ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್


ವಾಷಿಂಗ್ಟನ್, ಏಪ್ರಿಲ್ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(ಡೊನಾಲ್ಡ್ ಟ್ರಂಪ್) ಮತ್ತೊಮ್ಮೆ ತಮ್ಮ ಎಂದಿನ ಶೈಲಿಯ ಭರವಸೆಯ ಮಾತುಗಳ ಮೂಲಕ ಜಗತ್ತಿನ ಗಮನಸೆಳೆದಿದ್ದಾರೆ. ನೆವಾಡ ಪ್ರವಾಸಕ್ಕೆ ತೆರಳುವ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಎಲ್ಲದಕ್ಕೂ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಪಾಕಿಸ್ತಾನದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಬಂದರೆ ಖಂಡಿತ ನಾನು ಅಲ್ಲಿಗೆ ಹೋಗುತ್ತೇನೆ, ಏಕೆಂದರೆ ಪಾಕಿಸ್ತಾನಿಗಳನ್ನು ಈ ನನ್ನನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಇರಾನ್ ಒಪ್ಪಂದಕ್ಕೆ ಬಂದ ಮಾತ್ರಕ್ಕೆ ತಾವು ಪಾಕಿಸ್ತಾನಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ.

ಇರಾನ್‌ನಿಂದ ಯುರೇನಿಯಂ ತ್ಯಾಗದ ಭರವಸೆ?
ಯಾವುದೇ ಬಲವಾದ ಪುರಾವೆಗಳನ್ನು ನೀಡದಿದ್ದರೂ, ಟೆಹ್ರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡಬೇಕು ಎಂಬ ಅಮೆರಿಕದ ದೀರ್ಘಕಾಲದ ಒತ್ತಾಯಕ್ಕೆ ಇರಾನ್ ಮಣಿಯುತ್ತಿರುವ ಸೂಚನೆಯನ್ನು ಟ್ರಂಪ್ ಪ್ರಕಟಿಸಿದೆ.

ರಾಜಕೀಯ ತಲೆನೋವಾದ ತೈಲ ಬೆಲೆ ಮತ್ತು ಯುದ್ಧ
ಫೆಬ್ರವರಿ 28 ರಿಂದ ಆರಂಭವಾದ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷವು ಸಾವಿರಾರು ಜೀವಗಳನ್ನು ಬಲಿಪಡೆದಿದೆ. ಜಾಗತಿಕವಾಗಿ ತೈಲ ಬೆಲೆ ಏರಿಕೆಗೆ ಕಾರಣವಾಗಿರುವ ಈ ಯುದ್ಧವು ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿತ್ತು. “ಈ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬೇಕು ಎಂದು ಲಾಸ್ ವೇಗಾಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಘೋಷಿಸಿದ್ದಾರೆ.

ಇಸ್ರೇಲ್-ಲೆಬನಾನ್ ಕದನ ವಿರಾಮದ ಗೆಲುವು
ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದ ಟ್ರಂಪ್, ಇಬ್ಬರನ್ನೂ ಶ್ವೇತಭವನಕ್ಕೆ ಆಹ್ವಾನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದಲೇ ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಜಾರಿಗೆ ಬಂದಿದ್ದು, ಇದನ್ನು ಶಾಶ್ವತ ಶಾಂತಿಯನ್ನಾಗಿ ಪರಿವರ್ತಿಸಲು ಜೆಡಿ ವ್ಯಾನ್ಸ್ ಮತ್ತು ಮಾರ್ಕೊ ರೂಬಿಯೊ ನೇತೃತ್ವದ ತಂಡಕ್ಕೆ ಟ್ರಂಪ್ ಜವಾಬ್ದಾರಿಯನ್ನು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ

ಪಾಕಿಸ್ತಾನದ ಮಧ್ಯಸ್ಥಿಕೆ ಮತ್ತು ಇರಾನ್ ಸ್ವಾಗತ
ವಿಶೇಷವೆಂದರೆ, ಈ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನವು ಪ್ರಮುಖ ಮಧ್ಯಸ್ಥಿಕೆ ವಹಿಸುತ್ತಿದೆ. ಲೆಬನಾನ್ ಕದನ ವಿರಾಮವನ್ನು ಇರಾನ್ ಕೂಡ ಸ್ವಾಗತಿಸಿದ್ದು, ಇದು ಅಮೆರಿಕದೊಂದಿಗೆ ಪಾಕಿಸ್ತಾನದ ಮೂಲಕ ತಲುಪಿರುವ ಮಹತ್ವದ ತಿಳುವಳಿಕೆಯ ಭಾಗವಾಗಿದೆ ಎಂದು ಟೆಹ್ರಾನ್ ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ಯುದ್ಧದ ಅಂಚಿನಲ್ಲಿದ್ದ ಅಮೆರಿಕ ಮತ್ತು ಇರಾನ್, ಈಗ ಪಾಕಿಸ್ತಾನದ ನೆಲದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಹಂತಕ್ಕೆ ಬಂದಿರುವುದು ಜಾಗತಿಕ ರಾಜಕೀಯದ ದೊಡ್ಡ ತಿರುವು. ಟ್ರಂಪ್ ಅವರ ಈ ‘ಇಸ್ಲಾಮಾಬಾದ್ ಪ್ರವಾಸ’ ಅಂತಿಮವಾದರೆ, ಅದು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದ ಮೇಲೆಯೂ ದೊಡ್ಡ ಪರಿಣಾಮ ಬೀರಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *