ಸಂಸದೆಯಾದ ಬಳಿಕ ಕಂಗನಾ ರಣಾವತ್, ತಮ್ಮ ಹಳೆಯ ಫೋಟೋ ಬಳಸಿ ಅಶ್ಲೀಲ ಕಮೆಂಟ್ ಮಾಡಿದ್ದ ಕಾಂಗ್ರೆಸ್ ವಕ್ತಾರರ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ್ದಾರೆ. ನಟಿಯಾಗಿ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ನನ್ನ ಧರ್ಮ ಎಂದ ಅವರು, ಈ ಕೀಳು ಮನಸ್ಥಿತಿಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ನಟಿ ಕಂಗನಾ ರಣಾವತ್ ಮೊದಲಿನಿಂದಲೂ ಮಾತಿಗೆ ನಿಂತರೆ ಎಂಥವರಿಗೂ ಕೇರೇ ಮಾಡಲ್ಲ. ಈಗ ಸಂಸದೆ. ಮತ್ತೆ ಕೇಳಬೇಕಾ? ಹಿಮಾಚಲ ಪ್ರದೇಶದಿಂದ ಮೊದಲ ಬಾರಿಗೆ ನಿಂತು ಭರ್ಜರಿ ಗೆಲುವು ಸಾಧಿಸಿದವರು ನಟಿ.

ಕೆಲವೊಮ್ಮೆ ರಾಜಕೀಯದಲ್ಲಿಯಾಗಲೀ, ಬೇರೆ ಜೀವನದಲ್ಲಿ ಆಗಲೀ, ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲದಾಗ, ಅವರನ್ನು ಸೋಲಿಸುವುದು ಸುಲಭ ಅಲ್ಲ ಎಂದು ಎನ್ನಿಸಿದಾಗ ಏನೋ ಒಂದು ವಿಷಯ ಕೆದಕಿ ಕೆಟ್ಟದ್ದಾಗಿ ಮಾತನಾಡಿ ಸಮಾಧಾನ ಪಟ್ಟುಕೊಳ್ಳುವುದು ಮಾಮೂಲು. ಅದೇ ರೀತಿ, ನಟಿ ಕಂಗನಾ ಅವರ ವಿಷಯದಲ್ಲಿಯೂ ಆಗಿದೆ.

ನಟಿಯಾಗಿರುವ ಕಂಗನಾ, ಟೂ ಪೀಸ್ನಿಂದ ಹಿಡಿದು ಝಾನ್ಸಿ ರಾಣಿಯವರೆಗೂ ಡ್ರೆಸ್ ಮಾಡಿಕೊಂಡವರು, ನ್ಯಾಷನಲ್ ಅವಾರ್ಡ್ ಗೆದ್ದವರು. ಆದರೆ ಅವರ ತುಂಡುಡುಗೆಯ ಫೋಟೋ ಶೇರ್ ಮಾಡಿಕೊಂಡು ಮಂಡಿಯ (ಕಂಗನಾ ಗೆದ್ದ ಪ್ರದೇಶ) ಜನ ಎಷ್ಟಕ್ಕೆ ಸಿಗುತ್ತಾರೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥ್ (Supriya Srinath) ಪೋಸ್ಟ್ ಹಾಕಿದ್ದರು.

ಅದರ ಬಗ್ಗೆ ಸಂಸತ್ತಿನಲ್ಲಿ ಗುಡುಗಿದ್ದಾರೆ ನಟಿ ಕಂಗನಾ. ನಾನು 2014ರಲ್ಲಿ ಚುನಾವಣೆ ನಿಂತಾಗ ಇಂಥದ್ದೊಂದು ಫೋಟೋ ಹಾಕಿ ನನ್ನನ್ನು ಟೀಕಿಸಲಾಗಿತ್ತು. ನಾನೊಬ್ಬ ನಟಿ. ಎಲ್ಲಾ ರೀತಿಯ ಡ್ರೆಸ್ಗಳನ್ನು ಹಾಕುತ್ತೇನೆ. ಇತಿಹಾಸಕಾರರ ರೋಲ್ಗಳನ್ನೂ ಮಾಡಿದ್ದೇನೆ, ಸೆ*ಕ್ಸ್ workers, ಫ್ಯಾಷನ್ ಡ್ರಗ್ ಎಡಿಕ್ಟ್ ರೋಲ್ನಿಂದ ಹಿಡಿದು ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ.

ಒಂದು ನಟಿಯಾಗಿ ನನ್ನ ಧರ್ಮ ನಾನು ಪಾಲಿಸಿದ್ದೇನೆ. ಆದರೆ ಯಾವುದೋ ಒಂದು ಸಿನಿಮಾದ ಯಾವುದೋ ಒಂದು ರೋಲ್ನ ಫೋಟೋ ಹಾಕಿಕೊಂಡು ಕಾಂಗ್ರೆಸ್ನ ವಕ್ತಾರೆ ಈ ಅಶ್ಲೀಲ ಕಮೆಂಟ್ ಹಾಕಿದ್ದು, ಇಡೀ ಮಂಡಿ ಮಹಿಳೆಯರನ್ನು ಅವಮಾನಿಸಿದ್ದಾರೆ.

ಮಂಡಿ ಎನ್ನುವುದು ಸಾಧಾರಣ ಸ್ಥಳವಲ್ಲ, ಅಲ್ಲಿ ಮಾಂಡವ ಋಷಿ ತಪಸ್ಸು ಮಾಡಿದ್ದರಿಂದ ಮಂಡಿ ಎಂದು ಹೆಸರು ಬಂದಿದೆ. ಇಂಥ ಮಂಡಿ ಕ್ಷೇತ್ರದ ಬಗ್ಗೆ, ಅಲ್ಲಿರುವ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಅಶ್ಲೀಲವಾಗಿ ಮಾತನಾಡಲಾಗಿದೆ ಎಂದು ನಟಿ ಕಂಗನಾ ಗುಡುಗಿದ್ದಾರೆ. ಕಾಂಗ್ರೆಸ್ಸಿಗರ ಈ ಕೀಳು ಮನಸ್ಥಿತಿಯಿಂದಲೇ ಅಲ್ಲಿ ಅವರು ಸೋತು, ನಾನು ಗೆಲುವು ಸಾಧಿಸಿದೆ ಎಂದಿದ್ದಾರೆ ನಟಿ. ಹಳೆಯ ವಿಡಿಯೋ ಮತ್ತೀಗ ವೈರಲ್ ಆಗುತ್ತಿದೆ.

Source link
ಸಿನಿಮಾ ಫೋಟೋ: ಹೆಣ್ಣಿನ ಬಗ್ಗೆ ಕಾಂಗ್ರೆಸ್ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut