
ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲು ಕಂಡಿದೆ. ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಇಲ್ಲದೆ ತ್ವರಿತವಾಗಿ ಜಾರಿಗೊಳಿಸಲು ಯತ್ನಿಸಿದ ಈ ಮಸೂದೆಯು, ಅಗತ್ಯವಾದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾಯಿತು.
ನವದೆಹಲಿ (ಏ.17): ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿದೆ. ಶುಕ್ರವಾರ ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಮತದಾನಕ್ಕೆ ಇಳಿಸಿದಾಗ 540 ಸಂಸದರ ಪೈಕಿ 489 ಮಂದಿ ಸಂಸದರ ಮತದಾನ ಮಾಡಿದರು. ತಿದ್ದುಪಡಿಯ ಪರವಾಗಿ 278 ಮಂದಿ ಮತ ಚಲಾಯಿಸಿದ್ದರೆ, ಮೀಸಲಾತಿಯ ವಿರುದ್ಧವಾಗಿ 211 ಮಂದಿ ಮತ ಚಲಾಯಿಸಿದರು. ಇದು ಪ್ರಮುಖವಾದ ಸಂವಿಧಾನ ತಿದ್ದುಪಡಿಯಾಗಿದ್ದ ಕಾರಣ ಮೂರನೇ ಎರಡರಷ್ಟು ಮತದಾನ ಪಡೆಯುವುದು ಅಗತ್ಯವಾಗಿತ್ತು. ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ಹೊಸ ಜನಗಣತಿಯನ್ನು ನಡೆಸದೆಯೇ ಕ್ಷೇತ್ರ ಪುನರ್ವಿಂಗಡಣೆಯನ್ನು ಕೈಗೊಳ್ಳಲು ಪ್ರಯತ್ನಿಸುವ ಮಸೂದೆಯನ್ನು ಲೋಕಸಭೆ ಶುಕ್ರವಾರ ತಿರಸ್ಕರಿಸಿತು.
ಮತಗಳ ವಿಭಜನೆಯ ನಂತರ ಈ ಪ್ರಸ್ತಾವನೆಯನ್ನು ಸೋಲಿಸಲಾಯಿತು, 278 ಸದಸ್ಯರು ವಿರುದ್ಧವಾಗಿ ಮತ್ತು 211 ಸದಸ್ಯರು ಪರವಾಗಿ ಮತ ಚಲಾಯಿಸಿದರು. ಒಟ್ಟು 489 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆಗಾಗಿ ಹೊಸ ಜನಗಣತಿಯ ಅಗತ್ಯವನ್ನು ತಪ್ಪಿಸುವ ಗುರಿಯನ್ನು ಮಸೂದೆ ಹೊಂದಿತ್ತು, ಇದು ಶಾಸಕಾಂಗಗಳಲ್ಲಿ ಮಹಿಳಾ ಕೋಟಾವನ್ನು ಜಾರಿಗೆ ತರುವ ಕೇಂದ್ರ ನಿಬಂಧನೆಯಾಗಿದೆ.