ. ‘ನಾರಿ ಶಕ್ತಿ’ಯ ಬಗ್ಗೆ ಪ್ರಧಾನಿಯಾಗಿರುವ ಬದ್ಧತೆಗೆ ಇದು ನಿಜವಾದ ಪರೀಕ್ಷೆಯಾಗಲಿದೆ ಎಂದಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ಇದು ದಕ್ಷಿಣ ಭಾರತದ ಗೆಲುವು. ಇದು ವಿಪಕ್ಷಗಳ ಗೆಲುವು, ದೇಶದ ಮಹಿಳೆಯರ ಗೆಲುವು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *