Headlines

8 ವರ್ಷ ಅಜ್ಞಾತವಾಸದಲ್ಲಿದ್ದ ದರ್ಶನ್ ಮಾಜಿ ಆಪ್ತ ಮಲ್ಲಿಕಾರ್ಜುನ್ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದೇನು? | Darshan Thoogudeepa Former Personal Assistant Mallikarjun Pressmeet Highlights Is Here To Know

8 ವರ್ಷ ಅಜ್ಞಾತವಾಸದಲ್ಲಿದ್ದ ದರ್ಶನ್ ಮಾಜಿ ಆಪ್ತ ಮಲ್ಲಿಕಾರ್ಜುನ್ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದೇನು? | Darshan Thoogudeepa Former Personal Assistant Mallikarjun Pressmeet Highlights Is Here To Know



8 ವರ್ಷ ಅಜ್ಞಾತವಾಸದಲ್ಲಿದ್ದ ದರ್ಶನ್ ಮಾಜಿ ಆಪ್ತ ಮಲ್ಲಿಕಾರ್ಜುನ್ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದೇನು? | Darshan Thoogudeepa Former Personal Assistant Mallikarjun Pressmeet Highlights Is Here To Know

‘ಪ್ರೇಮಬರಹ ಸಿನಿಮಾದಿಂದ ಅವ್ರ ನಡುವೆ ವೈಮನಸ್ಸು ಮೂಡಿದೆ ಅನ್ನೋದು ಗೊತ್ತಿಲ್ಲ.. ನಾನು ದರ್ಶನ್ ಸರ್ ಅವ್ರ ಒಂದು ರೂಪಾಯಿ ಖರ್ಚ್ ಮಾಡಿಲ್ಲ.. ನಾನು ಹಣ ದುರ್ಬಳಕೆ ಮಾಡಿದ್ದೀನಿ ಅಂತ ದರ್ಶನ್ ಸರ್ ಹೇಳಿಲ್ಲ.. ಯಾರ್ಯಾರೋ ಅಂತಹ ಸುಳ್ಳು ಸುದ್ದಿ ಹರಡಿಸಿದ್ರು..’ ಎಂದಿರುವ  ಮಲ್ಲಿಕಾರ್ಜುನ್ ಇನ್ನೂ ಏನಂದ್ರು ನೋಡಿ..

ಬರೋಬ್ಬರಿ 8 ವರ್ಷ ಅಜ್ಞಾತವಾಸದಲ್ಲಿದ್ದ ಮಲ್ಲಿ, ಅಂದರೆ ನಟ ದರ್ಶನ್ ತೂಗುದೀಪ ಅವರ ಮಾಜಿ ಆಪ್ತ ಸಹಾಯಕ ಮಲ್ಲಿಕಾರ್ಜುನ್ (Mallikarjun) ಇಂದು ತಾವು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ..

ಹಲವರಿಗೆ ಸಾಲ ತೀರಿಸಬೇಕಿದ್ದ ಹಿನ್ನೆಲೆಯಲ್ಲಿ ಯಾವುದೋ ಮುನಿಸಿನಿಂದ ದಾಸನಿಂದ ಮಲ್ಲಿ ದೂರವಾಗಿದ್ದಾರೆ ಎಂಬ ಮಾತು ಓಡಾಡುತ್ತಿತ್ತು. ದರ್ಶನ್ ನೆರಳಿನಂತಿದ್ದ ಆಪ್ತ ಸಹಾಯಕ ಮಲ್ಲಿಕಾರ್ಜುನ್ ಅವರು ಇದ್ದಕ್ಕಿದ್ದಂತೆ ಬೆಂಗಳೂರು ಬಿಟ್ಟಿದ್ದರು.

‘ನನ್ನಿಂದ ಎಷ್ಟೋ ಜನಕ್ಕೆ ನೋವಾಗಿದೆ, ಎಲ್ಲರಲ್ಲೂ ಕ್ಷಮೆ ಕೇಳ್ತೀನಿ, ಉದ್ದೇಶಪೂರ್ವಕವಾಗಿ ಯಾವುದನ್ನೂ ಮಾಡಿಲ್ಲ, ಎಲ್ಲಿ ಎಡವಿದೆ ಅಂತ ಗೊತ್ತಾಗಲಿಲ್ಲ, ವಿಧಿ ನನ್ ಹತ್ರ ಆಟವಾಡಿಬಿಡ್ತು’ ಎಂದು ಮೊದಲಿಗೆ ಹೇಳಿದ್ದಾರೆ. ಬಳಿಕ ಮಲ್ಲಿ ಮಾತು ಕಂಟಿನ್ಯೂ ಮಾಡಿದ್ದಾರೆ.

