
ರಾಯಚೂರು, (ಮಾರ್ಚ್ 09): ಕನಸಿನ ಮನೆಯಲ್ಲೇ ದಂಪತಿ (ದಂಪತಿ) ದುರಂತ ಸಾವು ಕಂಡಿರುವ ಘಟನೆ ರಾಯಚೂರಿನ (ರಾಯಚೂರು) ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಹೌದು…ನಿರ್ಮಾಣ ಗಂಡ ಮನೆಯ ಮೆಟ್ಟಿಲು ಕುಸಿದು ಹೆಂಡತಿ ದುರಂತ ಸಾವುಕಂಡಿದ್ದಾರೆ. ದ್ಯಾವಪ್ಪ ಸುಗೂರು(35), ಶಿವಮ್ಮ(33) ಮೃತ ದಂಪತಿ. ತಮಗೊಂದು ಸೂರು ಬೇಕೆಂದು ಈ ದಂಪತಿ ಕನಸು ಕಂಡಿದ್ದು, ಅದರಂತೆ ಮನೆ ನಿರ್ಮಿಸಲು ಹಗಲಿರುಳು ಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲು ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ಸಾವನ್ನಪ್ಪಿದ್ದಾರೆ.
ದ್ಯಾವಪ್ಪ ಹಾಗೂ ಶಿವಮ್ಮ ದಂಪತಿ ಮನೆ ಕಟ್ಟುವ ಕನಸು ಕಂಡಿದ್ದು, ಅದರಂತೆ ಹಣ ಹೊಂದಿಸಿ ಮನೆ ನಿರ್ಮಾಣ ಮಾಡಲು ಶುರು ಮಾಡಿದೆ. ಬಳಸಿ ತಾವೇ ಮನೆ ನಿರ್ಮಿಸಿಕೊಳ್ಳಲಾಗಿದೆ, ಅರ್ಧ ಮನೆ ಸಹ ಕಟ್ಟಲಾಗಿದೆ. ಆದರೆ, ಇಂದು (ಮಾರ್ಚ್ 09) ಮನೆ ಗೋಡೆ ಪ್ಲಾಸ್ಟರಿಂಗ್ ವೇಳೆ ದಂಪತಿ ಮೇಲೆ ಏಕಾಏಕಿ ಮೆಟ್ಟಿಲುಗಳ ಪಿಲ್ಲರ್ ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ದ್ಯಾವಪ್ಪ, ಶಿವಮ್ಮ ಕನಸಿನ ಮನೆಯಲ್ಲೇ ದುರಂತ ಅಂತ್ಯಕಂಡಿದ್ದಾರೆ.
ಇದನ್ನೂ ಓದಿ: ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು
ಮಾಹಿತಿ ತಿಳಿದು ಸ್ಥಳಕ್ಕೆ ಹಟ್ಟಿ ಭೇಟಿ ನೀಡಿ ಪರಿಶೀಲನೆ. ಇನ್ನು ದಂಪತಿಯ ಮೃತದೇಹವನ್ನು ಲಿಂಗಸೂರು ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.