Headlines

ನಾಳೆಯ ಹವಾಮಾನ: ಮೊಂತಾ ಚಂಡಮಾರುತದ ಅಬ್ಬರ, ಕರಾವಳಿಯಲ್ಲಿ ಹೈ ಅಲರ್ಟ್​

ನಾಳೆಯ ಹವಾಮಾನ: ಮೊಂತಾ ಚಂಡಮಾರುತದ ಅಬ್ಬರ, ಕರಾವಳಿಯಲ್ಲಿ ಹೈ ಅಲರ್ಟ್​


ಬೆಂಗಳೂರು, ಅಕ್ಟೋಬರ್ 29: ನೆರೆ ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಮೋಂತಾ ಚಂಡಮಾರುತದ (ಮೊಂಟಾ ಸೈಕ್ಲೋನ್) ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳ ಮೇಲೆ ಉಂಟಾಗಲಿದೆ. ಕರ್ನಾಟಕದಲ್ಲಿ ಮಳೆಯ ಪ್ರಮಾಣ ನಾಳೆ ಕಡಿಮೆಯಾಗಲಿದೆ, ಕರಾವಳಿ ಭಾಗದಲ್ಲಿ ಗಾಳಿಯ ಪ್ರಮಾಣ ಹೆಚ್ಚಾಗಲಿದೆ. ತೆಲಂಗಾಣ, ಆಂಧ್ರ ಮತ್ತು ತಮಿಳುನಾಡಿನ ಗಡಿಗಳಲ್ಲಿ ವಾತಾವರಣ ಏರಿಳಿತ ಜಿಲ್ಲೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ, ಸಣ್ಣ ಅಥವಾ ಸಾಮಾನ್ಯ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ.

ಎಲ್ಲೆಲ್ಲಿ ಮಳೆ?

8ಕೋಲಾರ ಮತ್ತು ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯ ಜೊತೆಗೆ ಬಾರಿ ಗಾಳಿ ಇರಲಿದೆ. ಗಾಳಿಯ ವೇಗ ಗಂಟೆಗೆ 45-55 ಕಿ.ಮೀ. ಇರಲಿದೆ 60 ಕಿ.ಮೀ. ತಲುಪುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಸೂಚಿಸಲಾಗಿದೆ. ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಬೀದರ್‌ನಲ್ಲಿ ದಟ್ಟ ಮೋಡ ಅಥವಾ ಸಣ್ಣ ಪ್ರಮಾಣದ ಮಳೆಯಾಗಲಿದೆ. ಕಲಬುರಗಿ, ಚಿತ್ರದುರ್ಗ, ದಾರವಾಡ ಮತ್ತು ಬೆಳಗಾವಿಯಲ್ಲೂ ಮೋಡ ಕವಿದ ವಾತಾವರಣ ಇರಲಿದೆ.

ಇದನ್ನೂ ಓದಿ: ಚಂಡಮಾರುತದ ಅಬ್ಬರ; ಆಂಧ್ರಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ಜಾರಿ, ಕರಾವಳಿ ಜಿಲ್ಲೆಗಳಲ್ಲಿ ವಾಹನ ಸಂಚಾರ ನಿಷೇಧ

ಆಂಧ್ರದ ಕಾಕಿನಾಡ ತೀರಕ್ಕೆ ಮೊಂಚ ಚಂಡಮಾರುತ ಅಪ್ಪಳಿಸಿದ ಪರಿಣಾಮ ಆಂಧ್ರ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಹೈಅಲರ್ಟ್ ಘೋಷ ಮಾಡಲಾಗಿದೆ. ಆಂಧ್ರ, ತಮಿಳುನಾಡು, ಪುದುಚೇರಿ, ಪಶ್ಚಿಮಬಂಗಾಳ, ಒಡಿಶಾದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಚಂಡಮಾರುತದಿಂದ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ, ಮುಂಜಾಗ್ರತಾ ಕ್ರಮವಾಗಿ NDRF, SDRF, ರಕ್ಷಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಮುದ್ರ ತೀರದ ಹಲವು ಗ್ರಾಮಗಳ ಜನರನ್ನು ರಕ್ಷಣಾ ಪಡೆ ಸ್ಥಳಾಂತರಿಸಿದ್ದು, ನಿರಾಶ್ರಿತರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಮುದ್ರ ತೀರಕ್ಕೆ ಯಾರೂ ತೆರಳದಂತೆ ಸೂಚಿಸಲಾಗಿದೆ, ಮೀನುಗಾರಿಕೆಗೂ ನಿಷೇಧ ಹೇರಲಾಗಿದೆ.

ಒಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:56 pm, ಬುಧವಾರ, 29 ಅಕ್ಟೋಬರ್ 25



Source link

Leave a Reply

Your email address will not be published. Required fields are marked *