‘2000ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ. ಮೊದಲ ಸಲ ಚಿತ್ರ ಕೈ ಹಿಡಿಲಿಲ್ಲ. ಲಾಸ್ ತುಂಬಾ ಆಗಿಬಿಡ್ತು. ಆದರೆ ಇವತ್ತಲ್ಲ ನಾಳೆ ಗೆಲ್ತಿನಿ ಅಂತಿದ್ದೆ.

ತೆಲುಗು ಸಿನಿಮಾಗಳು ನಷ್ಟ ಆಯ್ತು, ಬೆಂಗಳೂರು ಬಿಡುವಾಗ ಬರೀ ಕೈಯಲ್ಲಿ ಇದ್ದೆ, ಹೋಟೆಲ್ ವ್ಯವಹಾರ ಕೂಡ ಇತ್ತು, ಆಗ ಸ್ವಲ್ಪ ದುಡ್ಡು ಓಡಾಡ್ತಿತ್ತು.

ದಿನಕರ್ ಜೊತೆ ಕ್ಲೋಸ್ ಆಗಿದ್ದೆ. ತೂಗುದೀಪ ಪ್ರೊಡಕ್ಷನ್ಸ್ ನನ್ನ ಮಗನಂತೆ ನೋಡಿಕೊಂಡ್ರು. ದರ್ಶನ್ ನನ್ನ ಸ್ವಂತ ಅಣ್ಣನಂತೆ ಇದ್ರು. ಸಾಲ ಮಾಡಿಕೊಂಡು ಊರು ಬಿಟ್ಟೆ. ನನ್ನ ಹೆಂಡತಿ ಮುಗ್ಧೆ, ಅವಳಿಗೆ ಏನು ಗೊತ್ತಿರಲಿಲ್ಲ. 8 ಕೋಟಿಗೂ ಹೆಚ್ಚು ಸಾಲ ಮಾಡಿದ್ದೆ. ಸಾಯೋಕೆ ನನಗೆ ಧೈರ್ಯ ಇರಲಿಲ್ಲ. ಸಾಯಬೇಕು ಅಂತಿದ್ದಾಗ 1 ಫೋನ್ ಬಂತು. ನನ್ನ ತಮ್ಮನ ಮದುವೆ ಫಿಕ್ಸ್ ಆಗಿತ್ತು. ನನಗೆ ಶಾಕ್ ಆಗಿಬಿಡ್ತು. ಸಾಯೋ ಕಾರ್ಯಕ್ರಮ ಮುಂದಕ್ಕೆ ಹಾಕಿದೆ..’ ಎಂದು ಹೇಳುತ್ತ ಹಳೆಯ ಕಷ್ಣದ ದಿನಗಳ ನೆನೆದು ಕಣ್ಣೀರಾಕಿದ್ದಾರೆ ಮಲ್ಲಿಕಾರ್ಜುನ್.

ಮಾತನ್ನಾಡುತ್ತ ಮಲ್ಲಿಕಾರ್ಜುನ್ ಅವರು- ‘ನಾನು ಸ್ವಲ್ಪ ಹೆದರಿದ್ದೀನಿ, ಪ್ಲೀಸ್ ನನಗೆ ಕಂಫರ್ಟ್ ಜೋನ್ ಕ್ರಿಯೇಟ್ ಮಾಡಿ.. ಪ್ರೆಸ್ ಮೀಟ್ ಮಾಡೊಕು ನನ್ನ ಬಳಿ ಹಣ ಇರಲಿಲ್ಲ. ನಾನು ಸೋತಿರುವಂತ ವ್ಯಕ್ತಿ ನಾನು ಸತ್ತಿಲ್ಲ.. ದರ್ಶನ್ ಕೇಸ್ ನಲ್ಲೂ ನನ್ ಹೆಸರು ಬಂತು. ಅರ್ಜುನ್ ಸರ್ಜಾಗೆ 2 ಚೆಕ್ ಕೊಟ್ಟೆ. ಅದು ಬೌನ್ಸ್ ಆಗಿ ಸರ್ಚ್ ವಾರೆಂಟ್ ಬಂತು, ನಂಗೆ ಕಿವಿ ಅಪರೇಷನ್ ಆಯ್ತು.

