Headlines

ಮಂಗಳಮುಖಿ, ಪ್ರಿಯಕರನ ಸಾವಿಗೆ ಬಿಗ್‌ ಟ್ವಿಸ್ಟ್; ಐದಾರು ವರ್ಷದ ಪ್ರೇಮಕಥೆಗೆ ದುರಂತ ಅಂತ್ಯ!

ಮಂಗಳಮುಖಿ, ಪ್ರಿಯಕರನ ಸಾವಿಗೆ ಬಿಗ್‌ ಟ್ವಿಸ್ಟ್; ಐದಾರು ವರ್ಷದ ಪ್ರೇಮಕಥೆಗೆ ದುರಂತ ಅಂತ್ಯ!

ಮಂಗಳಮುಖಿ, ಪ್ರಿಯಕರನ ಸಾವಿಗೆ ಬಿಗ್‌ ಟ್ವಿಸ್ಟ್; ಐದಾರು ವರ್ಷದ ಪ್ರೇಮಕಥೆಗೆ ದುರಂತ ಅಂತ್ಯ!

ಬಳ್ಳಾರಿಯಲ್ಲಿ ಮಂಗಳಮುಖಿ ಸುಹಾಸಿನಿ ಮತ್ತು ಆಕೆಯ ಪ್ರಿಯಕರ ಶೇಖರ್ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಣಕಾಸು ಮತ್ತು ಮದುವೆ ವಿಚಾರವಾಗಿ ನಡೆದ ಜಗಳದ ನಂತರ ಶೇಖರ್, ಸುಹಾಸಿನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬಳ್ಳಾರಿಯ ಮಂಗಳಮುಖಿ ಮತ್ತು ಆಕೆಯ ಪ್ರಿಯಕರನ ಸಾವಿನ ಪ್ರಕರಣದ ಕುರಿತು ಎಸ್‌ಪಿ ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ. ಮಂಗಳಮುಖಿ ಸುಹಾಸಿನಿ ಅಲಿಯಸ್ ದೇವರಾಜ್ (29) ಮತ್ತು ಶೇಖರ್ ಇಬ್ಬರು ಬಳ್ಳಾರಿಯ ಎಂ.ಕೆ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುಹಾಸಿನಿ ಕಾಲ್ ರಿಸೀವ್ ಮಾಡದಿದ್ದಾಗ ಅನುಮಾನಗೊಂಡು ಆಕೆಯ ಸೋದರ ಬಂದು ನೋಡಿದಾಗ ಇಬ್ಬರ ಶವ ಪತ್ತೆಯಾಗಿತ್ತು.

ಎಸ್‌ಪಿ ಸುಮನ್ ಪನ್ನೇಕರ್ ಹೇಳಿಕೆ ಪ್ರಕಾರ, ಸುಹಾಸಿನಿ ಮತ್ತು ಶೇಖರ್‌ ಕಳೆದ ನಾಲ್ಕು ವರ್ಷಗಳಿಂದ ಜೊತೆಯಲ್ಲಿದ್ದರು. ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ಸುಹಾಸಿನಿ ಶವ ನೆಲದ ಮೇಲೆ ಮತ್ತು ಶೇಖರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಪ್ರಾಥಮಿಕ ತನಿಖೆಯಲ್ಲಿ ಸುಹಾಸಿನಿಯನ್ನು ಕೊಲೆ ಮಾಡಲಾಗಿದ್ದು, ಶೇಖರ್ ಕಿಟಕಿಗೆ ನೇಣು ಬಿಗಿದುಕೊಂಡಿದ್ದಾನೆ. ಮರಣೋತ್ತರ ಶವ ಪರೀಕ್ಷೆಯ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಮಂಗಳಮುಖಿ ಸುಹಾಸಿನಿ ಹಾಗೂ ಶೇಖರ್ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶೇಖರ್‌ಗೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಂತರ ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಶೇಖರ್ ಕುಟುಂಬಸ್ಥರು ಮತ್ತು ಮಂಗಳಮುಖಿಯರು ಸದಸ್ಯರು ರಾಜಿ ಪಂಚಾಯ್ತಿ ನಡೆಸಿದ್ದರು. ಈ ಪಂಚಾಯ್ತಿ ಬಳಿಕ ಇಬ್ಬರು ಪ್ರತ್ಯೇಕವಾಗಿದ್ದರು. ಆದ್ರೆ ಕಳೆದ ಒಂದು ವರ್ಷದಿಂದ ಶೇಖರ್ ಮತ್ತು ಸುಹಾಸಿನಿ ಮತ್ತೆ ಆಪ್ತರಾಗಿದ್ದರು. ಬಾಡಿಗೆ ಮನೆ ಮಾಡಿಕೊಂಡು ಗಂಡ-ಹೆಂಡ್ತಿಯಾಗಿ ಸಂಸಾರ ನಡೆಸುತ್ತಿದ್ದರು.

ಇದನ್ನೂ ಓದಿ: ಮಹಿಳೆಯರ ಮುಂದೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕು ಹಾಕಿದ ಶಿಕ್ಷಕ; ರುಂಡವಿಲ್ಲದ ಬೆತ್ತಲೆ ಮೃತದೇಹ ಪತ್ತೆ

ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದ ಸುಹಾಸಿನಿ ಬಳ್ಳಾರಿಗೆ ವಾಪಸ್ ಆಗಿದ್ದಳು. ಹಣಕಾಸು ಮತ್ತು ಮದುವೆ ವಿಷಯವಾಗಿ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಕೋಪದಲ್ಲಿ ಸುಹಾಸಿನಿಯನ್ನು ಕೊಂದು ಶೇಖರ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಶೇಖರ್ ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಸ್ತೆ ಬದಿಯ ಎಗ್ ರೈಸ್ ಅಂಗಡಿಗಳ ಮೇಲೆ ದಾಳಿ; ಬಂದ್ ಮಾಡುವ ಎಚ್ಚರಿಕೆ ನೀಡಿದ ಅಧಿಕಾರಿಗಳು

Source link

Leave a Reply

Your email address will not be published. Required fields are marked *