New rules from October 1 2025: ಅಕ್ಟೋಬರ್ 1 ರಿಂದ ದೇಶದ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇವು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿವೆ.

ದೇಶದಲ್ಲಿ ಹಲವು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ತಮ್ಮ ನಿಯಮಾವಳಿಗಳಲ್ಲಿ ಮಾಡಿರುವ ಬದಲಾವಣೆಗಳು ಅ.1ರಿಂದ ಜಾರಿಗೆ ಬರಲಿವೆ. ಬ್ಯಾಂಕ್, ರೈಲ್ವೆ, ಗೇಮಿಂಗ್ ಸೇರಿದಂತೆ ಹಲವು ಕ್ಷೇತ್ರಗಳ ನಿಯಮ ಮತ್ತು ಕಾರ್ಯವಿಧಾನದಲ್ಲಿ ಪರಿವರ್ತನೆ ಆಗಲಿವೆ. ಕೆಲ ಪ್ರಮುಖ ಮಾರ್ಪಾಡುಗಳು ಇಂತಿವೆ.

ಐಆರ್‌ಸಿಟಿಸಿ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಟಿಕೆಟ್ ಬುಕಿಂಗ್ ಆರಂಭವಾದ ಮೊದಲ 15 ನಿಮಿಷ, ಆಧಾರ್ ಧೃಡೀಕರಣ ಮಾಡಿಸಿಕೊಂಡವರಿಗೆ ಮೀಸಲಿರಲಿದೆ. ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ವೇಳೆ ಏಜೆಂಟ್‌ಗಳು ಬುಕಿಂಗ್ ಮಾಡಲು ಸಾಧ್ಯವಿರುವುದಿಲ್ಲ.

ಜಿಎಸ್‌ಟಿ 2.0 ಜಾರಿಯ ಪರಿಣಾಮ ಭಾರತೀಯ ಅಂಚೆ ಇಲಾಖೆಯು ವಿವಿಧ ಮಾದರಿಯ ಪೋಸ್ಟ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಿರುವ ಪರಿಣಾಮ, ಇನ್ನುಮುಂದೆ ಸ್ಪೀಡ್ ಪೋಸ್ಟ್ ಸೇವೆಯ ಶುಲ್ಕದಲ್ಲಿ ಏರಿಕೆ ಆಗಲಿದೆ. ಜತೆಗೆ, ಒಟಿಪಿ ಆಧರಿತ ಡೆಲಿವರಿ ಮತ್ತು ವಸ್ತುಗಳ ಟ್ರ್ಯಾಕಿಂಗ್ ಸಾಧ್ಯವಾಗಲಿದೆ.

ಪ್ರಸ್ತುತ, ಬ್ಯಾಂಕುಗಳಿಗೆ ಸಲ್ಲಿಸಿದ ಚೆಕ್‌ಗಳನ್ನು ಬ್ಯಾಚ್‌ಗಳಲ್ಲಿ ಕ್ಲಿಯರ್ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಚೆಕ್ ಸಲ್ಲಿಕೆಯಾಗುತ್ತಿದ್ದಂತೆ, ಮೊತ್ತವನ್ನು ಸಂಬಂಧಿಸಿದವರ ಖಾತೆಗೆ ವರ್ಗಾಯಿಸಲಾಗುತ್ತದೆ. ಅ.4ರಿಂದ ಇದು ಮೊದಲ ಹಂತದಲ್ಲಿ ಜಾರಿಯಾಗಲಿದ್ದು, 2026ರ ಜ.3ರಿಂದ ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಲಿದೆ.

ಇದನ್ನೂ ಓದಿ: ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ ಅಮೆರಿಕದ ಚಿನ್ನ, ಭಾರತದಲ್ಲಿನ್ನು ಚಿನ್ನ ಖರೀದಿ ಕನಸಷ್ಟೇ!

ನಿಜವಾದ ಹಣ ಬಳಸಿ ಆಡುವ ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕಲು ರಚಿಸಲಾಗಿರುವ ಆನ್‌ಲೈನ್ ಗೇಮಿಂಗ್ ಕಾಯ್ದೆಯ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬರಲಿದೆ. ಇದರಡಿ ನೈಜ ಹಣವನ್ನು ಒಳಗೊಂಡ ಆಟಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ತಿಂಗಳ ಆರಂಭ, ದಸರಾ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಆಘಾತ: LPG ದರ ಏರಿಕೆ

Source link
ಅ.1 ರಿಂದ ಹೊಸ ನಿಯಮ: ಇಂದಿನಿಂದ ರೈಲ್ವೆ, ಅಂಚೆ, ಬ್ಯಾಂಕಲ್ಲಿ ಹಲವು ಬದಲಾವಣೆ