ಬೆಂಗಳೂರಿಗೆ ಬಂದಮೇಲೆ ದಿನಕರ್ ಮೀಟ್ ಆದೆ.. ಆಮೇಲೆ ಆರೋಗ್ಯ ಕೆಟ್ಟು 7 ತಿಂಗಳು ಬೆಡ್ ರೆಸ್ಟ್ ನಲ್ಲಿದ್ದೆ.. ನಾನು 23-24 ಜನರಿಂದ ಹಣ ತೆಗೆದುಕೊಂಡಿದ್ದೇನೆ. ಎಲ್ಲರ ಮನೆಗೂ ಹೋದೆ ಮನವಿ ಮಾಡಿಕೊಂಡೆ. ನಾನು ಸೋತಿದ್ದೀನಿ ಸತ್ತಿಲ್ಲ ಅಂದೆ.. ಎಲ್ಲರೂ ಧೈರ್ಯ ಹೇಳಿ ಕಳಿಸಿದ್ರು..

ದರ್ಶನ್ ಸರ್ ಹೆಸರಲ್ಲಿ ಹಣ ತಗೋಂಡಿದ್ದೀನಿ ಅನ್ನೊದ ಒಂದು ಕಡೆ ಪ್ರೂವ್ ಮಾಡಿ.. ನಾನು ಹಣ ತಗೊಂಡ್ ಇದ್ರೆ ಹೇಳಿದ ಕೆಲಸ ಮಾಡ್ತಿನಿ.. ಅಂತೆ ಕಂತೆಗಳು ಬರೋದು ಸಹಜ… ನಾನು ಬೆಂಗಳೂರಿಗೆ ಬಂದ ತಕ್ಷಣ ದಿನಕರ್ ಅವ್ರನ್ನ ಭೇಟಿ ಮಾಡಿದೆ.. ನಾನು ಬೆಂಗಳೂರಿಗೆ ಬಂದಾಗ ದರ್ಶನ್ ಸರ್ ಬೇಲ್ ಮೇಲೆ‌ ಹೊರಗೆ ಬಂದಿದ್ರು.. ದಿನಕರ್ ಜೊತೆ ನಡೆದ ಎಲ್ಲಾ ವಿಚಾರವನ್ನು ನಾನು ಹೇಳಿದೆ..

ಅದಕ್ಕೆ ದಿನಕರ್ ಸರ್- ‘ಹೋಗ್ಲಿ ಬಿಡು ನಿನ್ನ ಪಾಡಿಗೆ ನೀನು ಇರು.. ಅಂದ್ರು. ನಾನು ‘ದರ್ಶನ್ ಸರ್ ಭೇಟಿ ಮಾಡಬೇಕು’ ಅಂತ ಹೇಳಿದೆ.. ದಿನಕರ್ ಅವರು ‘ಸದ್ಯಕ್ಕೆ ಬೇಡ’ ಅಂತ ನನಗೆ ಹೇಳಿದ್ರು.

ಸೆಲೆಬ್ರಿಟಿ ಇವೆಂಟ್ ಮೇನೇಜ್ಮೆಂಟ್ ಕಂಪನಿ ಮಾಡಬೇಕು ಅನ್ಕೊಂಡಿದ್ದೀನಿ. ದರ್ಶನ್ ಸರ್ ನನ್ನ ಬಹಳ ಚೆನ್ನಾಗಿ ನೋಡ್ಕೊಂಡಿದ್ದಾರೆ

ಅವ್ರು ಆದಷ್ಟು ಬೇಗ ನಿರಪರಾಧಿ ಅಂತ ಜೈಲಿಂದ ಹೊರಗೆ ಬರ್ಲಿ

ದರ್ಶನ್ ಸರ್ ಮತ್ತೆ ಕೆಲಸಕ್ಕೆ ಕರೆದ್ರೆ ನಾನು ಕೆಲಸ ಮಾಡ್ತಿನಿ. ಅಲ್ಲಿಂದ ಹೊರಟ ನಾನು ಇಡೀ ದೇಶ ಸುತ್ತಿದ್ದೀನಿ… ಎಲ್ಲರನ್ನು ಬಿಟ್ಟು 7ವರ್ಷ ಸುತ್ತಿದ್ದೀನಿ.. ಈ ಏಳು ವರ್ಷ ನನಗೆ ಸಾಡೆ ಸಾತ್ ಇತ್ತು.. ನಂತ್ರ ನಾನು ನೇಪಾಳಕ್ಕೆ ಹೋಗಿ ನನ್ನ ಸ್ನೇಹಿತನ ಮನೆಯಲ್ಲಿ ಜಾಗ ಪಡೆದುಕೊಂಡೆ. ಆ ನಂತ್ರ ನನಗೆ ಪಶ್ಚಾತ್ತಾಪ ಕಾಡತೊಡಗಿತು.. ಮತ್ತೆ ಫ್ಯಾಮಿಲಿ ಜೊತೆ ಹೋಗಬೇಕು ಅನಿಸ್ತು.. ನನ್ನ ತಂದೆ ಸತ್ತಾಗಲೂ ನನಗೆ ಹೋಗಲು ಆಗಲಿಲ್ಲ.. ನನ್ನ ತಾಯಿ ಸತ್ತಾಗಲೂ ನಾನು ಅವರಿಗೆ ಹಿಡಿ ಮಣ್ಣಾಕಲು ಸಾಧ್ಯವಾಗಲಿಲ್ಲ.

ಇದರಿಂದ ನಾನಗೆ ಬೇಸರ ಆಯ್ತು.. ಇದೇ ವೇಳೆ ದರ್ಶನ್ ಅವರ ಕೊಲೆ ವಿಚಾರ ನಡೆದಿತ್ತು.. ಅದರಲ್ಲೂ ನನ್ನ ಹೆಸರು ಉಲ್ಲೇಖ ಆಗಿತ್ತು. ಆ ನಂತ್ರ ಪ್ರೇಮಬರಹ ಸಿನಿಮಾ‌ ಚಾರದಲ್ಲಿ ನಾನು ಅರ್ಜುನ್ ಸರ್ಜಾ ಅವರಿಗೆ ಸೆಕ್ಯೂರಿಟಿ ಉದ್ದೇಶದಿಂದ ಕೊಟ್ಟಿದ್ದೆ.. ಆ ಚೆಕ್ ಬೌನ್ಸ್ ಆಗಿದ್ದರಿಂದ ನನ್ನ ಮೇಲೆ ಸರ್ಚ್ ವಾರೆಂಟ್ ಇಶ್ಯೂ ಮಾಡಿದ್ರು. ಅಗ ನಾನು ಬೇಲ್ ತಗೊಂಡು, ದಿನಕರ್ ಅವರನ್ನು ಭೇಟಿ ಮಾಡ್ದೆ.. ಆಗ ದರ್ಶನ್ ಅವರು ಬೇಲ್ ತಗೊಂಡು ಆಚೆ ಬಂದಿದ್ರು.. ಆದ್ರೆ ಭೇಟಿ ಆಗಲಿಲ್ಲ..

ನಾನು ಸಾಲ ಕೊಡಬೇಕಿದ್ದ ಎಲ್ಲರನ್ನೂ ಭೇಟಿ ಆಗಿದ್ದೇನೆ.. ಎಲ್ಲರೂ ನನಗೆ ನಿಮ್ಮ ಹತ್ರ ಇದ್ದಾಗ ಕೊಡಿ ಅಂತ ಹೇಳಿದ್ದಾರೆ. ದರ್ಶನ್ ಅವರ ಐರಾವತ ಸಿನಿಮಾ ಶೂಟಿಂಗ್ ವೇಳೆ ಒಂದು ಕೋಟಿ ಸಾಲ ಕೊಟ್ಟ ನನಗೆ ಸಹಾಯ ಮಾಡಿದ್ರು. ದರ್ಶನ್ ಸರ್ ಗೂ ನನ್ನ ಸಾಲಕ್ಮೂ ಯಾವುದೇ ಸಂಬಂಧ ಇಲ್ಲ.. ದರ್ಶನ್ ಹಾಗೂ ಧ್ರು ಸರ್ಜಾ ಅವರ ಜಗಳ ನನಗೇ ಗೊತ್ತಿಲ್ಲ

‘ದರ್ಶನ್ ಅವರು ಹೇಳಿದ್ದಕ್ಕೆ ನಾನು ಪ್ರೇಮ ಬರಹ ಸಿನಿಮಾವನ್ನು ಡಿಸ್ಟ್ರಿಬ್ಯೂಟ್ ಮಾಡು’ ಅಂದ್ರು. ಆ‌ ಸಿನಿಮಾಗೆ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದ್ದೆ.. ಕಲೆಕ್ಷನ್ ಆಗಿದ್ದು ಒಂದೂವರೆ ಕೋಟಿ. ನನ್ನ ಎಲ್ಲಾ ಖರ್ಚು ಕಳೆದು 48 ಲಕ್ಷ ಕೊಡಬೇಕಿತ್ತು.. ನಾನು ಕೊಡಬೇಕಿದ್ದ ಹಣದಲ್ಲಿ ಒಂದು ಲಕ್ಷ ಲೆಕ್ಕ ಹೆಚ್ಚು ಕಡಿಮೆ ಆಯ್ತು. ಆಗ ಅರ್ಜುನ್ ಸರ್ಜಾ ಈ ವಿಚಾರವನ್ನು ದರ್ಶನ್ ವರಿಗೆ ಹೇಳ್ತೀನಿ ಅಂದಾಗ ನಾನು ಮತ್ತೆ ಲೆಕ್ಕಹಾಕಿ 5 ಲಕ್ಷ ಕೊಡಬೇಕಾಗಿ ಬಂತು

ನಾನು ದರ್ಶನ್ ಅವರ ಹೆಸರೇಳಿ ಯಾವುದೇ ಹಣ ಸಂಗ್ರಹಿಸಿಲ್ಲ.. ಆ ರೀತಿ ಮಾಡಿದ್ರೆ ಒಂದೇ ಒಂದು ಪ್ರೂವ್ ಮಾಡಿ

ದರ್ಶನ್ ಸರ್ ಮತ್ತು ಧ್ರುವ ಅವ್ರ ನಡುವೆ ಮನಸ್ತಾಪದ ಬಗ್ಗೆ ನನಗೆ ಗೊತ್ತಿಲ್ಲ.. ನಾ‌ನು ಊರು ಬಿಡುವ ಮುಂಚೆ ದರ್ಶನ್ ಸರ್ ಧ್ರುವ ಅವ್ರು ತುಂಬಾ ಚೆನ್ನಾಗಿದ್ರು.. ಅದ್ರೆ ಈಗ ಅವ್ರ ಬಾಂದವ್ಯ ಹೇಗಿದೆ ಗೊತ್ತಿಲ್ಲ

ಪ್ರೇಮಬರಹ ಸಿನಿಮಾದಿಂದ ಅವ್ರ ನಡುವೆ ವೈಮನಸ್ಸು ಮೂಡಿದೆ ಅನ್ನೋದು ಗೊತ್ತಿಲ್ಲ.. ನಾನು ದರ್ಶನ್ ಸರ್ ಅವ್ರ ಒಂದು ರೂಪಾಯಿ ಖರ್ಚ್ ಮಾಡಿಲ್ಲ.. ನಾನು ಹಣ ದುರ್ಬಳಕೆ ಮಾಡಿದ್ದೀನಿ ಅಂತ ದರ್ಶನ್ ಸರ್ ಹೇಳಿಲ್ಲ.. ಯಾರ್ಯಾರೋ ಅಂತಹ ಸುಳ್ಳು ಸುದ್ದಿ ಹರಡಿಸಿದ್ರು.. ನಾನು ಈಗಲೂ ದೇವರ ಮುಂದೆ ನನಗೆ ನನ್ನ ಮಗನಿಗೆ ಬೇಡಲ್ಲ, ಅದ್ರೆ ದರ್ಶನ್, ದಿನಕರ್ ಬಗ್ಗೆ ಬೇಡಿ ಕೊಳ್ತೀನಿ, ದರ್ಶನ್ ಸರ್‌ಗೆ ಒಳ್ಳೆದಾಗಲಿ, ಅದಷ್ಟು ಹೊರಗೆ ಬರಲಿ’ ಎಂದಿದ್ದಾರೆ. ಮಾತಿನ ಮಧ್ಯೆ ಸಾಕಷ್ಟು ಅಳು, ಪಶ್ಚಾತ್ತಾಪ ಅವರನ್ನು ಕಾಡಿದೆ.



Source link

Leave a Reply

Your email address will not be published. Required fields are marked *